ಅಂಕೋಲಾ: ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಯ (CISF) ಸೈಕ್ಲೋಥಾನ್ -2025 ರ್ಯಾಲಿಯು ಗೋವಾದಿಂದ ಉತ್ತರ ಕನ್ನಡ ಜಿಲ್ಲೆಗೆ ಅಗಮಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ತಾಲೂಕಿನ ಅವರ್ಸಾ ಕಾತ್ಯಾಯನಿ ದೇವಸ್ಥಾನದಲ್ಲಿ ಅದ್ದೂರಿ ಸ್ವಾಗತಕೋರಿದರು, ರ್ಯಾಲಿಯಲ್ಲಿ ಪಾಲ್ಗೊಂಡ ಯೋಧರಿಗೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಆರತಿ ಬೆಳಗಿ ವಿಜಯತಿಲಕವಿಟ್ಟು ಶಾಸ್ತ್ರೋಕ್ತವಾಗಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ದಾರಿಯುದ್ದಕ್ಕೂ ಮುತ್ತೈದೆಯರ ಕುಂಭಕಲಶ,ವಾದ್ಯಮೇಳಗಳು,ಪಟಾಕಿ ಸಿಡಿಸಿ ಭಾರತ್ ಮಾತಾಕಿ ಜೈ,ಜೈ ಶ್ರೀರಾಮ್ ಎನ್ನುವ ಜಯಘೋಷದೊಂದಿಗೆ ಯೋಧರಿಗೆ ಬಿಜೆಪಿ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು.ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಯೋಧರಿಗೆ ಅರತಿಬೆಳಗಿ,ಹೂಮಾಲೆ,ಶಾಲುಗಳನ್ನು ಹಾಕಿ ಸನ್ಮಾನಿಸಿ ಅಮಂತ್ರಿಸಿದರು.

ನಂತರದಲ್ಲಿ ಭಾರತ ಮಾತೆಯ ಚಿತ್ರಪಟಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಉಪಹಾರ ಗೃಹಕ್ಕೆ ತೆರಳಿದರು.ನೂರಕ್ಕೂ ಹೆಚ್ಚಿನ ಯೋಧರಿಗೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಸ್ವತಃ ತಾವೇ ನಿಂತು ಉಪಹಾರಗಳನ್ನು ಉಣಬಡಿಸಿದರು. ಉಪಹಾರ ಸೇವಿಸಿದ ನಂತರದಲ್ಲಿ ಯೋಧರು ಅತಿಥ್ಯನೀಡಿದ ರೂಪಾಲಿ ನಾಯ್ಕ ಅವರಿಗೆ ನೆನೆಪಿನ ಕಾಣಿಕೆ ನೀಡಿದರು.

ಯೋಧರಿಗೆ ಸ್ವತಃ ತಾವೇ ಉಪಹಾರ ಉಣಬಡಿಸಿದ ರೂಪಾಲಿ.
ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಯ (CISF) ಸೈಕ್ಲೋಥಾನ್ -2025 ರ್ಯಾಲಿಯು ಗೋವಾದಿಂದ ಉತ್ತರ ಕನ್ನಡ ಜಿಲ್ಲೆಗೆ ಅಗಮಿಸುತ್ತಿದ್ದಂತೆ ಅಂಕೋಲಾ ತಾಲೂಕಿನ ಕಾತ್ಯಾಯನಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಬರಮಾಡಿಕೊಂಡ ರೂಪಾಲಿ ನಾಯ್ಕ ಯೋಧರಿಗೆ ಸ್ವತಃ ತಾವೇ ಉಪಹಾರ ಉಣಬಡಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರ ಸ್ವಾಗತಕ್ಕೆ ಶ್ಲಾಘನೆ ವ್ಯಕ್ತಪಡಿಸಿದ CISF ಯೋಧರು ಫುಲ್ ಖುಷ್ ಆದರು.

ಏನಿದು CISF ಸೈಕ್ಲೋಥಾನ್ ರ್ಯಾಲಿ?
ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (CISF) ವತಿಯಿಂದ ಹಮ್ಮಿಕೊಳ್ಳಲಾಗಿರುವ ಸಮುದ್ರತೀರ ಸೈಕ್ಲೋ ಥಾನ್, ‘ಸುರಕ್ಷಿತ ತಟ, ಸಮೃದ್ದ ಭಾರತ (ಸುರಕ್ಷಿತ ಕರಾವಳಿ, ಸಮೃದ್ದ ಭಾರತ) ಎಂಬ ಧೈಯ ವಾಕ್ಯದೊಂದಿಗೆ ಗುಜರಾತ್ ನಿಂದ ಕನ್ಯಾಕುಮಾರಿ ವರೆಗೆ ಹೊರಡುವ 24 ಜನ ಸಿಐಎಸ್ ಎಫ್ ಯೋಧರ ಸೈಕ್ಲೋಥಾನ್ ಜಾಥ ಕರಾವಳಿಯುದಕ್ಕೂ ಹೊರಟಿದ್ದು ಪ್ರತಿಯೊಂದು ರಾಜ್ಯ ಸೇರಿದಂತೆ,ಜಿಲ್ಲೆಯಲ್ಲೂ ಅದ್ದೂರಿಯಿಂದ ಬರಮಾಡಿಕೊಳ್ಳಲಾಗುತ್ತಿದೆ.
ಕಳೆದ ಐದು ದಶಕಗಳಿಂದ CISF ಭಾರತದ ಪ್ರಮುಖ ಗೇಟ್‌ವೇ ಗಳಾದ ಬಂದರುಗಳು, ವಿಮಾನ ನಿಲ್ದಾಣಗಳು, ಸಂಸ್ಕರಣಾಗಾರಗಳು, ನೌಕಾನೆಲೆಗಳು ಮತ್ತು ಪರಮಾಣು ವಿದ್ಯುತ್ ಸ್ಥಾವರಗಳನ್ನು ಭದ್ರಪಡಿಸುವ ನಿಟ್ಟಿನಲ್ಲಿ CISF ಯಾವುದೇ ಅಡೆತಡೆಯಿಲ್ಲದೆ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ.

ಕನ್ಯಾಕುಮಾರಿಯಲ್ಲಿರುವ ಪೂಜ್ಯ ಸ್ವಾಮಿ ವಿವೇಕಾನಂದ ಸ್ಮಾರಕದಲ್ಲಿ ಸಮಾಪ್ತಿಗೊಳ್ಳುವ ಮೊದಲು 100 ಕ್ಕೂ ಹೆಚ್ಚು ಸಿಐಎಸ್‌ಎಫ್ ಸಿಬ್ಬಂದಿ ಸಂಪೂರ್ಣ ದೃಢಸಂಕಲ್ಪ ಮತ್ತು ಸೇವಾ ಮನೋಭಾವನೆಯೊಂದಿಗೆ 11 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ಪಶ್ಚಿಮದ ಲಖ್‌ಪತ್‌ನಿಂದ ಪೂರ್ವದ ಬಕ್ಖಾಲಿಯವರೆಗಿನ ಭಾರತದ ವಿಶಾಲವಾದ ಕರಾವಳಿಯಲ್ಲಿ 6,553 ಕಿಮೀ ಸವಾರಿ ಹೊರಟಿದ್ದು, ಮಾರ್ಚ್ 7 ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದ್ದಾರೆ. ಈ ಸೈಕ್ಲಾಥಾನ್ ಕೇವಲ ಸಹಿಷ್ಣುತೆಯ ಪರೀಕ್ಷೆಗಿಂತ ಹೆಚ್ಚಿನದಾಗಿದೆ-ಇದು ಕರಾವಳಿ ಸಮುದಾಯಗಳಲ್ಲಿ ರಾಷ್ಟ್ರೀಯ ಭದ್ರತಾ ಜಾಗೃತಿಯನ್ನು ಬಲಪಡಿಸುವ ಮತ್ತು ಮಾದಕವಸ್ತು ಕಳ್ಳಸಾಗಣೆ ಮತ್ತು ಅಕ್ರಮ ಚಟುವಟಿಕೆಗಳ ಅಪಾಯಗಳ ಬಗ್ಗೆ ಅವರನ್ನು ಎಚ್ಚರಿಸುವ ಆಂದೋಲನವಾಗಿದೆ ಎನ್ನಲಾಗಿದೆ.

ಇದು ಕೇವಲ ಸೈಕ್ಲೋಥಾನ್‌ಗಿಂತ ಹೆಚ್ಚು-ಇದು CISF ನ ಧೈರ್ಯ, ಸಮರ್ಪಣೆ ಮತ್ತು ಅದಮ್ಯ ಮನೋಭಾವಕ್ಕೆ ಸಾಕ್ಷಿಯಾಗಿದೆ. ಪ್ರತಿ ಮೈಲಿ, ಪ್ರತಿ ಪೆಡಲ್ ಮತ್ತು ಪ್ರತಿ ಹೃದಯ ಬಡಿತದೊಂದಿಗೆ, CISF ತಂಡವು ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ತನ್ನ ಧ್ಯೇಯವನ್ನು ಪುನರುಚ್ಚರಿಸುತ್ತದೆ ಮತ್ತು ಎಲ್ಲಾ ನಾಗರಿಕರನ್ನು ಸುರಕ್ಷಿತ ಮತ್ತು ಸಮೃದ್ಧ ಭಾರತಕ್ಕೆ ಪ್ರೇರೇಪಿಸುವ ಗುರಿ ಸೈಕ್ಲೋಥಾನ್ ಹೊಂದಿದೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಅವರ್ಸಾ ಗ್ರಾಪಂ ಅಧ್ಯಕ್ಷೆ ಸವಿತಾ ಆಗೇರ,ಹಟ್ಟಿಕೆರಿ ಗ್ರಾಪಂ ಅಧ್ಯಕ್ಷೆ ನಿಶಾ ನಾಯ್ಕ ಪ್ರಮುಖರಾದ ಸಾಯಿಕಿರಣ ಶೆಟಿಯಾ,ಸಂಜಯ ನಾಯ್ಕ ಭಾವಿಕೇರಿ,ಜಗದೀಶ ನಾಯಕ ಮೊಘಟಾ,ಶ್ರೀಧರ್ ನಾಯ್ಕ,ಮಂಜುನಾಥ್ ಟಾಕೀಕರ್,ಆಶಾ ನಾಯ್ಕ,ರಾಘವೆಂದ್ರ ನಾಯ್ಕ,ನಿಲೇಶ್ ನಾಯ್ಕ,ಮಂಕಾಳು ಗೌಡ,ಸುಬಾಶ್ ನಾಯ್ಕ,ರಾಘವೇಂದ್ರ ನಾಯ್ಕ ಕನಸೆಗದ್ದೆ,ನಾಗರಾಜ ನಾಯ್ಕ ಸೇರಿದಂತೆ,ಊರ ನಾಗರಿಕರು ಉಪಸ್ಥಿತರಿದ್ದರು.


Leave a Reply