ಅಂಕೋಲಾ: ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮತ್ತು ಸಮಾಜ ಸೇವೆ ಹಾಗೂ ಕ್ರಿಡೆಯಲ್ಲಿ ಸಾಧನೆ ಮಾಡಿದ ನಾಮಧಾರಿ ಸಮಾಜದವರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆರ್ಯ ಈಡಿಗ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ನಾಗೇಶ ನಾಯ್ಕ ಆಚಾ ಹೇಳಿದರು.

ಅವರು ಶುಕ್ರವಾರ ಪಟ್ಟಣದ ನಾಮಧಾರಿ ಕಲ್ಯಾಣ ಮಂಟಪದಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಂಡು ಮಾತನಾಡಿ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೂವರಿಗೆ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಿಂದ ತಲಾ ಮೂವರಿಗೆ ಹಾಗೆಯೇ ಸಮಾಜ ಸೇವೆ ವಿಭಾಗದಲ್ಲಿ ಓರ್ವರಿಗೆ, ಕ್ರೀಡೆಯಲ್ಲಿ ಸಾಧನೆ ಮಾಡಿದ ಮೂವರಿಗೆ ಪುರಸ್ಕರಿಸಲಾಗುವುದು ಎಂದರು.
ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ, ಫೋಟೋಗಳನ್ನು ಮೇ ೨೨ರ ಒಳಗಾಗಿ ಪ್ರೀಯಾ ಕಂಪ್ಯೂಟರ್, ಬಸ್ ನಿಲ್ದಾಣದ ಎದುರಿನ ಕೆ.ಸಿ. ರಸ್ತೆ, ಹಾಗೂ ಸೃಷ್ಠಿ ಪವರ್ ದಿನಕರ ದೇಸಾಯಿ ರಸ್ತೆ ಇವರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಶ್ರೀಧರ ನಾಯ್ಕ-9343560308 ಇವರಿಗೆ ಸಲ್ಲಿಸುವಂತೆ ಕೋರಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಹಳವಳ್ಳಿ ಉಪ ಸಮಿತಿಯ ಮಾಜಿ ಅಧ್ಯಕ್ಷ ಆನಂದ ನಾಯ್ಕ ಪ್ರಮುಖರಾದ ಶ್ರೀಧರ ನಾಯ್ಕ, ಉಮೇಶ ಜಿ. ನಾಯ್ಕ, ಉದಯ ನಾಯ್ಕ, ಮೋಹನ ನಾಯ್ಕ, ಎನ್.ಕೆ. ನಾಯ್ಕ, ಪ್ರಕಾಶ ನಾಯ್ಕ, ಶ್ರಯನ್ ಸುರೇಶ ನಾಆಯ್ಕ, ಅರುಣ ನಾಗಪ್ಪ ನಾಯ್ಕ, ಲೋಕೇಶ ಪರಮೇಶ್ವರ ನಾಯ್ಕ, ಗೋವಿಂದ್ರಾಯ ಕೆ. ನಾಯ್ಕ ಇತರರಿದ್ದರು.

ಈ ಬಾರಿ ಪತಿಭಾ ಪುರಸ್ಕಾರವನ್ನು ಡೊಂಗ್ರಿ ಪಂಚಾಯಿತಿ ವ್ಯಾಪ್ತಿಯ ಹಳವಳ್ಳಿಯಲ್ಲಿ ಮೇ 25 ರಂದು ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಿಗ್ಗೆ 9 ಗಂಟೆಯಿಂದ ಸತ್ಯನಾರಾಯಣ ಪೂಜೆ ನಡೆಯಲಿದೆ. 11 ಗಂಟೆಗೆ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಇದೇ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಲಿದ್ದಾರೆ.

ಶಾಸಕ ಭೀಮಣ್ಣ ಟಿ. ನಾಯ್ಕ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷ ನಾಗೇಶ ನಾಯ್ಕ ಆಚಾ ಅಧ್ಯಕ್ಷತೆ ವಹಿಸಲಿದ್ದಾರೆ. ಹೆಚ್ಚುವರು ಪೊಲೀಸ್ ಅಧಿಕಾರಿ ಜಗದೀಶ ಎಂ. ನಾಯ್ಕ, ಡಿ.ಎ.ಆರ್. ರಾಘವೇಂದ್ರ ಆರ್. ನಾಯ್ಕ, ಸಮಾಜದ ಮುಖಂಡರಾದ ರವೀಂದ್ರ ನಾಯ್ಕ, ಸೂರಜ್ ನಾಯ್ಕ ಸೋನಿ, ಮಂಜುನಾಥ ಎಲ್. ನಾಯ್ಕ, ಆರ್. ಐ. ನಾಯ್ಕ, ರಾಜೇಂದ್ರ ನಾಯ್ಕ, ಎಂ.ಪಿ. ನಾಯ್ಕ. ದಾಮೋದರ ಜಿ. ನಾಯ್ಕ, ಡಾ. ಕರುಣಾಕರ ನಾಯ್ಕ, ಉಮೇಶ ಜಿ. ನಾಯ್ಕ, ಶಿವಾನಂದ ನಾಯ್ಕ, ವೆಂಕಪ್ಪ ನಾಯ್ಕ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.


