Category: Ankola

ಬಾರಿ ಮಳೆಗೆ ಹೆದ್ದಾರಿಯಲ್ಲಿ ಉರುಳಿದ ಬೃಹದಾಕಾರದ ಮರ; ಸಂಚಾರ ಅಸ್ತವ್ಯಸ್ತ.

ಅಂಕೋಲಾ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಹಿಲ್ಲೂರು ಗ್ರಾಪಂ ವ್ಯಾಪ್ತಿಯ ರಾಜ್ಯ ಹೆದ್ದಾರಿಯಲ್ಲಿ ಬೃಹದಾಕಾರದಮರವೊಂದು ಅಡ್ಡಲಾಗಿ ಬಿದ್ದಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಹೌದು… ಕಳೆದ ಮೂರ್ನಾಲ್ಕು ದಿನಗಳಿಂದ ತಾಲೂಕಿನಾದ್ಯಂತ ಸುರಿಯುತ್ತಿರುವ ಬಾರಿ ಮಳೆಗೆ ತಗ್ಗು ಪ್ರದೇಶದ ಮನೆಗಳಿಗೆ ನೀರು ತುಂಬಿದೆ.…

ಮಹಾರಾಷ್ಟ್ರದಿಂದ ನಿನ್ನೆ ಮನೆಗೆ ಬಂದಿದ್ದ ಯುವಕ ವಿದ್ಯುತ್ ತಂತಿ ತಗುಲಿ ದುರ್ಮರಣ!

ಕಾರವಾರ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಮಹಾರಾಷ್ಟ್ರದಿಂದ ರಜೆಗೆ ಬಂದಿದ್ದ ಯುವಕನೊರ್ವ ಸಾವನ್ನಪ್ಪಿದ ಘಟನೆ ಗುರುವಾರ ಮಧ್ಯಾಹ್ನ 2.30 ರ ಸುಮಾರಿಗೆ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ ದಂಡೆಭಾಗದಲ್ಲಿ ನಡೆದಿದೆ. ಅವರ್ಸಾ ಗ್ರಾಪಂ ವ್ಯಾಪ್ತಿಯ ದಂಡೇಭಾಗದ ಮಹಾಂತೇಶ ದೇವೆಂದ್ರ ಬಾನಾವಳಿಕರ್…

ಹಿಚ್ಕಡ ಗಡಿಹಬ್ಬ ರದ್ದು!

ಅಂಕೋಲಾ: ತಾಲ್ಲೂಕಿನ ಹಿಚ್ಕಡ ಗ್ರಾಮದ ಶಾಂತಾದುರ್ಗಾ ಹಾಗೂ ಪರಿವಾರ ದೇವರುಗಳ ಗಡಿಹಬ್ಬ ಮತ್ತು ಅವಲಹಬ್ಬವನ್ನು ಮಳೆಯ ಕಾರಣದಿಂದ ರದ್ದು ಪಡಿಸಿದ್ದು ಭಕ್ತಾದಿಗಳು ಸಹಕರಿಸುವಂತೆ ದೇವಸ್ಥಾನದ ಮೊಕ್ತೇಸರ ವಿಠೋಬಾ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೌದು..ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದ ತಾಲೂಕಿನ ಪ್ರತಿಷ್ಠಿತ…

ಮಾವು ಬೆಳೆಗಾರರಿಗೆ ನೆರವಾಗಲು ಮೇ 24,25 ಕ್ಕೆ ಮಾವು ಮೇಳ-ನಾಗರಾಜ ನಾಯಕ

ಅಂಕೋಲಾ: ಸತತ ಎರಡು ವರ್ಷಗಳಿಂದ ಅದ್ದೂರಿಯಿಂದ ಮಾವು ಮೇಳವನ್ನು ಆಯೋಜಿಸುವ ಮೂಲಕ ಅಂಕೋಲೆಯ ಮಾವು ಬೆಳೆಗಾರರಿಗೆ ಉತ್ತೇಜನ ನೀಡುತ್ತಾ ಬಂದಿರುವ ಬೆಳೆಗಾರರ ಸಮಿತಿ ವತಿಯಿಂದ ಮೂರನೇ ವರ್ಷದ ಮಾವು ಮೇಳ ಮೇ 24 ಮತ್ತು 25ರಂದು ಪಟ್ಟಣದ ಜೈಹಿಂದ್ ಹೈಸ್ಕೂಲ್ ಮೈದಾನದಲ್ಲಿ…

