ಕಾರವಾರ: ಹೊನ್ನಾವರ ತಾಲೂಕಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಂದೇ ಮಾತರಂ ಗೀತೆಯನ್ನು ಹೊಗಳುವ ಭರದಲ್ಲಿ ರಾಷ್ಟ್ರಗೀತೆಗೆ ಅಪಮಾನ ಮಾಡುವಂತೆ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿವಾದಾತ್ಮಕ ಹೇಳಿಕೆ ನೀಡಿದ ಘಟನೆ ನಡೆದಿದೆ.

ಹೌದು.. ಹೊನ್ನಾವರದ
ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ಮೈ ಭಾರತ್ ಕೇಂದ್ರ ಉತ್ತರ ಕನ್ನಡ ಕಾರವಾರ ಹಾಗೂ ತಾಲೂಕಾಡಳಿತದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಆತ್ಮನಿರ್ಭರ ಭಾರತಕ್ಕಾಗಿ ರಾಷ್ಟ್ರೀಯ ಏಕತಾ ನಡಿಗೆಯ ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ಹಾಗೂ ಹಾಲಿ ಸಂಸದ ಏನು ? ಮಾತನಾಡಿದ್ದಾರೆ ಎಂದು ನೋಡೋಣ ಬನ್ನಿ..
ಒಂದೇ ಮಾತರಂ ರಾಷ್ಟ್ರಗೀತೆಯಾಗಬೇಕಾಗಿತ್ತು | ಜನಗಣಮನಕ್ಕೆ ಸರಿಸಮಾನವಾದ ಗೀತೆ ಒಂದೇ ಮಾತರಂ | ಸ್ವಾತಂತ್ರ್ಯ ಹೋರಾಟಕ್ಕೆ ಒಂದೇ ಮಾತರಂ ಕೊಟ್ಟ ಕೊಡುಗೆ ನಮಗೆ ಸದಾ ಪ್ರೇರಣೆ | ಒಂದೇ ಮಾತರಂ ರಾಷ್ಟ್ರಗೀತೆಯಾಗಿಸಲು ಹಿಂದೆ ಸಾಕಷ್ಟು ಒತ್ತಡ ಕೇಳಿಬಂದಿತ್ತು | ಆದರೆ ನಮ್ಮ ಪೂರ್ವಜರು ಬ್ರಿಟಿಷ್ ಅಧಿಕಾರಿಯ ಸ್ವಾಗತಕ್ಕೆ ರಚನೆಯಾದ ಜನಗಣಮನವೂ ಇರಲಿ | ಜೊತೆಗೆ ಒಂದೇ ಮಾತರಂ ಗೀತೆಯೂ ಇರಲಿ ಅಂತ ಸೇರಿಸಿದರು | ನಾವು ಇವತ್ತು ಅದನ್ನು ಒಪ್ಪಿಕೊಂಡು ಪಾಲಿಸುತ್ತಿದ್ದೇವೆ | ಒಂದೇ ಮಾತರಂ ಅನ್ನು 150ನೇ ವರ್ಷದಲ್ಲಿ ಮತ್ತೆ ಕಂಠ ಕಂಠಗಳಲ್ಲಿ ಪ್ರತಿಧ್ವನಿಸಬೇಕು | ಭಾರತ್ ಮಾತಾಕಿ ಜೈ ನಮ್ಮ ಉಸಿರಿನ ಭಾಗ ಆಗುವಂತೆ ಆಗಬೇಕು | ನಾಡಿನ ಜನರ ಮಧ್ಯೆ ಆ ಒಂದೇ ಮಾತರಂ ಹಾಡು ಕಂಠಸ್ಥವಾಗಿ ಮೊದಲು ಮೊಳಗಬೇಕು- ಸಂಸದ ಕಾಗೇರಿ.
ದೇಶ ಪ್ರೇಮ ಎಂದು ಗುಣುಗುತ್ತಿರುವ ಬಿಜೆಪಿ ನಾಯಕರೇ ರಾಷ್ಟ್ರಗೀತೆಯನ್ನು ಅವಮಾನ ಮಾಡುವಂತೆ ಹೇಳಿಕೆ ನೀಡಿರುವುದು, ಈ ಕುರಿತು ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.














Leave a Reply