ರಾಜಕೀಯ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೆ ಮಾತ್ರ ಆರ್ಥಿಕ ಸದೃಢತೆ ಸಾಧ್ಯ- ಎಂ ಜಗದೀಶ.

Spread the love

ಅಂಕೋಲಾ: ನಮ್ಮ ಸಮಾಜ ರಾಜಕೀಯ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೆ ಮಾತ್ರ ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದು ಉತ್ತರ ಕನ್ನಡ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಗದೀಶ್ ಎಂ ಹೇಳಿದರು.

ಅವರು ತಾಲೂಕಾ ನಾಮಧಾರಿ ಅಭಿವೃದ್ಧಿ ಸಂಘ ರಿ.(ಒಕ್ಕೂಟ) ಅಂಕೋಲಾ ಮತ್ತು ನಾಮಧಾರಿ ಸಂಘ (ಉಪಸಮಿತಿ) ಹಳವಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಸಿದ್ಧಿವಿನಾಯಕ ಸಭಾಭವನ ಹಳವಳ್ಳಿಯಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿ ಮಾತನಾಡಿ ಜಿಲ್ಲೆಯ ಬಹುಸಂಖ್ಯಾತರೆಂದೇನಿಸಿಕೊಂಡ ನಾಮಧಾರಿ ಸಮಾಜವು ಪ್ರತಿಯೊಂದು ವಿಭಾಗದಲ್ಲಿ ಸಾಧನೆಗೈದಿದ್ದಾರೆ, ಮುಂದಿನ ದಿನಗಳಲ್ಲಿ ನಮ್ಮವರು ಎಲ್ಲಾ ಸಮಾಜದವರೊಂದಿಗೆ ಬೆರೆತು ಅವರಲ್ಲಿರುವ ಉತ್ತಮ ಅಂಶವನ್ನು ಹುಡುಕಿ ಅದನ್ನು ನಾವು ಅಳವಡಿಸಿಕೊಂಡು ಮತ್ತಷ್ಟು ಹೆಮ್ಮೆಪಡುವಂತೆ ಬದುಕಬೇಕು.ರಾಜಕೀಯದಲ್ಲಿಯೂ ಸಹ ರಾಜ್ಯಮಟ್ಟದಲ್ಲಿ ನಮ್ಮವರು ಬೆಳೆದು ನಮ್ಮ ಸಮಾಜಕ್ಕೆ ಆಸರೆಯಾಗುವಂತಹ ಕಾರ್ಯ ಆಗಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಾಮಧಾರಿ ಸಮಾಜದ ಮುಖಂಡರಾದ ಸೂರಜ್ ನಾಯ್ಕ ಸೋನಿ ಮಾತನಾಡಿ ಅಂಕೋಲೆಯ ತುತ್ತ ತುದಿ ಹಳವಳ್ಳಿ ಗ್ರಾಮದಲ್ಲಿ ಕೆಲವೇ ಕುಟುಂಬಗಳಿದ್ದರು ಅಚ್ಚುಕಟ್ಟಾಗಿ ಸಮಾಜದ ಕಾರ್ಯಕ್ರಮವನ್ನು ಹಮ್ಮಿಕೊಂಡಂತ ಇಲ್ಲಿಯ ಸಮಾಜಬಾಂದವರ ಕಾರ್ಯ ಶ್ಲಾಘನೀಯ. ಇಂದಿನ ಕಾರ್ಯಕ್ರಮದಲ್ಲಿ ನಮ್ಮ ಸಮಾಜದ ಉನ್ನತ ಅಧಿಕಾರಿಗಳ ಉಪಸ್ಥಿತಿ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿದೆ. ನಾವು ಹುಟ್ಟ ನಾಯಕರು ನಾವು ಬೇರೆ ಸಮಾಜದವರಿಗೂ ಸಹಿತ ಗೌರವದಿಂದ ಕಾಣಬೇಕು ಎಂದರು. ನಾವೆಷ್ಟು ಬೆಳೆದರು ನಮ್ಮ ಹಿರಿಯರನ್ನು,ನಮ್ಮ ಕುಟುಂಬವನ್ನು ಮರೆಯಬಾರದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಕರ್ನಾಟಕ ಆರ್ಯ ಈಡಿಗ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ನಾಗೇಶ್ ನಾಯ್ಕ ಆಚಾ ಮಾತನಾಡಿ ಸಮಾಜ ಕಟ್ಟುವಲ್ಲಿ ಕೆ ಎಲ್ ನಾಯ್ಕ ಸರ್ ಅವರ ಪಾತ್ರ ಪ್ರಮುಖವಾದದ್ದು, ಎಷ್ಟೇ ದೊಡ್ಡ ವ್ಯಕ್ತಿಗಳಾಗಿ ಜನ್ಮ ಕೊಟ್ಟಂತ ತಂದೆತಾಯಿ, ಶಿಕ್ಷಣನೀಡಿದಂತ ಗುರುಗಳು, ಜೀವನಕ್ಕೆ ದಾರಿತೋರಿ ಬೆಳೆಸಿದವರನ್ನು ಇಂದಿಗೂ ಮರೆಯಬಾರದು.ಮುಂದಿನ ದಿನಗಳಲ್ಲಿ ಗ್ರಾಮೀಣ ಬಾಗದ ನಮ್ಮ ಸಮಾಜದ ಪ್ರತಿಭಾನ್ವಿತರನ್ನು ಹುಡುಕಿ ಅವರಿಗೆ ಸರಿಯಾದ ವೇದಿಕೆಯನ್ನು ಕಲ್ಪಿಸಲು ಮುಂದಾಗಲಿದ್ದೇವೆ.ತಾಲೂಕಿನ ಎಲ್ಲಾ ಸಂಘಟನೆಗಳು ಮುಂದಿನ ದಿನಗಲ್ಲಿ ಒಗ್ಗಟ್ಟಾಗಿ ಸಮಾಜವನ್ನು ಮುನ್ನೆಡೆಸಲಿದೆ ಎಂದರು.

