ಹೊನ್ನಾವರ: ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಜ.25 ರ ಶನಿವಾರ ಉತ್ತರಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣಮಹೋತ್ಸವ ಸಮಾರೋಪ ಸಮಾರಂಭದ ಮುಂಜಾನೆ 10;30 ವೆಂಕಟ್ರಮಣ ಶಾಸ್ತ್ರಿ ಸೂರಿ ವೇದಿಕೆಯಲ್ಲಿ ಜರುಗಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ನೇರವೇರಿಸಲಿದ್ದು, ರಾಜ್ಯದ ಬಂದರು ಒಳನಾಡು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚೀವರಾದ ಮಂಕಾಳ ಎಸ್ ವೈದ್ಯ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಜಿಲ್ಲಾ ಪತ್ರಕರ್ತರ ಯಾದಿಯನ್ನು ಶಾಸಕ ದಿನಕರ ಶೆಟ್ಟಿ ಬಿಡುಗಡೆ ಮಾಡಲಿದ್ದು , ಜಿಲ್ಲಾಧ್ಯಕ್ಷ ಜಿ.ಸುಬ್ರಾಯ ಭಟ್ ಬಕ್ಕಳ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಜಾವಾಣಿ ಪತ್ರಿಕೆ ಸಂಪಾದಕರಾದ ರವೀಂದ್ರ ಭಟ್, ಸಂಘಟನೆಯ ರಾಜ್ಯಧ್ಯಕ್ಷರಾದ ಶಿವಾನಂದ ತಗಡೂರು, ನ್ಯೂ ಡ
ಎಜುಕೇಶನ್ ಸೊಸೈಟಿ ಅಧ್ಯಕ್ಷರಾದ ರಘುನಾಥ ಪೈ, ಗುತ್ತಿಗೆದಾರರಾದ ಶಿವಲಿಂಗಯ್ಯಅಲ್ಲಯ್ಯನವರಮಠ, ದೈವಜ್ಞಾವಾಹಿನಿ ಜಿಲ್ಲಾಧ್ಯಕ್ಷರಾದ ಸತ್ಯನಾರಾಯಣ ಶೇಟ್ ಆಗಮಿಸಲಿದ್ದಾರೆ. ಸಂಘದ ಸಂಸ್ಥಾಪಕ ಸದಸ್ಯರಾದ ಟಿ.ಎಂ.ಸುಬ್ಬರಾಯ ಹಾಗೂ ಜಿ.ಯು.ಭಟ್ ಇವರಿಂದ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಪ್ರಸುತ್ತ ಸಾಲಿನ ಕೆ. ಶ್ಯಾಮರಾವ್ ಪ್ರಶಸ್ತಿಯನ್ನು ಸಂಯುಕ್ತ ಕರ್ನಾಟಕ ಪತ್ರಿಕೆಯ ಮುಖ್ಯ ಸಂಪಾದಕರಾದ ಮೋಹನ ಹೆಗಡೆ ಇವರಿಗೆ ಪ್ರಧಾನ ಮಾಡಲಾಗುವುದು. ಜಿಲ್ಲಾ ಸಂಘದ ಪದಾಧಿಕಾರಿಗಳು ಉಪಸ್ಥಿತಿ ವಹಿಸುವರು. ಜಿಲ್ಲಾ ಪತ್ರಿಕಾ ಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಯವರಿಗೆ ಸನ್ಮಾನ ಜರುಗಲಿದೆ.
ಸಭಾ ಕಾರ್ಯಕ್ರಮದ ನಂತರ ಸಪ್ತಕ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ತಾರಾ ಭಟ್ ಮತ್ತು ಶ್ರೀಲತಾ ಗುರುರಾಜ ಅವರಿಂದ “ಭಾವ ಸಂಗಮ” ಕಾರ್ಯಕ್ರಮ ಜರುಗಲಿದ್ದು, ನಿರ್ದೆಶನ ಮತ್ತು ತಬಲಾ ಸಾಥ್ ಗುರುರಾಜ ಆಡುಕಳ, ಹಾರ್ಮೊನಿಯಂ ಸಾಥ್ ಸತೀಶ ಭಟ್ ಹೆಗ್ಗಾರ ಇವರು ಸಹಕರಿಸಲಿದ್ದಾರೆ.

” ಮುದ್ರಣ ಮಾಧ್ಯಮದ ಭವಿಷ್ಯ ಹಾಗೂ ಮಾಧ್ಯಮಗಳ ಸವಾಲು” ಎನ್ನುವ ವಿಷಯದ ಮೇಲೆ ಗೋಷ್ಠಿ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಿಸರ ತಜ್ಞರಾದ ಶಿವಾನಂದ ಕಳವೆ, ಅತಿಥಿಗಳಾಗಿ ಮಾಧ್ಯಮ ಅಕಾಡೆಮಿ ಸದಸ್ಯರಾದ ಯು.ಎಸ್.ಶೆಣೈ, ವಿಷಯ ಮಂಡನೆಯಲ್ಲಿ ಹಿರಿಯ ಪತ್ರಕರ್ತರಾದ ಸಂಧ್ಯಾ ಹೆಗಡೆ, ವಿಠ್ಠಲ್ ದಾಸ್ ಕಾಮತ್, ನಾಗರಾಜ ಮತ್ತಿಗಾರ ಮಂಡಿಸಲಿದ್ದಾರೆ. ನಿಂಗಪ್ಪ ಚಾವಡಿ, ಅನಂತ ದೇಸಾಯಿ, ಸುಮಂಗಲ ಅಂಗಡಿ, ರಾಜೇಂದ್ರ ಹೆಗಡೆ ಉಪಸ್ಥಿತರಿರಲಿದ್ದಾರೆ.
ಸಾಯಂಕಾಲ ೩.೩೦ ಕ್ಕೆ ಸಮಾರೋಪ ಹಾಗೂ ಪ್ರಶಸ್ತಿ ಪ್ರಧಾನ ನಡೆಯಲಿದೆ. ಜಿ.ಎಸ್ ಹೆಗಡೆ ಅಜ್ಜಿಬಾಳ ಪ್ರಶಸ್ತಿಯನ್ನು ಹೊನ್ನಾವರ ಪತ್ರಕರ್ತ ಸತೀಶ ತಾಂಡೇಲ್ ಅವರಿಗೆ ನೀಡಿ ಗೌರವಿಸಲಾಗುತ್ತದೆ. ಹಾಗೂ ಪ್ರತಿ ತಾಲೂಕಿನ ಓರ್ವ ಹಿರಿಯ ಪತ್ರಕರ್ತರನ್ನು ಗೌರವಿಸಲಾಗುತ್ತದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಂಘದ ಅಧ್ಯಕ್ಷ ಜಿ.ಸುಬ್ರಾಯ ಭಟ್ ಭಕ್ಕಳ ವಹಿಸಲಿದ್ದಾರೆ.
ಮಾದ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷ ಸದಾಶಿವ ಶಣೈ, ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ ದೇಶಪಾಂಡೆ, ಶಾಸಕರಾದ ಭೀಮಣ್ಣ ನಾಯ್ಕ, ಸತೀಶ್ ಸೈಲ್ ಹಾಗೂ ಕೆ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಶಾಸಕ ಶಿವರಾಮ ಹೆಬ್ಬಾರ, ಎಂ.ಎಲ್.ಸಿ ಶಾಂತರಾಮ ಸಿದ್ಧಿ, ಮಿಲಾಗ್ರೀಸ್ ಸಹಕಾರಿ ಸಂಘದ ಅಧ್ಯಕ್ಷ ಜಾರ್ಜ್ ಫನಾಂಡಿಸ್, ಉಧ್ಯಮಿ ಪದ್ಮನಾಭ ಶಾನಭಗ್ ಕಾಸರಕೋಡ್, ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಸಿ ಲೋಪಿಸ್ ಆಗಮಿಸಲಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಸಾರ್ವಜನಿಕರು ಎಂದು ಸಂಘದ ಜಿಲ್ಲಾಧ್ಯಕ್ಷರಾದ ಜಿ.ಸುಬ್ರಾಯ ಭಟ್ ಬಕ್ಕಳ ಪ್ರಕಟಣೆಯಲ್ಲಿ ಕೋರಿದ್ದಾರೆ.


Leave a Reply