ಶಿರಸಿ: ಬಿಜೆಪಿಯ 18 ಶಾಸಕರನ್ನು ಸದನದಿಂದ ಆರು ತಿಂಗಳು ಅಮಾನತು ಮಾಡಿರುವ ಸ್ಪೀಕರ್ ನಿರ್ಧಾರ ಆಘಾತಕಾರಿ ವಿಷಯ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದು ಸಂಸದ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಧಾನ ವ್ಯಕ್ತಪಡಿಸಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಂವಿಧಾನದ ಮೇಲೆ ನಂಬಿಕೆಯಿಲ್ಲದ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯನ್ನುವುದನ್ನು ಮರೆತಂತಿದೆ. ವಿರೋಧ ಪಕ್ಷದ ಶಾಸಕರ ಮೇಲೆ ದಮನಕಾರಿ ನೀತಿ ಅನುಸರಿಸುತ್ತಿದೆ. ಸದಸ್ಯರ ಹಿತ ಕಾಪಾಡಬೇಕಿದ್ದ ಸ್ಪೀಕರ್ ಯು.ಟಿ ಖಾದರ್ ರವರು ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರ ಒತ್ತಡಕ್ಕೆ ಮಣಿದು ಈ ಅತಿರೇಕದ ನಿರ್ಣಯ ಕೈಗೊಂಡು ಪ್ರಜಾಪ್ರಭುತ್ವದ ಹತ್ಯೆ ಎಸಗಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಏನಿದು ಪ್ರಕರಣ?
ಸದನದೊಳಗೆ ಸಚಿವರೊಬ್ಬರು ತಮ್ಮ ಮೇಲೆ ಹನಿಟ್ರಾಪ್ ಮಾಡಲಾಗಿದೆ ಮತ್ತು ಇನ್ನೊಬ್ಬ ಸಚಿವರು 48ಕ್ಕೂ ಹೆಚ್ಚು ಜನರನ್ನು ಹನಿಟ್ರಾಪ್ ಮಾಡಲಾಗಿದೆ ಎಂದು ಹೇಳಿರುವ ಬಗ್ಗೆ ತನಿಖೆಗೆ ಆಗ್ರಹಿಸಿ ನಡೆದ ಧರಣಿ ನ್ಯಾಯ ಸಮ್ಮತ ಮತ್ತು ವಿರೋಧ ಪಕ್ಷದ ಹಕ್ಕು ಸಹ ಆಗಿತ್ತು.

ಸಭಾಧ್ಯಕ್ಷಕರು ಮುಖ್ಯಮಂತ್ರಿ ಅವರ ಆಣತಿಯಂತೆ ಸದಸ್ಯರನ್ನು ಸದನದಿಂದ 6 ತಿಂಗಳು ಅಮಾನತು ಮಾಡಿರುವುದು ದುರಾದೃಷ್ಟಕರವಾಗಿದೆ ಎಂದಿದ್ದಾರೆ.

ಸಭಾಧ್ಯಕ್ಷಕರು ತಮ್ಮ ಅಮಾನತು ನಿರ್ಧಾರವನ್ನು ಪುನರ್ ಪರಿಶೀಲಿಸಿ ಶಾಸಕರ ಆರು ತಿಂಗಳು ಅಮಾನತು ನಿರ್ಧಾರವನ್ನು ಹಿಂತೆಗೆದು ಕೊಳ್ಳಬೇಕು ಎಂದು ಒತ್ತಾಯಿಸಿದರು.


Leave a Reply