ಈ ಸಂದರ್ಭದಲ್ಲಿ ಡಿ ಆರ್ ಡಿವೈಎಸ್ಪಿ ರಾಘವೇಂದ್ರ ಆರ್ ನಾಯ್ಕ, ವಲಯ ಅರಣ್ಯಾಧಿಕಾರಿ ಸುರೇಶ ನಾಯ್ಕ,ನಾಮಧಾರಿ ಸಮಾಜದ ಮುಖಂಡರಾದ ರವೀಂದ್ರನಾಥ ನಾಯ್ಕ,ರಾಜೇಂದ್ರ ವಿ ನಾಯ್ಕ,ರಾಮಚಂದ್ರ ಆಯ್ ನಾಯ್ಕ,ದಂತ ವೈದ್ಯ ಕರುಣಾಕರ ನಾಯ್ಕ ಪ್ರಮುಖರಾದ ದಾಮೋದರ ನಾಯ್ಕ, ಉಮೇಶ ನಾಯ್ಕ,ಶಿವಾನಂದ ನಾಯ್ಕ,ವೆಂಕಪ್ಪ ಟಿ ನಾಯ್ಕ,ಆನಂದ ವಿ ನಾಯ್ಕ,ಶೋಭಾ ನಾಯ್ಕ,ಸುರೇಶ್ ನಾಯ್ಕ,ಸುಬ್ರಾಯ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.

ಈ ಸಂದರ್ಭದಲ್ಲಿ ಹಳವಳ್ಳಿ ಗ್ರಾಮದ ಗ್ರಾಮಸ್ಥರು ಹಾಗೂ ತಾಲೂಕಿನ ನಾಮಧಾರಿ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಶಯನ್ ನಾಯ್ಕ ಸ್ವಾಗತಿಸಿದರು,ಸೌಂದರ್ಯ ನಾಯ್ಕ ವಂದಿಸಿದರು,ಕೃಷ್ಣ ಜಿ ನಾಯ್ಕ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಸಾದನೆಗೈದ ಸಮಾಜದ ವಿದ್ಯಾರ್ಥಿಗಳನ್ನು ಹಾಗೂ ಸಮಾಜ ಸೇವೆ,ಕ್ರೀಡೆಯಲ್ಲಿ ಸಾಧನೆಗೈದ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು.

Leave a Reply

Your email address will not be published. Required fields are marked *