
ಅಂಕೋಲಾ: ತಾಲೂಕಿನ ಗ್ರಾಮದೇವಿ,ಆರಾಧ್ಯ ದೈವ, ಭೂಮ್ತಾಯಿ ಶ್ರೀ ಶಾಂತಾದುರ್ಗೆಯ ಸುಪ್ರಸಿದ್ಧ ಐತಿಹಾಸಿಕ ಬಂಡಿಹಬ್ಬವು ಏಪ್ರಿಲ್ 30 ರಂದು ಅತ್ಯಂತ ಸಡಗರ-ಸಂಭ್ರಮದಿಂದ ಜರುಗಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯು ಅಧಿಕೃತ ಪ್ರಕಟಣೆ ಹೊರಡಿಸಿದೆ.
ಉತ್ಸವದ ವಿವಿಧ ಧಾರ್ಮಿಕ ವಿಧಿವಿಧಾನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಉತ್ಸವದ ಪ್ರಮುಖ ದಿನಾಂಕಗಳು:
* ಏಪ್ರಿಲ್ 14: ಆವಾರಿ ಶಾಸ್ತ್ರದೊಂದಿಗೆ ಹಬ್ಬದ ಸಿದ್ಧತೆಗಳಿಗೆ ಚಾಲನೆ ದೊರೆಯಲಿದೆ.
* ಏಪ್ರಿಲ್ 20 (ಅಕ್ಷಯ ತದಿಗೆ): ಅಕ್ಷಯ ತೃತೀಯದ ಶುಭ ದಿನದಂದು ದೇವಸ್ಥಾನದಲ್ಲಿ ‘ಶಾಸಿ’ ಹಾಕುವ ಮೂಲಕ ಅಧಿಕೃತವಾಗಿ ಹಬ್ಬದ ಕಾರ್ಯಕಲಾಪಗಳು ಶುರುವಾಗಲಿವೆ.
* ಏಪ್ರಿಲ್ 27: ದೇವರನ್ನು ಕರೆಯುವ ವಿಶೇಷ ಶಾಸ್ತ್ರ ನೆರವೇರಲಿದೆ.
* ಏಪ್ರಿಲ್ 30: ಮಹತ್ವದ ‘ಬಂಡಿಹಬ್ಬ’ ವಿಜೃಂಭಣೆಯಿಂದ ಜರುಗಲಿದೆ.
* ಮೇ 1: ಮರುದಿನ ‘ಕಿರು ಬಂಡಿಹಬ್ಬ’ ನಡೆಯುವ ಮೂಲಕ ಉತ್ಸವ ಸಂಪನ್ನಗೊಳ್ಳಲಿದೆ.

ಭಕ್ತರಲ್ಲಿ ಮನೆ ಮಾಡಿದ ಸಂಭ್ರಮ!
ಕರಾವಳಿಯ ಪ್ರಮುಖ ಜನಪದೀಯ ಹಾಗೂ ಧಾರ್ಮಿಕ ಉತ್ಸವಗಳಲ್ಲಿ ಒಂದಾದ ಶಾಂತಾದುರ್ಗೆಯ ಬಂಡಿಹಬ್ಬಕ್ಕೆ ಜಿಲ್ಲೆಯಾದ್ಯಂತ ಸಾವಿರಾರು ಭಕ್ತರು ಆಗಮಿಸಲಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸ್ಥಳೀಯರು ಸಕಲ ಸಿದ್ಧತೆಗಳನ್ನು ಕೈಗೊಳ್ಳುತ್ತಿದ್ದಾರೆ.”ನಾಡಿನಾದ್ಯಂತ ಇರುವ ಭಕ್ತಾದಿಗಳು ಈ ಪುಣ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕು,” ಎಂದು ಆಡಳಿತ ಮಂಡಳಿ ವಿನಂತಿಸಿದೆ.


