ಕಾರವಾರ: ಗೋ ಮಾತೆಯ ಹಾಲನ್ನು ಕುಡಿದು ಬೆಳೆದಿದ್ದೇವೆ ಅಂತಹ ಗೋವಿನ ಕಳ್ಳರಿಗೆ ಹಾಗೂ ಹತ್ಯೆ ಮಾಡುವವರಿಗೆ ಸರ್ಕಲ್ ನಲ್ಲಿ ನಿಲ್ಲಿಸಿ ಗುಂಡಿಡಿ ಎಂದು ಪೋಲೀಸ್ ಇಲಾಖೆಗೆ ಹೇಳಿದ್ದೇನೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಗೋ ಕಳ್ಳರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅವರು ಕಾರವಾರದ ಜಿಪಂ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಗೋ ಕಳ್ಳತನ ಮಾಡುವುದು ಮಹಾ ಪಾಪ,ನಾವು ಗೋಮಾತೆಯನ್ನು ಪೂಜಿಸುತ್ತೇವೆ,ಪ್ರೀತಿಯಿಂದ ಸಾಕುತ್ತೇವೆ ಅಂತಹ ಗೋವಿನ ಹತ್ಯೆ ಖಂಡನೀಯ,ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಿ ಎಂದು ಪೊಲೀಸ್ ಇಲಾಖೆಗೆ ಹೇಳಿದ್ದೇನೆ, ಇಂತಹ ಪ್ರಕರಣಗಳು ಮತ್ತೆ ಮರುಕಳಿಸಿದ್ದಲ್ಲಿ ಆರೋಪಿಗಳನ್ನು ಸರ್ಕಲ್ ನಲ್ಲಿ ನಿಲ್ಲಿಸಿ ಗುಂಡು ಹಾಕಿಸುತ್ತೇನೆ ಎಂದು ಗೋಕಳ್ಳರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸರಾಕಾರದ ಅವದಿಯಲ್ಲಿಯೂ ಗೋಕಳ್ಳತನ,ಗೋಹತ್ಯೆ ನಡೆದಿತ್ತು, ಯಾಕೆ ಕುಮಟಾದಲ್ಲಿ ನಡೆದಿಲ್ಲವೇ? ಹಾಗಾದರೆ ಕುಮಟಾ ಶಾಸಕ ದಿನಕರ ಶೆಟ್ಟಿ ಬಿಟ್ಟು ದಿನಕರ ಖಾನ್ ಆದ್ರಾ? ನಮ್ಮ ಸರಕಾರ ಗೋ ಹಂತಕರಿಗೆ,ಗೋ ಕಳ್ಳರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಗುಡುಗಿದರು.


Leave a Reply