Spread the love

ಅಂಕೋಲಾ: ಬ್ಯಾಂಕ್ ಆಫ್ ಬರೋಡ, ಸಹಕಾರಿ ಸಂಘ ಹಾಗೂ ಅಂಗಡಿಗಳಲ್ಲಿ ಕಳ್ಳತನ ಮಾಡಿ ಸ್ಥಳೀಯರ ನಿದ್ದೆಗೆಡಿಸಿದ್ದ ಕುಖ್ಯಾತ ಕಳ್ಳರ ಗ್ಯಾಂಗ್ ಅನ್ನು ಹೆಡೆಮುರಿಕಟ್ಟುವಲ್ಲಿ ಅಂಕೋಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೌದು… ತಾಲೂಕಿನಾದ್ಯಂತ ಹಲವಾರು ಕಳ್ಳತನ ಪ್ರಕರಣದಲ್ಲಿ ಬಾಗಿಯಾಗಿ,ಜನಸಾಮಾನ್ಯರ ನಿದ್ದೆಗೆಡೆಸಿದ್ದ ತಾಲ್ಲೂಕಿನ ಹಳವಳ್ಳಿ ಮೂಲದ ವಿನಾಯಕ ಕಮಲಾಕರ ಸಿದ್ದಿ(19), ನಾಗೇಶ ಸುಬ್ರಾಯ ಸಿದ್ದಿ(24) ದುಗ್ಗದಮನೆಯ ರಾಜೇಶ ಲಕ್ಷ್ಮಣ ಸಿದ್ದಿ (27) ಮಳಲಗಾಂ  ಪ್ರಶಾಂತ ಅನಂತ ಸಿದ್ದಿ(19) ಕಲ್ಲೇಶ್ವರದ ನಿಲೇಶ ಗಣಪತಿ ಸಿದ್ದಿ (38)  ಎನ್ನುವವರನ್ನು ಅಂಕೋಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ತಿಂಗಳುಗಳ ಹಿಂದೆಯಷ್ಟೇ ರಾಷ್ಟ್ರೀಯ ಹೆದ್ದಾರಿ 52 ರ ಸುಂಕಸಾಳ ಬಳಿ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಕಳ್ಳತನಕ್ಕೆ ಮುಂದಾಗಿದ್ದು,ಬ್ಯಾಂಕಿನ ಗೋಡೆಯೊಡೆದು ವಿಫಲ ಯತ್ನ ನಡೆಸಿದ್ದರು ಈ ಕುರಿತು ಶಾಖಾಧಿಕಾರಿ ಸುಮಿತ್ ನಾಯ್ಕ ಅಂಕೋಲಾ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಹಾಗೆಯೇ ಡೊಂಗ್ರಿ ಗ್ರಾಪಂ ವ್ಯಾಪ್ತಿಯ ಹೆಗ್ಗಾರದ ಕಲ್ಪತರು ವಿವಿಧೋದ್ದೇಶಗಳ ಸಹಕಾರಿ ಸಂಘ ಹಾಗೂ ಕನಕನಹಳ್ಳಿಯ ಅನ್ನಪೂರ್ಣ ಮಾರ್ಟ್ ಕಿರಾಣಿ ಅಂಗಡಿಯಲ್ಲಿ ಕಳ್ಳತನವಾಗಿರುವ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಕಾರ್ಯಪೃವೃತ್ತರಾದ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎನ್ ಅವರ ಮಾರ್ಗದರ್ಶನದಂತೆ ಅಂಕೋಲಾ ಪೋಲಿಸ್ ನಿರೀಕ್ಷಕ ಚಂದ್ರಶೇಖರ್ ಮಠಪತಿ ಪ್ರತ್ಯಕ ತಂಡವನ್ನು ರಚಿಸಿದ್ದರು,ತಕ್ಷಣ ಕಳ್ಳರ ಪತ್ತೆಗೆ ಮುಂದಾಗಿದ್ದ ಪೊಲೀಸರು ತೀವೃ ಕಾರ್ಯಾಚರಣೆಗೆ ಇಳಿದಿದ್ದರಿಂದ ಆರೋಪಿಗಳ ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿತರಿಂದ ಮೂರು ಬೈಕುಗಳನ್ನು ಪೊಲೀಸರು ವಶಕ್ಕೆ ಪಡೆಡಿದ್ದು, ಕಳ್ಳತನದ ರೂವಾರಿ ನಾರಾಯಣ ಸಿದ್ಧಿ ತಲೆಮರೆಸಿಕೊಂಡಿದ್ದು,ಆತನಿಗಾಗಿ ಶೋಧ ಮುಂದುವರೆದಿದೆ ಎನ್ನಲಾಗಿದೆ.

ಗ್ರಾಮಸ್ಥರಿಗೆ ಧೈರ್ಯ ತುಂಬುತ್ತಿರುವ ಎಸ್ಪಿ ದೀಪನ್ ಎಂ ಎನ್

ದಟ್ಟಾರಣ್ಯದಲ್ಲಿ ಕೂಂಬಿಂಗ್!

ರಾಮನಗುಳಿ,ಗುಳ್ಳಾಪುರ ದಟ್ಟಡವಿಯಲ್ಲಿ ಆರೋಪಿಗಳು ತಲೆಮರೆಸಿಕೊಂಡಿದ್ದ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಪೊಲೀಸರು ಬೆಟ್ಟದ ಹಾದಿ ಹಿಡಿದಿದ್ದರು, ಕಾಡು ಪ್ರಾಣಿಗಳು ತುಂಬಿರುವ ಅರಣ್ಯ ಪ್ರದೇಶದಲ್ಲಿ ಪೊಲೀಸರು ಸತತ ಕಾರ್ಯಾಚರಣೆ ಕೈಗೊಂಡಿದ್ದರು, ಆರೋಪಿಗಳು ಮತ್ತಷ್ಟು ಎಚ್ಚೆತ್ತುಕೊಂಡಿದ್ದರಿಂದ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದರು, ಒತ್ತಡಗಳ ಮದ್ಯೆ ಅರಣ್ಯ ಪ್ರದೇಶದಲ್ಲಿ ನಿರಂತರ ಶೋಧ  ಕಾರ್ಯಾಚರಣೆ ನಡೆಸಿ ಕಳ್ಳರನ್ನು ಪತ್ತೆಹಚ್ಚಲು ಮುಂದಾಗಿ ಯಶಸ್ವಿಯಾಗಿದ್ದಾರೆ.ಈ ಕಾರ್ಯಾಚರಣೆಯನ್ನು ವೀಕ್ಷಿಸಲು ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ ಸಹ ಅರಣ್ಯ ಪ್ರದೇಶಕ್ಕೆ ಖುದ್ದು ಭೇಟಿ ನೀಡಿ ವಾಸ್ತವತೆ ಅರಿತು ಮಾತನಾಡಿದ ಅವರು ಅರಣ್ಯ ಪ್ರದೇಶದಲ್ಲಿ ಅಡಗಿ ಕುಳಿತಿರುವ ಕಳ್ಳತನದ ಪ್ರಮುಖ ಆರೋಪಿ ನಾರಾಯಣ ಸಿದ್ಧಿ ಪತ್ತೆಗೆ ಶಸ್ತ್ರಾಸ್ತ್ರ ಸಹಿತ ವಿಶೇಷ ತಂಡವನ್ನು ರಚಿಸಿ ದಟ್ಟಾರಣ್ಯದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುವುದು ಎಂದಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಅಂಕೋಲಾ ಠಾಣೆಯ ಪಿಎಸೈ ವಿಶ್ವನಾಥ್ ನಿಂಗೊಳ್ಳಿ, ಪೊಲೀಸ್‌ ಸಿಬ್ಬಂದಿಗಳಾದ ಮಹಾದೇವ ಸಿದ್ದಿ, ಪ್ರಶಾಂತ ನಾಯ್ಕ, ಮಹಾಬಲೇಶ್ವರ ನಾಯಕ, ಆಸಿಫ್ ಕುಂಕೂರು, ಶಿವಾನಂದ ನಾಗರದಿನ್ನಿ, ಹೊನ್ನಪ್ಪ ವಗ್ಗಣನವರ್, ರಾಯೀಸ ಬಾಗವಾನ್, ವಿಜಯ್ ಟಿ, ಮಾರುತಿ ಕೆ. ಎಚ್. ಉದಯ ಗುನಗಾ ಮತ್ತು ಬಬನ್ ಕದಂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು ಸಿಬ್ಬಂದಿಗಳ ಪ್ರಯತ್ನಕ್ಕೆ ಪೊಲೀಸ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *