Spread the love

ಕುಮಟಾ : ತಾಲೂಕಿನ ಬೆಟ್ಕುಳಿಯ ಶ್ರೀ ಓಂ ಶಕ್ತಿ ಯುವಕ ಸಂಘದ ವತಿಯಿಂದ 25ನೇ ವರ್ಷದ ಬೆಳ್ಳಿಹಬ್ಬದ ಅಂಗವಾಗಿ ‘ಕಡಲ ಉತ್ಸವ 2026’ ಕಾರ್ಯಕ್ರಮವನ್ನು ಮಾರ್ಚ್ 5 ಮತ್ತು 6 ರಂದು ಅದ್ದೂರಿಯಿಂದ ಆಚರಿಸಲಾಗುವುದು ಎಂದು ಶ್ರೀ ಓಂ ಶಕ್ತಿ ಯುವಕ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

ಎರಡು ದಿನಗಳ ಕಾಲ ನಡೆಯಲಿರುವ ಸಾಂಸ್ಕೃತಿಕ ಮಹೋತ್ಸವದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ. ಚಲನಚಿತ್ರ ಹಿನ್ನೆಲೆ ಗಾಯಕಿ ಎದೆತುಂಬಿ ಹಾಡುವೆನು ಕಾರ್ಯಕ್ರಮದ ನಾಧೀರಾ ಬಾನು, ಗಾಯಕ ರಾಕೇಶ್ ದಿಲ್ಸೆ, ಗಾಯಕಿ ಶ್ರೀಜಲ್ ಪೂಜಾರಿ, ಸೇರಿದಂತೆ ಸ್ಥಳೀಯ ಕಲಾವಿದರ ತಂಡವು ಈ ಉತ್ಸವದಲ್ಲಿ ಬಾಗವಹಿಸಲಿದ್ದು, ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ ಎನ್ನಲಾಗಿದೆ.

ಕುಮಟಾ ತಾಲೂಕಿನ ಬೆಟ್ಕುಳಿಯ ಶ್ರೀ ಓಂ ಶಕ್ತಿ ಮೈದಾನದಲ್ಲಿ ನಡೆಯಲಿರುವ ಈ ಉತ್ಸವವು ಸ್ಥಳೀಯ ಜನತೆಗೆ ಮಾತ್ರವಲ್ಲದೆ ಸಮೀಪದ ಗ್ರಾಮಗಳ ಜನರಿಗೂ ಆಕರ್ಷಣೆಯ ಕೇಂದ್ರವಾಗಲಿದೆ. ಸಮುದ್ರ ತೀರದ ನೈಸರ್ಗಿಕ ಸೌಂದರ್ಯದ ನಡುವೆ ನಡೆಯುವ ಈ ಕಾರ್ಯಕ್ರಮಕ್ಕೆ ಭಾರಿ ಪ್ರಮಾಣದ ಜನಸಮೂಹ ಸೇರುವ ನಿರೀಕ್ಷೆ ಇದೆ ಎನ್ನಲಾಗಿದೆ.

ಮಾರ್ಚ್ 5 ರ ರಾತ್ರಿ ಸಮಾರಂಭವನ್ನು  ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಉದ್ಘಾಟಿಸಲಿದ್ದು, ಬೆಟ್ಕುಳಿ ಗ್ರಾ.ಪಂ ನಿಕಟ ಪೂರ್ವ ಅಧ್ಯಕ್ಷ  ಸಂತೋಷ್ ವಿ. ಹರಿಕಾಂತ, ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಕುಮಟಾ ವಿಧಾನಸಭಾ  ಶಾಸಕ  ದಿನಕರ ಕೆ. ಶೆಟ್ಟಿ, ಉತ್ತರ ಕನ್ನಡ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸೂರಜ್ ನಾಯ್ಕ ಸೋನಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ, ತೊರ್ಕೆ ಗ್ರಾಪಂ ನಿಕಟ ಪೂರ್ವ ಅಧ್ಯಕ್ಷ ಆನಂದ ಕವರಿ, ಹರಿಕಾಂತ ಸಮಾಜದ ಅಧ್ಯಕ್ಷ  ಲಕ್ಷ್ಮಣ  ಹರಿಕಾಂತ, ಪತ್ರಕರ್ತರ ಸಂಘದ ಜಿಲ್ಲಾ ಸಮಿತಿ ಸದಸ್ಯ  ಅರುಣ ಶೆಟ್ಟಿ, ಉದ್ಯಮಿ ಶೇಖರ ಹರಿಕಂತ್ರ, ಶಿವರಾಮ ಹರಿಕಂತ, ಆನಂದು ಹರಿಕಂತ, ದಾಮೋದರ ಮೂಡಂಗಿ, ಹಾಗೂ ಸಂಘದ ಅಧ್ಯಕ್ಷ ಮಾರುತಿ ಹರಿಕಂತ, ಉಪಾಧ್ಯಕ್ಷ  ಕಮಲಾಕರ ವಿ. ಹರಿಕಂತ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

ಸಮಾರೋಪ ಸಮಾರಂಭದ  ಅಧ್ಯಕ್ಷತೆಯನ್ನು ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜಗೋಪಾಲ ಅಡಿ ಗುರೂಜಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಷ್ಮಾ ರಾಜಗೋಪಾಲ, ಮಾಜಿ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ, ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ಸುಜಾತಾ ಗಾಂವಕರ ಉತ್ತರ ಕನ್ನಡ ಜಿಲ್ಲಾ ಮೀನುಗಾರ ಫೆಡರೇಶನ್ ಸದಸ್ಯ ಮಹೇಶ್ ಮೂಡಂಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಜಗದೀಶ್ ನಾಯಕ್ ಮೊಗಟಾ, ಕರವೇ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ, ಉದ್ದಿಮೆದಾರ ಮಂಜುನಾಥ ನಾಯ್ಕ, ಸುಧಾಕರ ತಾಂಡೇಲ,ಉತ್ತರ ಕನ್ನಡ ಗ್ರಾಮಒಕ್ಕಲ ಯುವ ಬಳಗದ ಅಧ್ಯಕ್ಷ ವಿನಾಯಕ ಪಟಗಾರ, ಮುರುಡೇಶ್ವರ ನೇತ್ರಾಣಿ ಅಡ್ವೆಂಚರ್ ಮಾಲಕ ಗಣೇಶ್ ನೇತ್ರಾಣಿ ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ.

ಶ್ರೀ ಓಂ ಶಕ್ತಿ ಯುವಕ ಸಂಘವು ಕಳೆದ 25 ವರ್ಷಗಳಿಂದ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಮತ್ತು ಕ್ರೀಡಾ  ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಈ ವರ್ಷ ಬೆಳ್ಳಿ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದೆ. ಈ ಅಂಗವಾಗಿ ಕಡಲ ಉತ್ಸವವನ್ನು ವಿಶೇಷ ರೀತಿಯಲ್ಲಿ ರೂಪಿಸಲಾಗಿದೆ. ಸಂಘದ ಕಾರ್ಯಕರ್ತರು ಕಾರ್ಯಕ್ರಮದ ಯಶಸ್ಸಿಗಾಗಿ ಹಲವು ದಿನಗಳಿಂದ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.ಉತ್ಸವದ ಅಂಗವಾಗಿ ಮೈದಾನದಲ್ಲಿ ವಿಶೇಷ ಅಲಂಕಾರ, ಬೆಳಕು ಅಲಂಕಾರ, ವೇದಿಕೆ ವಿನ್ಯಾಸ ಹಾಗೂ ಸಾರ್ವಜನಿಕರಿಗಾಗಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಭದ್ರತೆ ಹಾಗೂ ವಾಹನ ನಿಲುಗಡೆ ವ್ಯವಸ್ಥೆಯನ್ನೂ ಸಮರ್ಪಕವಾಗಿ ಕಲ್ಪಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *