Spread the love

ಅಂಕೋಲಾ: ಶಿಕ್ಷಕರು ಎಂದಿಗೂ ನಿವೃತ್ತರಾಗುವುದಿಲ್ಲ,ಬದಲಾಗಿ ನಿಸ್ವಾರ್ಥದಿಂದ ವಿದ್ಯಾರ್ಥಿಗಳ ಏಳ್ಗೆಯನ್ನು ಪೋಷಕರಿಗಿಂತಲೂ ಮೊದಲು ಸಂಭ್ರಮಿಸುವವರು ಶಿಕ್ಷಕರು ಮಾತ್ರ ಅವರು ವಿದ್ಯಾರ್ಥಿಗಳ ಬದುಕಿನಲ್ಲಿ ಎಂದೆಂದಿಗೂ ಚಿರಸ್ಥಾಯಿ ಎಂದು ತಹಶೀಲ್ದಾರ್ ಡಾ.ಚಿಕ್ಕಪ್ಪ ನಾಯಕ ಹೇಳಿದರು.

ಅವರು ಪಟ್ಟಣದ ನಾಡವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಪಂಚಾಯತ್ ಉತ್ತರ ಕನ್ನಡ,ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಿಕ್ಷಕರ ದಿನಾಚರಣೆ ಸಮಿತಿ ಅಂಕೋಲಾ ಹಾಗೂ ದಿ ಅಂಕೋಲಾ ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್ ಲಿ. ಇವರ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ ಶಿಕ್ಷಕರು ಕಾರ್ಯ ತುಂಬಾ ಮಹತ್ವಪೂರ್ಣವಾದದು,ಒಂದು ವ್ಯಕ್ತಿಯನ್ನು ಪರಿಪೂರ್ಣ ಅಗಬೇಕೆಂದರೆ ಶಿಕ್ಷಕರ ಪಾತ್ರ ಬಹುಮುಖ್ಯ, ನಾನೊಬ್ಬ ಅನರಕ್ಷಸ್ಥ ಕುಟುಂಬದಲ್ಲಿ ಹುಟ್ಟಿದ್ದು ಇಂದು ನಾನು ಎಂ ಬಿ ಬಿ ಎಸ್ ಹಾಗೂ ಕೆ ಎ ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಇಂದು ತಹಸೀಲ್ದಾರ್ ಆಗಿ ನಿಮ್ಮ ಮುಂದೆ ನಿಂತಿದ್ದೇನೆ ಅಂದರೆ ನನ್ನ ತಂದೆತಾಯಿಯರ ಪರಿಶ್ರಮದಂತೆ ನನ್ನನ್ನು ತಿದ್ದಿ ತೀಡಿದ ಗುರುಗಳು ಮುಖ್ಯ ಕಾರಣ ಎಂದು ತಮ್ಮ ಬಾಲ್ಯದಿನಗಳನ್ನು ನೆನೆದರು, ಹಾಗೆಯೇ ಗುರುಗಳಿಗೆ ಶರಣಾಗತಿ  ಪ್ರಸ್ತುತ ದಿನಗಲ್ಲಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಸಂಬಂಧ ಸ್ವಲ್ಪ ಕಡಿಮೆಯಾಗುತ್ತಿದ್ದು ಮುಂದಿನ ದಿನಗಲ್ಲಿ ಈ ಸಂಬಂಧ ವೃದ್ಧಿಯಾಗುವಂತೆ ನೋಡಿಕೊಳ್ಳಬೇಕು ಎಂದರು.

ವೇದಿಕೆಯಲ್ಲಿ ಗ್ಯಾರಂಟಿ ಪ್ರಾಧಿಕಾರದ ತಾಲೂಕಾಧ್ಯಕ್ಷ ಪಾಂಡುರಂಗ ಗೌಡ, ಭಾಸ್ಕರ ಗಾಂವಕರ, ನ್ಯಾಯವಾದಿ ನಾಗಾನಂದ ಬಂಟ, ಉಪನ್ಯಾಸಕ ಉಲ್ಲಾಸ ಹುದ್ದಾರ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ರಾಯ್ಕರ, ದೈಹಿಕ ಶಿಕ್ಷಣ ಪರಿವೀಕ್ಷಕ ಮಂಜುನಾಥ ನಾಯಕ, ಶಿಕ್ಷಕರಾದ ದೇವರಾಯ ನಾಯಕ, ಗಣಪತಿ ನಾಯಕ, ರಮಾನಂದ ನಾಯಕ, ಮಂಜುನಾಥ ನಾಯಕ, ರಾಜೇಶ ನಾಯ್ಕ ಉಪಸ್ಥಿತರಿದ್ದು ಮಾತನಾಡಿದರು.

ಕಾರ್ಯಕ್ರಮದಲ್ಲಿ ತಾಲೂಕಿನ ನಿವೃತ್ತ ಶಿಕ್ಷಕ-ಶಿಕ್ಷಕಿಯರನ್ನು ಹಾಗೂ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸನ್ಮಾನವನ್ನು ಪಡೆದು ಅನೇಕ ನಿವೃತ್ತ ಶಿಕ್ಷಕರು ತಮ್ಮ ಅನುಭವವನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಪಿ ಎಂ ಸಂಯುಕ್ತ ಪದವಿ ಪೂರ್ವ ಕಾಲೇಜು ಉಪನ್ಯಾಸ ಉಲ್ಲಾಸ ಹುದ್ದಾರ್ ಶಿಕ್ಷಕರ ಮಹತ್ವತೆಯ ಕುರಿತು ಉಪನ್ಯಾಸ ನೀಡಿ ಗುರು-ಶಿಶ್ಯರ ಬಾಂಧವ್ಯತೆ ಹೆಚ್ಚುತ್ತಲೇ ಇರಬೇಕು,ಶಿಕ್ಷಕನಾದವ ಕೊನೆ ಉಸಿರಿನವರೆಗೂ ವಿದ್ಯಾರ್ಥಿಗಳ ಬದುಕನ್ನು ಕಟ್ಟಿಕೊಡುವ ಪ್ರಯತ್ನದಲ್ಲಿರಬೇಕು, ಅಂದು ಶಾಲೆಯಲ್ಲಿ ಶಿಕ್ಷಕರಿಂದ ಹೊಡೆತ ತಿಂದವರು ಇಂದು ಜಗತ್ತನ್ನು ಮುನ್ನಡೆಸುತ್ತಿದ್ದಾರೆ. ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸಬೇಕು,ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು.ಇವತ್ತಿನ ದಿನಗಲ್ಲಿ ಮಕ್ಕಳ ಕೈಯ್ಯಲ್ಲಿ ಅಂತರ್ಜಾಲ ಹಾಗೂ ಮೊಬೈಲ್ ಗಳಿಂದ ಕೇವಲ ಮಾಹಿತಿಯಷ್ಟೇ ದೊರೆತು, ಜ್ಞಾನ ಕುಂಠಿತಗೊಳ್ಳುತ್ತಿದೆ, ಶಿಕ್ಷಕರುಮಕ್ಕಳ ಪ್ರತಿಭೆಯನ್ನು ಗುರುತಿಸಿ ಪಾಲಕರ ಗಮನಕ್ಕೆ ತಂದು ಯೋಗ್ಯವಾದ ದಾರಿಯನ್ನು ಕಲ್ಪಿಸಬೇಕು ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಜಿ‌ ನಾಯಕ ಹೊಸ್ಕೇರಿ ಸನ್ಮಾನ ಕಾರ್ಯಕ್ರಮವನ್ನು ನಿರ್ವಹಿಸಿದರು.ತಾ.ಪಂ. ಕಾರ್ಯನಿರ್ವಹಣಾಧಿಕಾರಿ
ರಾಮು ಗುನಗಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ರಾಯ್ಕರ ಪ್ರಾಸ್ತಾವಿಕ ಮಾತನಾಡಿದರು.

ಶಿಕ್ಷಕರು, ಸ.ಹಿ.ಪ್ರಾ. ಶಾಲೆಯ ಶಿಕ್ಷಕ , ಅಗ್ರಗೋಣ ಸ.ಹಿ ಪ್ರಾ ಶಾಲೆಯ ಶಿಕ್ಷಕ ರಾಜೇಶ ನಾಯಕ, ಸೂರ್ವೆ ಹಾಗೂ ಕೇಣಿ ಸ.ಮಾ.ಹಿ. ಪ್ರಾ. ಶಾಲೆಯ ಶಿಕ್ಷಕಿ ರಶೀದಾ ಎಸ್. ಶೇಖ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಮೇಘನಾ ಗೋವಿಂದ ಗೌಡ ಯಕ್ಷನೃತ್ಯವನ್ನು ಮತ್ತು ಶ್ರುತಿ ಮಡಿವಾಳ ಭರತನಾಟ್ಯವನ್ನು ಪ್ರದರ್ಶಿಸಿದರು. ಶಿಕ್ಷಕ ರಾಮನಾಥ ಸಂಗಡಿಗರು ಪ್ರಾರ್ಥಿಸಿ ನಾಡಗೀತೆಯನ್ನು ಪ್ರಸ್ತುತಪಡಿಸಿದರು.

Leave a Reply

Your email address will not be published. Required fields are marked *