ಕಾರವಾರ ಕಾರ್ಯನಿರತ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ : ಪದಾಧಿಕಾರಿಗಳ ಅವಿರೋಧ ಆಯ್ಕೆ

Spread the love

ಕಾರವಾರ : ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರವಾರ ತಾಲೂಕಾ ಘಟಕದ ಕಾರ್ಯನಿರತ ಪತ್ರಕರ್ತರ ನೂತನ ಸಂಘದ ಪದಾಧಿಕಾರಿಗಳ ಆಯ್ಕೆಯನ್ನ‌ ಪತ್ರಿಕಾಭವನದಲ್ಲಿ ನಡೆಸಲಾಗಿದ್ದು, ಪದಾಧಿಕಾರಿಗಳನ್ನ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಂಘದ ನೂತನ ಅಧ್ಯಕ್ಷರಾಗಿ ಪವರ್‌ ಟಿವಿ ಜಿಲ್ಲಾ ವರದಿಗಾರ ಉದಯ ಬರ್ಗಿ, ಉಪಾಧ್ಯಕ್ಷರಾಗಿ ವಿಜಯ ಕರ್ನಾಟಕ ಜಿಲ್ಲಾ ವರದಿಗಾರ ಪ್ರಮೋದ ಹರಿಕಂತ್ರ, ಕಾರ್ಯದರ್ಶಿಯಾಗಿ ನ್ಯೂಸ್ 18 ಜಿಲ್ಲಾ ವರದಿಗಾರ ದರ್ಶನ ನಾಯ್ಕ, ಖಜಾಂಚಿಯಾಗಿ ಸುವರ್ಣವಾಹಿನಿ ಜಿಲ್ಲಾ ವರದಿಗಾರ ಭರತರಾಜ್ ಕಲ್ಲಡಕ  ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ನಾಗರಾಜ್ ಹರಪನಹಳ್ಳಿ,ದೀಪಕ್ ಕುಮಾರ್ ಶೆಣ್ವಿ, ದೀಪಕ್ ಗೋಕರ್ಣ, ಗಿರೀಶ್ ನಾಯ್ಕ‌ ಬಾಡ, ಗಣೇಶ್ ಹೆಗಡೆ, ಪ್ರವೀಣ್ ,  ಗೌತಮ್ ಬಾಡಕರ್, ಗಿರೀಶ್ ಬಾಂದೇಕರ್, ಕಿಶನ್, ಸುರೇಂದ್ರ ಕಲ್ಗುಟಕರ್, ದೀಪಕ್ ರೇವಣಕರ್  ಸೇರಿದಂತೆ ಹಲವರು ಉಪಸ್ಥಿತರಿದ್ದರು. ‌

ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಶಿರಸಿಯಲ್ಲಿ ಜಿಲ್ಲಾ ಕೇಂದ್ರ ಹೊಂದಿದ್ದು ಈವರೆಗೆ ಜಿಲ್ಲೆಯ 11 ತಾಲೂಕಿನಲ್ಲಿ ತಾಲೂಕಾ ಸಂಘವನ್ನು ಹೊಂದಿತ್ತು. 2025ನೇ ಸಾಲಿನಲ್ಲಿ ಕಾರವಾರದಲ್ಲೂ ಸಹ ತಾಲೂಕಾ ಸಂಘವನ್ನು ಹೊಂದುವ ಮೂಲಕ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಕಾರ್ಯನಿರತ ಪತ್ರಕರ್ತರ ಸಂಘ ಕಾರ್ಯಚಟುವಟಿಕೆ ಆರಂಭಿಸಿದಂತಾಗಿದೆ. 

ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಅದರ ಅಡಿಯಲ್ಲಿ ಬರುವ ಎಲ್ಲ ತಾಲೂಕಾ ಸಂಘಗಳು ಕರ್ನಾಟಕ ಸರಕಾರದಿಂದ ಮಾನ್ಯತೆ ಪಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಇದರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.


ಕಾರವಾರ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ ಹಾಗೂ ನೂತನವಾಗಿ ಸಂಘ ಆರಂಭಿಸಲು ಸಹಕರಿಸಿದ ಸರ್ವ ಸದಸ್ಯರನ್ನು ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರರ್ಕರ ಸಂಘದ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ, ಪ್ರಧಾನ ಕಾರ್ಯದರ್ಶಿ ಸುಮಂಗಲಾ ಹೊನ್ನೆಕೊಪ್ಪ, ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಪಾಟೀಲ, ಪದಾಧಿಕಾರಿಗಳು ಹಾಗೂ ಕಾರ್ಯಕಾರಿಣಿ ಸದಸ್ಯರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *