Year: 2025

ರೋಗಿಗಳ ಹಾಸಿಗೆಯಲ್ಲಿ ಕಮಿಷನ್! ಜಿಲ್ಲಾಸ್ಪತ್ರೆ ಸರ್ಜನ್ ಲೋಕಾಯುಕ್ತ ಬಲೆಗೆ!

ಕಾರವಾರ : ಗುತ್ತಿಗೆದಾರರೊಬ್ಬರಿಂದ ಲಂಚ‌ ಪಡೆಯುತ್ತಿದ್ದ ವೇಳೆ ಕಾರವಾರ ಸಾರ್ವಜನಿಕ ಆಸ್ಪತ್ರೆಯ (ಜಿಲ್ಲಾಸ್ಪತ್ರೆ) ವೈದ್ಯಾಧಿಕಾರಿ ಶಿವಾನಂದ ಕುಡ್ತಲಕರ್ ಲೋಕಾಯುಕ್ತರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ. ರೋಗಿಗಳ ಹಾಸಿಗೆ ಹಾಗೂ ಪೀಠೋಪಕರಣಗಳ ಟೆಂಡರ್ ನಲ್ಲಿ ಗುತ್ತಿಗೆದಾರನಿಗೆ ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದು, ಅಂಕೋಲಾ ಮೂಲದ…

ಗೊಬ್ಬರದಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು!

ಅಂಕೋಲಾ: ಗೊಬ್ಬರದ ಗುಂಡಿಗೆ ಬಿದ್ದು ಎರಡೂವರೆ ವರ್ಷದ ಮಗು ಸಾವನ್ನಪ್ಪಿದ ಘಟನೆ ತಾಲೂಕಿನ ಡೊಂಗ್ರಿ ಗ್ರಾಪಂ ವ್ಯಾಪ್ತಿಯ ಹಳವಳ್ಳಿಯಲ್ಲಿ ನಡೆದಿದೆ. ಹಳವಳ್ಳಿ ಗ್ರಾಮದ ಮೂಲೆಮನೆಯ ಶ್ರೀಕಾಂತ್ ಹೆಬ್ಬಾರ್ ಮತ್ತು ರೂಪಾ ದಂಪತಿಯ ದ್ವಿತೀಯ ಪುತ್ರಿ ಸಾದ್ವಿ ಶ್ರೀಕಾಂತ್ ಹೆಬ್ಬಾರ್ (2.3) ವರ್ಷ…

ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು!

ಅಂಕೋಲಾ: ಅಪ್ರಾಪ್ತ ಯುವತಿಯೋರ್ವಳು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಅಗಸೂರು ಗ್ರಾಪಂ ವ್ಯಾಪ್ತಿಯ ಅಡ್ಲೂರಿನಲ್ಲಿ ನಡೆದಿದೆ. ಅಡ್ಲೂರು ಗ್ರಾಮದ ನಿವಾಸಿ ಕವನಾ ಲಕ್ಷ್ಮಣ ಗೌಡ(17) ಎಂಬಾಕೆಯೇ ನೇಣಿಗೆ ಶರಣಾದ ಯುವತಿಯಾಗಿದ್ದಾಳೆ. ಅಗಸೂರಿನ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ…

ಹೊಸದೇವತಾ ಪಾಲ್ಸ್ ನಲ್ಲಿ ಪ್ರವಾಸಿಗರ ಹುಚ್ಚಾಟ! ದೇಗುಲದ ಪಾವಿತ್ರ್ಯತೆಗೆ ದಕ್ಕೆ!

ಅಂಕೋಲಾ:ಹೊಸದೇವತಾ ಜಲಪಾತ (hosadevata Falls)ದಲ್ಲಿ ಪ್ರವಾಸಿಗರ ಹುಚ್ಚಾಟ ಮೀತಿಮೀರಿದ್ದು, 25 ರಿಂದ 30 ಅಡಿಯಿಂದ ನೀರು ದುಮ್ಮಿಕ್ಕುವ ಸ್ಥಳಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ ಹುಚ್ಚಾಟ ಮೆರೆಯುತ್ತಿದ್ದು ಈ ಕುರಿತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಹೌದು… ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ…

ನೀಟ್ ಪರೀಕ್ಷೆಯಲ್ಲಿ ಸಾಧನೆಗೈದ ಮಾನ್ಯಳಿಗೆ ಜನತಾ ಕೋಆಪರೇಟಿವ್ ಸೊಸೈಟಿ, ಅಂಕೋಲದಿಂದ ಸನ್ಮಾನ.

ಅಂಕೋಲಾ: ತಾಲೂಕಿನ ಬೆಳಂಬಾರ ಗ್ರಾಮದಮಾನ್ಯ ಮಂಜುನಾಥ್ ನಾಯ್ಕ ‘ನೀಟ್’ ಪರೀಕ್ಷೆಯಲ್ಲಿ ವೈದ್ಯಕೀಯ ಶಿಕ್ಷಣ ವಿಭಾಗದಲ್ಲಿ 14000 ರ್ಯಾಂಕ್ ಗಳಿಸಿದ ಹಿನ್ನೆಲೆಯಲ್ಲಿ ಜನತಾ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಅಂಕೋಲಾ ವತಿಯಿಂದ ಸನ್ಮಾನಿಸಿ ವೈಯಕ್ತಿಕ 25000 ರೂಪಾಯಿಗಳ ಗೌರವದನವನ್ನು ನೀಡಲಾಯಿತು. ಈ ಸಂದರ್ಭದಲ್ಲಿ…

ಯುವ ಶಕ್ತಿಗೆ ಉತ್ತೇಜನ ನೀಡಿದರೆ ಮಾತ್ರ ಪಕ್ಷ ಉಜ್ವಲವಾಗಲು ಸಾಧ್ಯ- ಆರ್ ವಿ ಡಿ

ಅಂಕೋಲಾ: ಯುವ ಸಮುದಾಯಕ್ಕೆ ಉತ್ತೇಜನ ನೀಡುವುದರಿಂದ ಪಕ್ಷ ಉಜ್ವಲವಾಗಲಿದೆ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಳಿಯಾಳ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ಹೇಳಿದರು. ಅವರು ಅಂಕೋಲಾ ತಾಲೂಕಿನಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಣಿ…

ಬೈಕ್ ಕಳ್ಳತನ; ಆರೋಪಿಯನ್ನು ಹೆಡೆಮುರಿಕಟ್ಟಿದ ಪೊಲೀಸರು!

ಮುಂಡಗೋಡ : ಬೈಕ್ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಹೆಡೆಮುರಿಕಟ್ಟಿದ ಮುಂಡಗೋಡ ಪೊಲೀಸರು ವಾಹನ ಸಮೇತ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಲ್ಲಾಪುರ ತಾಲೂಕಿನ ಮಂಚಿಕೇರಿ ಗ್ರಾಮದ ನಾಸಿರ ಅಹ್ಮದ ಸಿದ್ಧಿ ಎಂಬಾತನೇ ಕಳ್ಳತನಮಾಡಿದ್ದ ಬಗ್ಗೆ ತಿಳಿದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.…

ಗೆಳೆಯರೊಂದಿಗೆ ಈಜಲು ತೆರಳಿದ್ದ ಪ್ರವಾಸಿಗ ಸಮುದ್ರಪಾಲು!

ಅಂಕೋಲಾ:ತಾಲೂಕಿನ ನದಿಬಾಗ ಕಡಲತೀರದಲ್ಲಿ ಈಜಿಗಿಳಿದ ಪ್ರವಾಸಿಗನೊಬ್ಬ ಸಮುದ್ರಪಾಲಾದ ಘಟನೆ ನಡೆದಿದೆ. ಹುಬ್ಬಳ್ಳಿಯ ಹೆಗ್ಗೆರಿ ಮಾರುತಿನಗರದ ನಿವಾಸಿ ನಿಜಾಮುದ್ದೀನ್ ಮುಲ್ಲಾ ದಾಧಾಪಿರ್ (26) ಎಂಬಾತನೇ ಸಮುದ್ರಪಾಲಾದ ಯುವಕನಾಗಿದ್ದಾನೆ. ಬಕ್ರೀದ್ ರಜೆ ಹಿನ್ನೆಲೆ ಎರಡು ಬೈಕಗಳಲ್ಲಿ ನಾಲ್ಕು ಮಂದಿ ಗೆಳೆಯರು ಹುಬ್ಬಳ್ಳಿಯಿಂದ ಕರಾವಳಿ ತಾಲೂಕುಗಳಿಗೆ…

ಬಸ್ ಮತ್ತು ಬೈಕ್ ನಡುವೆ ಡಿಕ್ಕಿ;ಸವಾರ ಸ್ಥಳದಲ್ಲೇ ಸಾವು!

ಹೊನ್ನಾವರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ-69 ರ ಹೊನ್ನಾವರ-ಗೇರುಸೊಪ್ಪ ರಸ್ತೆಯ ವಾಟೆಹಳ್ಳ ಬಳಿ ಕೆಎಸ್ಆರ್ ಟಿ ಸಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸವಾರ ಸ್ಥಳದಲ್ಲೆ ಮೃತಪಟ್ಟು, ಹಿಂಬದಿ ಸವಾರ ಗಾಯಗೊಂಡ ಘಟನೆ ರವಿವಾರ ಸಂಭವಿಸಿದೆ. ಭಟ್ಕಳ ಡಿಪೋ…

ಸ್ಮಶಾನದಲ್ಲಿ ಮರಗಳ ಮಾರಣಹೋಮ ಪ್ರಕರಣ!ಪುರಸಭೆ ಮುಖ್ಯಾಧಿಕಾರಿ ಮೇಲೆ ಎಫ್ ಐ ಆರ್ ದಾಖಲು!

ಅಂಕೋಲಾ: ತಾಲೂಕಿನ ಹಿಂದೂ ಸ್ಮಶಾನಭೂಮಿಯಲ್ಲಿ ಮರ ಕಡಿದ ಪ್ರಕರಣದ ಕುರಿತು ನುಡಿಜೇನು ಪತ್ರಿಕೆ ವರದಿ ಬಿತ್ತರಿಸಿತ್ತು, ವರದಿಯ ಫಲಶೃತಿ ಎಂಬಂತೆ ಅರಣ್ಯ ಇಲಾಖೆ ಪುರಸಭೆ ಮುಖ್ಯಾಧಿಕಾರಿ ಎಚ್ ಅಕ್ಷತಾರವರ ಮೇಲೆ ಎಫ್ ಐ ಆರ್ ದಾಖಲಾಗಿದೆ. ಹೌದು..ಹಿಂದೂ ಸ್ಮಶಾನ ಭೂಮಿಯಲ್ಲಿ ಪರಿಸರ…