ಹೊನ್ನಾವರ: ತಾಲೂಕಿನ ಶರಾವತಿ ನದಿಯಲ್ಲಿ ಅಕ್ರಮ ಮರಳು ತುಂಬುತ್ತಿದ್ದ ಲಾರಿ ಮುಗುಚಿ ಬಿದ್ದಿದ್ದು,ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ತಾಲೂಕಿನ ಕಾಸರಗೋಡು ಬಳಿ ನಡೆದಿದೆ.

ಹೌದು…ತಾಲೂಕಿನ ಶರಾವತಿ ನದಿಯಲ್ಲಿ ವರ್ಷವಿಡೀ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದನ್ನು ಖಂಡಿಸಿ ಸಾರ್ವಜನಿಕರು ಹಾಗೂ ಮೀನುಗಾರರು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡುತ್ತಾ ಬಂದಿದ್ದಾರೆ,ಆದರೂ ಯಾವುದೇ ಪ್ರಯೋಜನವಾವಿಲ್ಲ ಅಧಿಕಾರಿಗಳು ಅಕ್ರಮ ಮರಳುಸಾಗಿಸುವವರ ನಡುವಿನ ಒಳ ಒಪ್ಪಂದದ ಕಾರಣದಿಂದ ಎಗ್ಗಿಲ್ಲದೇ ಮರಳು ಸಾಗಾಟ ನಡೆಯುತ್ತಿತ್ತು.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಕಾಟಾಚಾರಕ್ಕೆ ಮರಳು ವಾಹನ ತಡೆಯಲು ಬಂದಾಗಲು ಸಹ ಸ್ಥಳೀಯ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ವಾಪಸ್ಸಾಗುತ್ತಿದ್ದರು. ಹಲವು ಬಾರಿ ಮರಳು ಸಾಗಾಟ ವಾಹನ ತಡೆಯುತ್ತಿದ್ದೇವೆ ಎಂದು ಪೊಲೀಸ್ ಇಲಾಖೆಯವರು ತಪಾಸಣೆ ನಡೆಸುವ ಕಾರ್ಯ ಮಾಡುತ್ತಿದ್ದಾರೆ.

ಇದೀಗ ಕಾಸರಕೋಡ ಗ್ರಾಪಂ ವ್ಯಾಪ್ತಿಯಲ್ಲಿ ಟಿಪ್ಪರ ವಾಹನವೊಂದು ಶರಾವತಿ ನದಿ ತೀರದಲ್ಲಿ ಮರಳು ತುಂಬುವಾಗ ಹೊಳೆಯಲ್ಲಿ ಬಿದ್ದಿದೆ. ಕಳೆದ ಮೂರು ದಿನದಿಂದ ಹೊನ್ನಾವರದಲ್ಲಿ ಸುರಿಯುತ್ತಿರುವ ಮಳೆಯ ಕಾರಣದಿಂದ ನದಿಯ ಸಮೀಪದ ಭಾಗವು ತೆವಗೊಂಡು ಕುಸಿದಿದೆ.

ವಾಹನದಲ್ಲಿ ಮರಳು ಸಮೇತ ನದಿಯಲ್ಲಿ ಬಿದ್ದಿದ್ದು ಅದೃಷ್ಟವಶಾತ್ ಚಾಲಕ ಪ್ರಾಣಾಪಯದಿಂದ ಪಾರಾಗಿದ್ದಾರೆ. ಕ್ರೇನ್ ಮೂಲಕ ಟಿಪ್ಪರ ಮೇಲಕ್ಕೆ ಎತ್ತುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿರುದರಿಂದ ಇದೀಗ ಅಕ್ರಮ ಮರಳು ಸಾಗಾಟ ನಡೆಸುವರಿಗೆ ಇರುಸು ಮುರುಸಾಗಿದೆ. ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಾಕ್ಷಿ ಸಮೇತ ಮರಳು ಸಾಗಾಟದ ವಿಡಿಯೋ ಆಧರಿಸಿ ಪ್ರಕರಣ ದಾಖಲಿಸುತ್ತಾರಾ? ಅಥವಾ ಜನಪ್ರತಿನಿಧಿಗಳು ಒತ್ತಡಕ್ಕೆ ಮಣಿದು ಪ್ರಕರಣ ದಾಖಲು ಮಾಡದೇ ಮುಚ್ಚಿ ಹಾಕುತ್ತಾರೋ ಎನ್ನುವುದು ಸಾರ್ವಜನಿಕ ವಲಯದಲ್ಲಿ ಬಾರೀ ಚರ್ಚೆಗೆ ಗ್ರಾಸವಾಗಿದೆ.


Leave a Reply