ಅಂಕೋಲಾ: ಆಳ್ವಾಸ್ ಶಿಕ್ಷಣ ಸಂಸ್ಥೆಯ ವತಿಯಿಂದ ಅಂಕೋಲಾ-ಕಾರವಾರ ಘಟಕ ಉತ್ತರ ಕನ್ನಡ ಜಿಲ್ಲೆ ಆಶ್ರಯದಲ್ಲಿ ಫೆಬ್ರವರಿ 18 ಬುಧವಾರ ಆಳ್ವಾಸ್ ನುಡಿಸಿರಿ ವಿರಾಸತ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ತಾಲೂಕಿನ ಜೈ ಹಿಂದ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಹಿಂದಿ ಉಪನ್ಯಾಸಕ ಡಾ.ದತ್ತಾತ್ರೇಯ ಹೆಗಡೆ ಹೇಳಿದರು.

ಅವರು ತಾಲೂಕಿನ ಖಾಸಗಿ ಹೋಟೆಲ್ ಒಂದರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾನಾಡಿ ಕನ್ನಡ ನಾಡಿನ ಸಾಂಸ್ಕೃತಿಕ ಕಲಾ ವೈಭವವನ್ನು ಸಾರುವ ನಿಟ್ಟಿನಲ್ಲಿ 350 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಂದ ವಿವಿಧ ಕಲಾ ಪ್ರದರ್ಶನ ನೆರವೇರಲಿದ್ದು, ತೆಂಕು ಮತ್ತು ಬಡಗು ಶೈಲಿಯ ಯಕ್ಷಗಾನ ಪ್ರದರ್ಶನ ಹಾಗೂ ದೇಶದ ಪ್ರಮುಖ ಸಾಂಸ್ಕೃತಿಕ ಲೋಕವನ್ನು ಅಂಕೋಲೆಯ ಜನತೆಯ ಮುಂದೆ ತೆರೆದುಕೊಳ್ಳಲಿದೆ, ನಮ್ಮ ಆಳ್ವಾಸ್ ಸಾಂಸ್ಕೃತಿಕ ಕಲಾ ತಂಡವು 600 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಂದ ಕೂಡಿದ್ದು ನಮ್ಮ ಕಲಾ ಪ್ರದರ್ಶನಕ್ಕೆ ರಾಷ್ಟ್ರಾದ್ಯಂತ ಬೇಡಿಕೆಯಿದೆ.

ಭಾರತೀಯ ಸಂಸ್ಕೃತಿಯ ವೈಭವವನ್ನು ಯುವಜನತೆಗೆ ಮನಮುಟ್ಟುವಂತೆ ಪ್ರದರ್ಶನ ಹಾಗೂ ಇಂದಿನ ಯುವಜನತೆಗೆ ಸಾಂಸ್ಕೃತಿಕ ಮಾರ್ಗದರ್ಶನ ನೀಡಿ, ದುಶ್ಚಟಗಳಿಗೆ ದಾಸರಾಗುತ್ತಿರುವ ಯುವಪೀಳಿಗೆಯಲ್ಲಿಯ ಪಿಡುಗನ್ನು ಸಂಪೂರ್ಣವಾಗಿ ತೊಡೆದುಹಾಕುವ ನಿಟ್ಟಿನಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ.ಮೋಹನ್ ಆಳ್ವಾ ಮುಂದಾಗಿದ್ದು,ಯುವಜನತೆಯ ಗಮನ ಬೆರೆತ್ತ ಸೆಳೆಯಲು ಈ ಕಾರ್ಯಕ್ರಮವನ್ನು ಆಯೋಜಿಸಲು ಮುಂದಾಗಿದೆ ಎಂದರು.

ಸಂಘಟನೆಯ ಪ್ರಮುಖ ರಾಮಚಂದ್ರ ಹೆಗಡೆ ಮಾತನಾಡಿ ನಾಡಿನ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಗಲಿರುವ ಆಳ್ವಾಸ್ ನುಡಿಸಿರಿ ವಿರಾಸತ್ ಸಾಂಸ್ಕೃತಿಕ ವೈಭವದ ಕುರಿತು ಪ್ರಾಸ್ತಾವಿಕವಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ನ್ಯಾಯಾವಾದಿಗಳಾದ ವಿನೋದ ಶಾನಬಾಗ್,ನಾಗಾನಂದ ಬಂಟ್,ಉಮೇಶ ನಾಯ್ಕ,ಗೋಪು ನಾಯಕ ಅಡ್ಲೂರ್, ನಿತ್ಯಾನಂದ ಗಾಂವ್ಕರ,ಬಿಂದೇಶ ನಾಯಕ,ಬಾಲಚಂದ್ರ ಶೆಟ್ಟಿ,ಶಂಕರ್ ಗೌಡ, ಸಂಜು ಕುಚನಾಡ, ವಿ ಎಸ್ ಭಟ್, ಆಳ್ವಾಸ್ ಶಿಕ್ಷಣ ಸಂಸ್ಥೆಯ ಪ್ರಮುಖರಾದ ಗಣಪತಿ ನಾಯಕ,ರಮೇಶ ಗುನಗಾ, ಸದಾನಂದ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.


