Spread the love

ಕಾರವಾರ: ಸ್ಥಳೀಯ ಸಂಸ್ಥೆಗಳ ಆಡಳಿತಾವಧಿ ಮುಗಿದ ಬೆನ್ನಲ್ಲೇ ಶುಕ್ರವಾರ ಸರಕಾರ ಆಡಳಿತಾಧಿಕಾರಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು, ಅಂಕೋಲಾ ಪುರಸಭೆಗೆ ಆಡಳಿತಾಧಿಕಾರಿ ನೇಮಿಸದಂತೆ ತಡೆಯಾಜ್ಞೆ ನೀಡಿರುವ ಧಾರವಾಡ ಉಚ್ಛ ನ್ಯಾಯಾಲಯ ಆದೇಶಿಸಿದ್ದು, ಮುಂದಿನ ಆದೇಶದವರೆಗೆ ಅಂಕೋಲಾ ಪುರಭೆಯಲ್ಲಿ ಜನಪ್ರತಿನಿಧಿಗಳ ಅಧಿಕಾರಾವಧಿ ಮುಂದುವರೆಯಲಿದೆ.

ಹೌದು… ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳ ಆಡಳಿತಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸರಕಾರ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಿಸಿದ್ದು,ಈ ಆದೇಶದ ಬೆನ್ನಲ್ಲೇ ಅಂಕೋಲಾ ತಾಲೂಕಿಗೆ ಮಾತ್ರ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎನ್ನಲಾಗಿದೆ.

ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಪೂರ್ಣಾವಧಿ ಅಧಿಕಾರ ಅಂತ್ಯಗೊಳ್ಳದ ಹಿನ್ನೆಲೆಯಲ್ಲಿ ಅಂಕೋಲಾ ಪುರಸಭೆ ಅಧ್ಯಕ್ಷ ಸೂರಜ್ ಮನೋಹರ್ ನಾಯ್ಕ ಆಡಳಿತಾಧಿಕಾರಿ ನೇಮಕಗೊಳಿಸದಂತೆ ಉಚ್ಛ ನ್ಯಾಯಾಲಯದ ಮೊರೆಹೋಗಿದ್ದರು,ಈ ಕುರಿತು ಆದೇಶ ಹೊರಡಿಸಿದ ನ್ಯಾಯಾಲಯ ಮುಂದಿನ ಆದೇಶದವರೆಗೆ ಆಡಳಿತಾಧಿಕಾರಿ ನೇಮಿಸದಂತೆ ತಡೆಯಾಜ್ಞೆ ನೀಡಿ ಗುರುವಾರ ಅದೇಶ ಹೊರಡಿಸಿದೆ.

ಮೇಲೆ ತಿಳಿಸಿದ ರಿಟ್ ಅರ್ಜಿಯಲ್ಲಿ ನಿಯಮ ನಿಸಿಯ ಸಮಸ್ಯೆಯನ್ನು ಬಾಕಿ ಇರಿಸಲಾಗಿದ್ದು, ನ್ಯಾಯಾಲಯವು ನವೆಂಬರ್ 06, 2025 ರಂದು ಗೌರವಾನ್ವಿತ ಶ್ರೀ ನ್ಯಾಯಮೂರ್ತಿ ಅನಂತ್ ರಾಮನಾಥ ಹೆಗ್ಡೆ ಅವರು ರಾಜ್ಯಸರಕಾರವು ಆಡಳಿತಗಾರನನ್ನು ನೇಮಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿರುವುದರಿಂದ, ಮುಂದಿನ ವಿಚಾರಣೆಯ ದಿನಾಂಕದವರೆಗೆ ಆಡಳಿತಗಾರನನ್ನು ನೇಮಿಸದಂತೆ ಪ್ರತಿವಾದಿ-ರಾಜ್ಯಕ್ಕೆ ನಿರ್ಬಂಧವಿದೆ ಎಂದು ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *