ಅಂಕೋಲಾ: ವಲಯದ ಅಬಕಾರಿ ನಿರೀಕ್ಷಕರ ಕಛೇರಿಯಲ್ಲಿ ಸುಮಾರು ಎರಡು ವರ್ಷಗಳಿಂದ ಅಬಕಾರಿ ಮುಖ್ಯಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೃಷ್ಣಮೂರ್ತಿ ಬಂಟ ಹಾಗೂ ರವಿರಾಜ್ ನಾಯಕ ಅಬಕಾರಿ ಉಪನಿರೀಕ್ಷಕರಾಗಿ ಪದೋನ್ನತಿ ಹೊಂದಿದ್ದು ಅವರನ್ನು ಅಬಕಾರಿ ನಿರೀಕ್ಷಕರ ಅಂಕೋಲಾ ವಲಯ ಕಚೇರಿಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಅಬಕಾರಿ ನಿರೀಕ್ಷಕರ ಕಚೇರಿ ಬೆಳ್ತಂಗಡಿ ವಲಯಕ್ಕೆ ಉಪನಿರೀಕ್ಷರಾಗಿ ಕೃಷ್ಣಮೂರ್ತಿ ಬಂಟ ಪದೋನ್ನತಿ ಹೊಂದಿ ವರ್ಗಾವಣೆಯಾಗಿದ್ದಾರೆ.ಹಾಗೂ ಹಾವೇರಿಯ ಅಬಕಾರಿ ಉಪಯುಕ್ತರ ಕಚೇರಿಗೆ ಉಪನಿರೀಕ್ಷಕರಾಗಿ ರವಿರಾಜ್ ನಾಯಕ ಪದೋನ್ನತಿಗೊಂಡು ವರ್ಗಾವಣೆ ಹೊಂದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅಬಕಾರಿ ನಿರೀಕ್ಷಕರಾದ ಚಾಲುಕ್ಯ ಶಹಾಪುರ ನಮ್ಮ ಇಲಾಖೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಮುಖ್ಯ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೃಷ್ಣಮೂರ್ತಿ ಬಂಟ ಹಾಗೂ ರವಿರಾಜ್ ನಾಯಕ ರವರು ತಮ್ಮ ಕರ್ತವ್ಯನಿಷ್ಠೆಗೆ ಹೆಸರಾಗಿದ್ದರು,ಅವರ ಪ್ರಾಮಾಣಿಕ ಕಾರ್ಯಗಳಿಗೆ ಇಂದು ಪದೋನ್ನತಿ ಗೌರವ ಸಂದಿದೆ,ಅವರ ಮುಂದಿನ ವೃತ್ತಿ ಜೀವನದಲ್ಲಿ ಉನ್ನತ ಅಧಿಕಾರಗಳು ದೊರೆಯಲಿ ಎಂದು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಉಪ ನೀರಿಕ್ಷಕರಾದ ಮಧುರದಾಸ್,ಅಬಕಾರಿ ಮುಖ್ಯಪೇದೆ ನಾಗೇಂದ್ರ ವಡ್ಡರ್,ಪೇದೆ ಗಣೇಶ್ ನಾಯ್ಕ, ಚಾಲಕ ವಿನಾಯಕ ನಾಯ್ಕ, ಸಿಬ್ಬಂದಿಗಳಾದ ರೂಪಾ ನಾಯ್ಕ,ಗೃಹ ರಕ್ಷಕದಳ ಸಿಬ್ಬಂದಿ ವಿವೇಕ್ ಗೌಡ,ಸತೀಶ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.


