ಕಾರವಾರ: ಮುಂಗಾರು ಮಳೆ ಪ್ರಾರಂಭವಾಗುತ್ತಿದ್ದಂತೆ,ಉತ್ತರ ಕನ್ನಡ ಜಿಲ್ಲೆಯ ಹಲವು ಗುಡ್ಡಗಳ ತಪ್ಪಲಿನಲ್ಲಿ ಇನ್ಮುಂದೆ ಸಾರ್ವಜನಿಕರು ವಾಹನ ಪಾರ್ಕ್ ಮಾಡುವಂತಿಲ್ಲ ಹಾಗೂ ಅಲ್ಲಿ ತೆರಳುವಂತಿಲ್ಲ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಆದೇಶ ಹೊರಡಿಸಿದ್ದಾರೆ.

ಹೌದು… ಕಳೆದ ವರ್ಷ ಸಂಭವಿಸಿದ ಜಿಲ್ಲೆ ಕಂಡರಿಯದಂತ ಶಿರೂರು ಗುಡ್ಡ ಕುಸಿತ ದುರಂತ ಅತ್ಯಂತ ಭೀಕರವಾಗಿ 11 ಜನರ ಪ್ರಾಣವನ್ನು ಕಳೆದುಕೊಂಡಿತ್ತು, ಈ ಬಾಗ ಸೇರಿದಂತೆ ಜಿಲ್ಲೆಯ 150 ಕ್ಕೂ ಹೆಚ್ಚಿನ ಗುಡ್ಡ ಕುಸಿತವಾಗುವಂತಹ ಸ್ಥಳವನ್ನು ಗುರುತಿಸಿ ಅಲ್ಲಿ ಯಾರು ತೆರಳದಂತೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.


Leave a Reply