Spread the love

ಅಂಕೋಲಾ: ನಾವು ಯಾವುದೇ ಕ್ಷೇತ್ರದಲ್ಲಿರಲಿ ಎಂತಹ ಅದ್ಭುತ ಸಾಧನೆಗೈದರು ಸಹ  ಕುಟುಂಬದೊಂದಿಗೆ ನಮ್ಮ ಭಾಂದವ್ಯವನ್ನು ಎಂದಿಗೂ ಮರೆಯಬಾರದು ಅದು ಶಾಶ್ವತವಾಗಿರುವ ಜೊತೆಗೆ ಸಂಬಂಧಗಳ ಸಂಪಾದನೆಯೂ ಅತ್ಯಗತ್ಯ ಎಂದು ಚಲನಚಿತ್ರ ನಟಿ ಹಾಗೂ ಭುವನಂ ಪೌಂಡೇಶನ್ ಸಂಸ್ಥಾಪಕ ಅಧ್ಯಕ್ಷೆ ಹರ್ಷಿಕಾ ಪೂಣಚ್ಚ(Harshika poonachha) ಅಭಿಪ್ರಾಯ ಪಟ್ಟರು.

ಅವರು ಗಾಂವಕರ ಮೆಮೋರಿಯಲ್ ಪೌಂಡೇಶನ್ ಇವರು ಆಯೋಜಿಸಿದ 13 ನೇ ವರ್ಷದ ಯುವ ಪತ್ರಿಭಾ ಪುರಸ್ಕಾರ ಹಾಗೂ ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆ ಮತ್ತು ಬಹುಮುಖಿ ಬೊಮ್ಮಯ್ಯ ರಾಕು ಗಾಂವಕರ ಪರಿಷ್ಕೃತ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ ಹಿರಿಯರು ನಮ್ಮ ಆಸ್ತಿ ಅವರನ್ನು ನಾವು ಎಂದಿಗೂ ನೋಯಿಸದೆ ಅವರಿಗೆ ಸಹಕರಿಸುತ್ತ ಬದುಕಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಪಾದಕ ಗಂಗಾಧರ ಹಿರೇಗುತ್ತಿ ಇಲ್ಲಿನ ಪೂರ್ವಜರು ನಡೆಸಿದ ವಿರೋಚಿತ ಸ್ವಾತಂತ್ರ್ಯ ಹೋರಾಟ ಸ್ಮರಣೀಯವಾದದ್ದು, ಇಲ್ಲಿಯ ಹೋರಾಟಗಾರರು ಯಾವುದೇ ಹಂತದಲ್ಲಿ ರಾಜೀಯಾಗದೆ ಚಳುವಳಿ ನಡೆಸಿದ ಪರಿ ಸ್ಮರಣೀಯವಾಗಿದೆ. ಸ್ವಾತಂತ್ರ್ಯ ಸೇನಾನಿ ಬೊಮ್ಮಯ್ಯ ಗಾಂವಕರ ಅವರ ನೆನಪಿನಲ್ಲಿ 13 ವರ್ಷಗಳಿಂದ ನಡೆಸಿಕೊಂಡು ಬಂದ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದರು.

ಉಪನ್ಯಾಸ ನೀಡಿದ ಡಾ.ರಣಜಿತ ನಾಯಕ ಮಾತನಾಡಿ. ನಮ್ಮ ದೇಶವು ಸೂಪರ್ ಪವರ್ ಆಗಬೇಕಾದರೆ ಯುವ ಜನರ ಜವಾಬ್ದಾರಿ ಅತ್ಯಂತ ಹೆಚ್ಚಿನದ್ದಾಗಿದೆ, ಈ ನಿಟ್ಟಿನಲ್ಲಿ ಹೊಸ ಆವಿಷ್ಕಾರ ಮತ್ತು ಪ್ರಯತ್ನಶೀಲರಾಗಬೇಕು ಎಂದರು.

ಪೌಂಡೇಶನ್ ಅಧ್ಯಕ್ಷರಾದ ದೇವಾನಂದ ಗಾಂವಕರ ಪ್ರಾಸ್ತವಿಕ ಮಾತನಾಡಿದರು.ಕವಯಿತ್ರಿ ಅಕ್ಷತಾ ಕೃಷ್ಣಮೂರ್ತಿ ಪುಸ್ತಕ ಪರಿಚಯಸಿದರು, ರಾಜಶ್ರೀ ನಾಯಕ ಅತಿಥಿಗಳನ್ನು ಪರಿಚಯಿಸಿದರು, ಚರಿತ್ರೆಯಲ್ಲಿ ಅಮರಳಾದ ವಾಸರೆಯ ಮಾಣುದೇವಿ ನಾಯಕ ಪರಿಚಯವನ್ನು ಚಂದ್ರಶೇಖರ ಟಿ ನಾಯಕ ಮಾಡಿದರು. ಮೀನಾಕ್ಷಿ ಪಾಟೀಲ್, ದಿಪ್ತಿ ಆರ್ಗೇಕರ ಕಾವ್ಯಗಾಯನ ನೆರವೇರಿಸಿದರು. ಪಿ.ಎಂ. ಹೈಸ್ಕೂಲ ವಿದ್ಯಾರ್ಥಿಗಳಾದ ವೇದತ್ರಿ ಗಣಪತಿ ತಾಂಡೇಲ್, ರಾಹುಲ್ ದೊಡ್ಡನಿ ಸಂವಿಧಾನ ಪೀಠಿಕೆ ವಾಚಿಸಿದರು.

ವಿವಿಧ ಕ್ಷೇತ್ರದ ಸಾಧಕರಾದ ಸಾಯಿನಾಥ ಮಾನು ಧವನ ಜೋಯಿಡಾ, ಮಹತ್ಮಾ ಮಂಜುನಾಥ ಜೈನ್ ಕುಮಟಾ, ಶಮೀತಾ ರಾಜಶೇಖರ ನಾಯ್ಕ ಮುಂಡಗೋಡ, ಆತ್ರೇಯ ರವೀಶ ಗಾಂವಕರ ಯಲ್ಲಾಪುರ, ಸಾಯಿಶ್ರೀ ಅರುಣ ನಾಯ್ಕ
ಕಾರವಾರ, ಯಶ್ವಂತ ಸೈಮನ್ ದೀವಟೆ ಹೊನ್ನಾವರ, ಎಸ್. ಅದಿತಿ ಅಂಕೋಲಾ, ನವನೀತ ನವೀನ ಕಾಮತ ದಾಂಡೇಲಿ, ಶಫಿಕಾ ಎಂ. ಕಾಗದ ಹಳಿಯಾಳ, ಕಲ್ಪನಾ ವಮಾಸ್ತಿ ಮೊಗೇರ ಭಟ್ಕಳ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪೃಥ್ವಿ ದೇವಾನಂದ ಗಾಂವಕರ, ಪುನೀತ ಮಾರುತಿ ನಾಯಕ ಇವರು ಯಕ್ಷನೃತ್ಯ ಪ್ರದರ್ಶಿಸಿದರು. ಆರ.ಜೆ.ಮಾಧುರಿ ಮೋನಪ್ಪಾ ನಾಯಕ ಬಾಸಗೋಡ,ಶಿಲ್ಪಾ ನಾಯ್ಕ ಕಾರವಾರ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಪೌಂಡೇಶನ್ ಪ್ರಮುಖರಾದ ಗಣಪತಿ ನಾಯಕ, ಗೋವಿಂದ್ರಾಯ ನಾಯಕ ಉಪಸ್ಥಿತರಿದ್ದರು.

ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು‌ ನನಗೆ ತುಂಬ ಹೆಮ್ಮೆಯಾಗಿದೆ. ಅಂಕೋಲೆಯ ಸಂಸ್ಕ್ರತಿ ಇಲ್ಲಿನ ಕನ್ನಡ ಭಾಷೆಯ ಹಿಡಿತ. ಇಲ್ಲಿನವರ ಆತಿಥ್ಯ ಇವುಗಳನ್ನು ಕಂಡು ಭಾವಪರವಶಳಾಗಿದ್ದೇನೆ. ಭಾಸಗೋಡದ ಗಾಂಧೀ ಮಂದಿರಕ್ಕೆ ಭೇಟಿ ನೀಡಿದ್ದು ಸಂತಸ ತಂದಿದೆ. ಗಾಂಧೀಜಿ ಭೇಟಿ ನೀಡಿದ ಸ್ಥಳ ಕಂಡು ಪುಳಕಿತಳಾಗಿದ್ದೇನೆ. ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ಜೀವನದ ಅವಿಸ್ಮರಣೀಯ ಸಂದರ್ಭ.

ಹರ್ಷಿಕಾ ಪೂಣಚ್ಚ

ಚಿತ್ರನಟಿ ಹಾಗೂ ಅಧ್ಯಕ್ಷರು, ಭುವನಂ ಫೌಂಡೇಶನ್.

ಕಳೆದ 13 ವರ್ಷಗಳಿಂದ ಈ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಲು ನಮ್ಮ ಕುಟುಂಬ ಹಾಗೂ ಸಹೃದಯಿ ಅಭಿಮಾನಿಗಳು ಕಾರಣರಾಗಿದ್ದಾರೆ. ಈಗಾಗಲೇ 112 ಪ್ರತಿಭೆಗಳನ್ನು ಗುರುತಿಸಿ ಗೌರವಿಸಲಾಗಿದೆ. ಭುವನಂ ಫೌಂಡೇಶನ್ ಮೂಲಕ ಸಾಮಾಜಿಕ ಹಾಗು ವಿಧಾಯಕ ಕಾರ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಕೋವಿಡ್ ಸಮಯದಲ್ಲಿ 16 ಜಿಲ್ಲೆಗಳಲ್ಲಿ 35 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಅಗತ್ಯ ಔಷಧಿ ಹಾಗು ಆಹಾರ ಕಿಟ್‌ಗಳನ್ನು ಪೂರೈಸಿ ಮದರ್ ಥೆರೆಸಾ ಪ್ರಶಸ್ತಿಗೆ ಪಾತ್ರರಾಗಿರುವ ಚಿತ್ರನಟಿ ಹರ್ಷಿಕಾ ಪೂಣಚ್ಚ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿರುವದು ಹೆಮ್ಮೆಯ ಸಂಗತಿಯಾಗಿದೆ.

 
ದೇವಾನಂದ ಗಾಂವಕರ, ಅಧ್ಯಕ್ಷರು, ಗಾಂವಕರ ಮೆಮೋರಿಯಲ್ ಫೌಂಡೇಶನ್. ಅಂಕೋಲಾ.

ಗಾಂಧಿ ಮಂದಿರಕ್ಕೆ ಭೇಟಿ ನೀಡಿದ ಪೂಣಚ್ಚ!

ಗಾಂವಕರ ಮೆಮೋರಿಯಲ್ ಪೌಂಡೇಶನ್ನಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಬಳಿಕ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸ್ವಾತಂತ್ರ್ಯ ಸಂಗ್ರಾಮದ ಗಂಡು ಮೆಟ್ಟಿನ ಸ್ಥಳ ಬಾಸಗೋಡ ಗ್ರಾಮದಲ್ಲಿರುವ ಮಹಾತ್ಮ ಗಾಂಧಿ ಮಂದಿರಕ್ಕೆ ಚಲನಚಿತ್ರ ನಟಿ ಹಾಗೂ ಭುವನಂ ಫೌಂಡೇಶನ್ ಸಂಚಾಲಕಿ ಹರ್ಷಿಕಾ ಪೂಣಚ್ಚ ರವರು ಭೇಟಿ ನೀಡಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಯೋಧರ ಮಗ ದೇವಾನಂದ ಬೊಮ್ಮಯ್ಯ ಗಾಂವಕರ ಹಾಗೂ ವನಿತಾ ದೇವಾನಂದ ಗಾಂವಕರ ಜೊತೆಗಿದ್ದರು.

Leave a Reply

Your email address will not be published. Required fields are marked *