ಹೊನ್ನಾವರ : ಶರಾವತಿ ಬ್ರಿಡ್ಜ್ ಮೇಲೆ ಬೈಕ್ ಹಾಗೂ ಕಾರಿನ ನಡುವೆ ಭೀಕರ ಅಪಘಾತವಾಗಿ ಬೈಕ್ ಅಲ್ಲಿ ಚಲಿಸುತ್ತಿದ್ದ ಯುವತಿ ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ.

ಮೃತ ಯುವತಿ ಹಳದೀಪುರ ಮೂಲದ ಪೂಜಾ ಗೌಡ ಎಂದು ಗುರುತಿಸಲಾಗಿದೆ. ಹಾಗೆಯೇ ಗಾಯಗೊಂಡ ಬೈಕ್ ಸವಾರ ಸುರೇಶ ಗೌಡ ಇವರನ್ನು ತಾಲೂಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದ ತಿವ್ರತೆಗೆ ಬೈಕ್ ಹಾಗೂ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದ್ದು,ಹೊನ್ನಾವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿ:ವಿಶ್ವನಾಥ್ ಸಾಲ್ಕೋಡ್


Leave a Reply