ಅಕ್ರಮ ಮದ್ಯ ಸಾಗಾಟ ಪ್ರಕರಣ: 14 ವರ್ಷದಿಂದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ವಶಕ್ಕೆ!

Spread the love

ಕಾರವಾರ: ಅಕ್ರಮ ಮದ್ಯಸಾಗಾಟ ಆರೋಪದಲ್ಲಿ ಬರೋಬ್ಬರಿ 14 ವರ್ಷದಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಚಿತ್ತಾಕುಲ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೌದು..2011 ನವೆಂಬರ್ 19 ರಂದು  KA 02 ET 9804 ನಂಬರಿನ ಬೈಕಿನಲ್ಲಿ 4000 ರೂಪಾಯಿ ಮೌಲ್ಯದ ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯವನ್ನು ಸಾಗಾಟ ಮಾಡುತ್ತಿರುವ ಸಂದರ್ಭದಲ್ಲಿ ಆಂಧ್ರಪ್ರದೇಶ ಕಡಪಾ ಮೂಲದ ಶಿವರಾಮಿ ಸುಬ್ಬಾ ರೆಡ್ಡಿ ಎಂಬಾತನನ್ನು ಅಭಕಾರಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅಂದು ಜಾಮೀನಿನ ಪಡೆದು ಬಂಧನ ಮುಕ್ತರಾಗಿದ್ದ ಶಿವರಾಮಿ ರೆಡ್ಡಿ 14 ವರ್ಷಗಳ ಕಾಲ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು, ಈತನನ್ನು ಪತ್ತೆ ಹಚ್ಚಿ  ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಆದೇಶಿಸಿದ್ದರು.

ಈ ಪ್ರಕರಣ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ ಹಾಗೂ ಜಗದೀಶ ಎಂ,ಡಿವೈಎಸ್ಪಿ ಗಿರೀಶ ಮಾರ್ಗದರ್ಶನದಲ್ಲಿ ಕದ್ರಾ ಸಿಪಿಐ ಪ್ರಕಾಶ ದೇವಾಡಿಗ ನೇತೃತ್ವದಲ್ಲಿ ಚಿತ್ತಾಕುಲ ಠಾಣೆಯ ಪಿಎಸೈಗಳಾದ ಮಹಾಂತೇಶ ವಾಲ್ಮೀಕಿ ಹಾಗೂ ನರಸಿಂಹಲು ನೇತೃತ್ವದ ತಂಡ ಆರೋಪಿಯ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಚಿತ್ತಾಕುಲ ಪೊಲೀಸ್ ಠಾಣೆಯ ಎಎಸ್‌ಐ ದೀಪಕ ನಾಯ್ಕ, ಸಿಬ್ಬಂದಿಗಳಾದ ಶ್ರೀಕಾಂತ ಡಿ ನಾಯ್ಕ, ಮುಕುಂದ ವಿ ನಾಯ್ಕ, ಪಿ ದೇವರಾಜ, ಗೌತಮ ರಾಜ್, ದಿವ್ಯಜ್ಯೋತಿ, ಸಾವಿತ್ರಿ ಸನದಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *