ಮುಂಡಗೋಡ : ಪಟ್ಟಣದ ಶಿರಸಿ-ಹುಬ್ಬಳ್ಳಿ ರಸ್ತೆಯ ಎಚ್ ಪಿ ಪೆಟ್ರೋಲ್ ಬಂಕ್ ಬಳಿಯ ನ್ಯೂ ಸೂರ್ಯ ಸಾವಜಿ ಹೊಟೇಲ್ ನಲ್ಲಿ ಅಪ್ರಾಪ್ತ 17 ವರ್ಷದ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.

ಪಟ್ಟಣದ ಹೊಸ ಓಣಿ ಯ ಮಂಜುನಾಥ ಪ್ರಕಾಶ ಚಿಗಳ್ಳಿ (17) ಎನ್ನುವನು ನೇಣು ಬಿಗಿದು ಆತ್ಮಹತ್ಯೆ ಗೆ ಶರಣಾಗಿದ್ದಾನೆ.ಐ ಟಿ ಐ ಓದುತ್ತಿದ್ದ ಮಂಜುನಾಥ್ ಚಿಗಳ್ಳಿ ಬೆಳಿಗ್ಗೆ ಮನೆಯಿಂದ ತಮ್ಮ ಹೊಟೇಲ್ ಬಾಗಿಲು ತೆರೆಯಲು ಹೋಗಿದ್ದ ಎನ್ನಾಲಾಗಿದ್ದು,ಮನೆಗೆ ಮರಳಿ ಬಾರದ ಹಿನ್ನೆಲೆಯಲ್ಲಿ ಪಾಲಕರು ಹೋಟೆಲ್ ಬಳಿ ತೆರಳಿದ್ದರು,ಈ ಸಂದರ್ಭದಲ್ಲಿ ಮಂಜುನಾಥ್ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾನೆ.

ಆತ್ಮಹತ್ಯೆ ಮಾಡಿಕೊಂಡ ಯುವಕನಿಗೆ ಸರ್ಕಾರಿ ತಾಲೂಕಾ ಆಸ್ಪತ್ರೆಗೆ ದಾಖಲಿಸಿದು ವೈದ್ಯರು ಪರಿಶೀಲಿಸಿ ಆತನು ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.

ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು,ಸಾವಿಗೆ ಮಾಹಿತಿ ತಿಳಿದು ಬಂದಿಲ್ಲ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Leave a Reply