Spread the love

ಕಾಣಕೋಣ: ಗೋವಾ ಪೋಲೆಂ ಕಡಲತೀರದಲ್ಲಿ ಈ ಅಲೆಗಳ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದ ಡಿಪ್ಲೊಮಾ ವಿದ್ಯಾರ್ಥಿಯ ಶವ ಎರಡು ದಿನಗಳ ಬಳಿಕ ಪೋಲೆಂ ಕಡಲತೀರದಲ್ಲಿ ಬಾನುವಾರ ಬೆಳಿಗ್ಗೆ ದೊರೆತಿದ್ದು ಮರಣೋತ್ತರ ಪರೀಕ್ಷೆಗೆ ಮಡಗಾಂವ್ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಹೌದು…ಕಾರವಾರದ ಸರಕಾರಿ ಡಿಪ್ಲೊಮಾ ಕಾಲೇಜಿನ ಇಲೆಕ್ಟ್ರಿಕಲ್ ವಿಭಾಗದಲ್ಲಿ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಅಂಕೋಲಾ ತಾಲೂಕಿನ ಬೆಳಾಬಂದರ್ ಗ್ರಾಮದ ವಿಘ್ನೇಶ್ವರ ಪ್ರಕಾಶ ನಾಯ್ಕ(20) ಹಾಗೂ ಅಂಕೋಲಾ ಮೂಲದ ಇರ್ವರು ಗೆಳೆಯರೊಂದಿಗೆ ಶುಕ್ರವಾರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಕರ್ನಾಟಕ ಗೋವಾ ಗಡಿ ಬಾಗವಾದ ಪೋಲೆಂ ಕಡಲತೀರಕ್ಕೆ ಈಜಲು ತೆರಳಿದ್ದರು,ಈ ವೇಳೆಯಲ್ಲಿ ಅಲೆಗಳ ರಭಸಕ್ಕೆ ಸಿಲುಕಿ ವಿದ್ಯಾರ್ಥಿ ವಿಘ್ನೇಶ್ವರ ನಾಯ್ಕ ನಾಪತ್ತೆಯಾಗಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಗೋವಾ ಪೊಲೀಸರು  ಹ್ಯಾಲಿಕ್ರಾಪ್ಟರ್ ಮೂಲಕ ಆತನ ಮೃತದೇಹಕ್ಕೆ ನಿರಂತರ  ಶೋಧ ಕಾರ್ಯ ಆರಂಭಿಸಿದ್ದರು. ಎರಡು ದಿನಗಳ ಬಳಿಕ ಮೃತದೇಹ ಪತ್ತೆಯಾಗಿದ್ದು ಮೃತರ ಗ್ರಾಮದಲ್ಲಿ ಶೋಕದ ವಾತಾವರಣ ಏರ್ಪಟ್ಟಿದೆ.

Leave a Reply

Your email address will not be published. Required fields are marked *