ಅಂಕೋಲಾ:ನಮ್ಮ ಜೀವನದ ಆಯ್ಕೆ ನಮ್ಮದೆಯಾಗಿದ್ದಾರೆ ಮಾತ್ರ ಜೀವನವನ್ನು ಉಜ್ವಲಗೊಳಿಸಲು ಸಾಧ್ಯ ಎಂದು ಟಿವಿ9 ಉತ್ತರ ಕನ್ನಡ ಜಿಲ್ಲಾ ವರದಿಗಾರ ಸೂರಜ್ ಉತ್ತುರೆ ಹೇಳಿದರು.

ಪೂರ್ಣಪ್ರಜ್ಞಾ ಕರುಣ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಶಿಕ್ಷಣವು ಉತ್ತಮ ಅವಕಾಶವನ್ನು ಕಲ್ಪಿಸಿಕೊಳ್ಳಲು ಸಹಕರಿಸುತ್ತದೆ.ಇಂದಿನ ದಿನಗಳಲ್ಲಿ ಯಾವುದೇ ಕೆಲಸದ ಮದ್ಯೆ ಭೇದಬಾವಗಳಿಲ್ಲ ಪ್ರತಿಯೊಂದು ಕೆಲಸಕ್ಕೂ ಅದರದ್ದೆಯಾದ್ದಂತ ಮನ್ನಣೆಯಿದೆ.ಪ್ರಸಕ್ತ ದಿನಗಳಲ್ಲಿ ಎಲ್ಲಾ ವಿಭಾಗದಲ್ಲೂ ಸ್ಪರ್ದೆಯಿದೆ ಆದ್ದರಿಂದ ನಮ್ಮ ಓದಿನಲ್ಲಿ ನಮ್ಮ ಜೀವನವನ್ನು ಕಂಡುಕೊಳ್ಳುತ್ತಾ ಮುಂದೆ ಸಾಗಬೇಕು, ನಮ್ಮ ಜೀವನದಲ್ಲಿ ನಮಗೆ ತಕ್ಕಂತ ಉದ್ಯೋಗವನ್ನು ಹುಡುಕಿಕೊಳ್ಳಬೇಕು ಹೊರತು ಯಾರದ್ದೋ ಒತ್ತಡಕ್ಕೆ ಒಳಗಾಗಿ ನಮ್ಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಹಾಗೂ ನ್ಯಾಯವಾದಿ ಆಕಾಶ ನಾರ್ವೆಕರ್ ಮಾತನಾಡಿ ಮಾನವನ ಜೀವಿತಾವಧಿಯಲ್ಲಿ ವಿದ್ಯಾರ್ಥಿಗಳ ಜೀವನ ತುಂಬಾ ಸರಳವಾಗಿದ್ದು, ವಿದ್ಯಾರ್ಥಿ ಜೀವನದ ಬಳಿಕ ಕಠಿಣತೆಯ ಜೀವನ ಆರಂಭವಾಗಲಿದೆ,ಇಲ್ಲಿಯವರೆಗೆ ಪಡೆದ ಶಿಕ್ಷಣದಿಂದ ನಿಮ್ಮ ಕಠಿಣತೆಯ ದಾರಿಯನ್ನು ಸುಗಮಗೊಳಿಸಿಕೊಳ್ಳಿ, ನಿಮ್ಮ ಸಾಧನೆಯ ಗುರಿಯನ್ನು ಇಂದೇ ಮನದಟ್ಟು ಮಾಡಿಕೊಂಡು ಮಹತ್ತರ ಹೆಜ್ಜೆಯಿಡಿ. ನಿಮ್ಮ ನಿಮ್ಮ ಪರಿಣಿತಿಗೆ ತಕ್ಕಂತೆ ನಿಮ್ಮ ಜೀವನದ ದಾರಿಯನ್ನು ಹುಡುಕಿಕೊಳ್ಳಿ, ಇಂದಿನ ದಿನಗಳಲ್ಲಿ ತಂತ್ರಜ್ಞಾನ ಉತ್ತಮವಾಗಿ ಬೆಳೆದಿದ್ದು,ಅದನ್ನು ಸದುಪಯೋಗ ಪಡೆದುಕೊಳ್ಳಿ, ನಾವು ಸದೃಢ ಮನಸ್ಸಿನಿಂದ ಮಾಡುವ ಛಲವೆ ನಮ್ಮನ್ನು ಉನ್ನತ ಹುದ್ದೆಗೆ ಏರಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಶಾಂತ್ ನಾಯಕ ಮಾತನಾಡಿ ಪುನೀತ್ ರಾಜಕುಮಾರ್ ಜನ್ಮದಿನವನ್ನು ಸರಕಾರ ಸ್ಫೂರ್ತಿ ದಿನವೆಂದು ಘೋಷಿಸಿದೆ,ಇಂತಹ ಪುಣ್ಯದಿನವೇ ನಮ್ಮ ಕಾಲೇಜಿನಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಂಡಿರುವುದು ವಿಶೇಷವಾಗಿದೆ.ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಗಳ ಮೊರೆಹೋಗುತ್ತಿದ್ದು,ಅದರಿಂದ ಸದುಪಯೋಗಕ್ಕಿಂತ ದೂರಪಯೋಗಕ್ಕೆ ಹೆಚ್ಚಿನದಾಗಿ ಬಳಕೆಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ನಿಮ್ಮ ಆಯ್ಕೆಯನ್ನೇ ಬಲಪಡಿಸಿ, ನೀವು ಯಾವುದೇ ವಿಭಾಗವನ್ನು ಆಯ್ಕೆಮಾಡಿಕೊಂಡರು ಸಹ ಆ ವಿಭಾಗದ ಮಹತ್ತರದ ಸ್ಥಾನವನ್ನು ಅಲಂಕರಿಸುವಂತೆ ಸದೃಢ ಮನಸ್ಸನ್ನು ಹೊಂದಿರಬೇಕು.ಭವಿಷ್ಯದ ಹಿತದೃಷ್ಟಿಯಿಂದ ಕಾಳಜೀವಹಿಸಿ ಎಂದು ಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತಾನಾಡಿದ ಉಪನ್ಯಾಸಕಿ ಜ್ಯೋತಿ ನಾಯ್ಕ ಬೀಳ್ಕೊಡುಗೆ ಎನ್ನುವುದು ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ನಡುವಿನ ಬಾವನಾತ್ಮಕ ಸಂಬಂಧವಾಗಿದೆ. ಕಳೆದೆರಡು ವರ್ಷಗಳಿಂದ ವಿದ್ಯಾರ್ಥಿಗಳ ಜೀವನವನ್ನು ರೂಪಿಸಲು ಸಿಹಿಯಾಗಿ ಹೇಳಿ,ಕಹಿಯಾಗಿ ತಿದ್ದಿರುವ ಹಲವಾರು ಸಂದರ್ಭಗಳು ಎದುರಾಗಿವೆ ಅದನ್ನೆಲ್ಲ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ನಿಮ್ಮ ಜೀವನದ ಗುರಿಯತ್ತ ಸಾಗಿ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ನಾಣ್ನುಡಿಯಂತೆ ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸಿದೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ,ಮುಂದಿನ ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೀರ್ತಿ ನಾಯಕ, ಪ್ರಾಂಶುಪಾಲರಾದ ಮುಕ್ತಾ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಕಾಲೇಜಿನ ಎರಡು ವರ್ಷಗಳ ಪಯಣದ ಕುರಿತು ವಿದ್ಯಾರ್ಥಿಗಳಾದ ಸುಕೃತಿ ನಾಯ್ಕ, ಅಮಿತ್ ಶೇಖ್, ವೈಷ್ಣವಿ ನಾಯ್ಕ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಸಂಜಿತಾ ತಂಡ ಪ್ರಾರ್ಥನೆ, ವಿದ್ಯಾರ್ಥಿ ಧನಲಕ್ಷ್ಮೀ ಸ್ವಾಗತಿಸಿದರು,ವಿದ್ಯಾರ್ಥಿ ನಂದಿತಾ ಮಹಾಲೆ ವಂದಿಸಿದರು.ಕಾರ್ಯಕ್ರಮವನ್ನು ವಿದ್ಯಾರ್ಥಿ ಬಿಬಿ ಆಯೇಷಾ ನಿರೂಪಿಸಿದರು.