ಶಿರೂರು ಗುಡ್ಡ ಕುಸಿತದಲ್ಲಿ ಬಚಾವ್ ಆಗಿದ್ದ ತಮ್ಮಾಣಿ ಗೌಡ ಸಿಡಿಲು ಬಡಿದು ದುರ್ಮರಣ!

ಅಂಕೋಲಾ;ಸಿಡಿಲು ಬಡಿದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಅಂಕೋಲಾ ತಾಲೂಕಿನ ಉಳುವರೆ ಗ್ರಾಮದಲ್ಲಿ ನಡೆದಿದೆ. ತಮ್ಮಾಣಿ ಅನಂತ ಗೌಡ 65 ಸಾವನ್ನಪ್ಪಿದ ವೃದ್ಧನಾಗಿದ್ದು, ಮನೆಯ ಮೇಲ್ಛಾವಣಿ ದುರಸ್ಥಿ ಮಾಡುತ್ತೀರುವ ಸಂದರ್ಭದಲ್ಲಿ ಸಿಡಿಲು ಬಡಿದಿದ್ದು, ಸ್ಥಳೀಯರು ಆತನನ್ನು ಅಂಕೋಲಾ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿತ್ತು, ಪರೀಕ್ಷಿಸಿದ ವೈದ್ಯರು…

ಮೇ 25 ರಂದು ಸತ್ಯನಾರಾಯಣ ಪೂಜೆ ಹಾಗೂ ಪ್ರತಿಭಾ ಪುರಸ್ಕಾರ-ನಾಗೇಶ ನಾಯ್ಕ (ಆಚಾ)

ಅಂಕೋಲಾ: ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮತ್ತು ಸಮಾಜ ಸೇವೆ ಹಾಗೂ ಕ್ರಿಡೆಯಲ್ಲಿ ಸಾಧನೆ ಮಾಡಿದ ನಾಮಧಾರಿ ಸಮಾಜದವರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆರ್ಯ ಈಡಿಗ…

ವಾಸುದೇವ ಡ್ರೀಮ್ ಸ್ಕೇಪ್ ಲೋಕಾರ್ಪಣೆ! ಶಾಸ್ತ್ರೋಕ್ತವಾಗಿ ನೆರವೇರಿದ ಶೆಟಗೇರಿ ವರಮಹಾಗಣಪತಿ ದೇವರ ವರ್ದಂತಿ ಉತ್ಸವ.

ಅಂಕೋಲಾ: ತಾಲೂಕಿನ ಶೆಟಗೇರಿಯಲ್ಲಿ ಸಂಪ್ರದಾಯ ಸೇವಾ ಸಂಸ್ಥೆಯ ವತಿಯಿಂದ ನಡೆದ ವರಮಹಾಗಣಪತಿ ದೇವರ ವರ್ದಂತಿ ಉತ್ಸವವು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅದ್ದೂರಿಯಿಂದ ಆಚರಣೆಗೊಂಡಿತು.ನಾರಾಯಣ ಬೀರಣ್ಣ ನಾಯಕರ ಕನಸಿನ ಕೂಸಾದ ಸಂಪ್ರದಾಯ ಸೇವಾ ಸಂಸ್ಥೆ ಪ್ರಾರಂಭಗೊಂಡು ಇಪ್ಪತ್ತುವರ್ಷ ಸಂದ ಹಿನ್ನೆಲೆಯಲ್ಲಿ ವರಮಹಾಗಣಪತಿ…

ಗ್ರಾಮದೇವಿ ಶಾಂತಾದುರ್ಗೆ ದೇಗುಲಕ್ಕೆ ತಾಮ್ರ ಮೇಲ್ಛಾವಣಿ ಹೊದಿಕೆ ಹಿನ್ನೆಲೆ ಸಂಪನ್ಮೂಲ ಕ್ರೂಡಿಕರಣಕ್ಕೆ ಭಕ್ತರಲ್ಲಿ ಮನವಿ!

ಅಂಕೋಲಾ: ಭೂಮ್ತಾಯಿ, ಶಕ್ತಿ ದೇವತೆ, ಗ್ರಾಮದೇವತೆ,ಅಮ್ಮನವರು ಎಂದೆಲ್ಲ ಕರೆಯಿಸಿಕೊಳ್ಳುವ ಅಂಕೋಲೆಯೊಡತಿ ಶ್ರೀಶಾಂತಾದುರ್ಗಾ ದೇವಿಯ ಸಂಸ್ಥಾನವು ಜೀರ್ಣಾವ್ಯವಸ್ಥೆಗೆ ತಲುಪಿದ್ದು, ಹಳೆಯ ಹಂಚಿನ ಮೇಲ್ಛಾವಣಿಯನ್ನು ತೆರವುಗೊಳಿಸಿ ಸಂಪೂರ್ಣ ತಾಮ್ರದ ಮೇಲ್ಛಾವಣಿ ಅಳವಡಿಸಲು ಆಡಳಿತ ಮಂಡಳಿ ನಿರ್ಧರಿಸಿದ್ದು, ಭಕ್ತರಿಂದ ಸಂಪನ್ಮೂಲ ಕ್ರೂಡಿಕರಣಕ್ಕೆ ಮನವಿ ಪತ್ರವನ್ನು ತಯಾರಿಸಿದ್ದು,ಅದನ್ನು…

ಸಂಪ್ರದಾಯ ಸೇವಾ ಸಂಸ್ಥೆಯ ಹೊಸ ಮೈಲಿಗಲ್ಲು! 20 ನೇ ವರ್ಷದ ‘ಸಂಪ್ರದಾಯ’ ಉತ್ಸವದ ಮೆರಗು ಹೆಚ್ಚಿಸಲಿರುವ ‘ವಾಸುದೇವ’ ಡ್ರೀಮ್ ಸ್ಕೇಪ್!

ಅಂಕೋಲಾ: ತಾಲೂಕಿನ ಶೆಟಗೇರಿಯ ವರಮಹಾಗಣಪತಿ ದೇಗುಲ ಹಾಗೂ ಸಂಪ್ರದಾಯ ಸೇವಾ ಸಂಸ್ಥೆ ಪ್ರಾರಂಭಗೊಂಡು ಇಂದು ಎರಡುದಶಕಗಳು ಪೂರೈಸಿದ ಹಿನ್ನೆಲೆಯಲ್ಲಿ ವರಮಹಾಗಣಪತಿ ದೇವಸ್ಥಾನದ ವರ್ದಂತಿ ಉತ್ಸವ ಹಾಗೂ ಸಂಪ್ರದಾಯ ಉತ್ಸವ 2025 ರ ಅಂಗವಾಗಿ ಸುಸಜ್ಜಿತವಾಗಿ ನಿರ್ಮಾಣಗೊಂಡ ವಾಸುದೇವ ಡ್ರೀಮ್ ಸ್ಕೇಪ್ ಹೊರಾಂಗಣ…

ನಾಮಧಾರಿ ಕಪ್ -2025 ಕುಮಟಾ ಮುಡಿಗೆ; ಸಂಘಟನೆ ಸಹಬಾಳ್ವೆಗೆ ಪಂದ್ಯಾವಳಿಗಳು ಬಹುಮುಖ್ಯ-ಮಂಜುನಾಥ ನಾಯ್ಕ.

ಅಂಕೋಲಾ: ಒಂದು ಸಮಾಜವನ್ನು ಸಂಘಟಿಸಲು ಹಾಗೂ ಸಹಬಾಳ್ವೆಯ ಜೀವನ ನಡೆಸಲು ಪಂದ್ಯಾವಳಿಗಳು ಬಹುಮುಖ್ಯ ಪಾತ್ರವಹಿಸುತ್ತದೆ ಎಂದು ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಎಲ್ ನಾಯ್ಕ ಹೇಳಿದರು. ಅವರು ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘ ಅಂಕೋಲಾ ವತಿಯಿಂದ…