ಮುಂಡಗೋಡ: ಮೀಟರಬಡ್ಡಿ ದಂದೆಯ ಕುರಿತು ಮುಂಡಗೋಡದಲ್ಲಿ ಮುಂದುವರೆದ ಕಾರ್ಯಾಚರಣೆಯಲ್ಲಿ ಇನ್ನೊರ್ವ ಆರೋಪಿಯನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

ಅಕ್ರಮ ಮೀಟರ್ ಬಡ್ಡಿ ದಂದೆಕೋರರ ಮೇಲೆ ಉತ್ತರ ಕನ್ನಡ ಎಸ್ಪಿ ದಾಳಿ ನಡೆಸುತ್ತಿದ್ದು,ದಂದೆಕೋರರು ಮಾತ್ರ ಬಿಲ ಸೇರಿಕೊಂಡಿದ್ದಾರೆ. ಎಸ್ಪಿ ಖಡಕ್ ನಿರ್ಣಯಕ್ಕೆ ಜಿಲ್ಲೆಯಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ.

ಏನಿದು ಪ್ರಕರಣ?
ಮುಂಡಗೋಡದ ಸಂಜಯನಗರದ,ಇಂದೂರು ನಿವಾಸಿ ಮಹೇಶ ನಾಗಪ್ಪ ದೊಡ್ಡಮನಿ ಠಾಣೆಗೆ ಹಾಜರಾಗಿ, ಮಲ್ಲಿಕಾರ್ಜುನ @ ಜಹೀರ್ ಶಬ್ಬೀರ್ ಶೇಖ್,ಸಾ: ಕಿಲ್ಲೇ ಓಣಿ, ಮುಂಡಗೋಡದ ಮತ್ತು ಕರಿಂ ಖಾನ್ ತಂದೆ ಹಿಮ್ಮತಖಾನ್ ಖಾನ್ ಜಾದೆ ಸಾ: ನೂರಾನಿಗಲ್ಲಿ ಮುಂಡಗೋಡ ಇವರಲ್ಲಿ ಬಡ್ಡಿಗೆ ಕಳೆದ 2 ವರ್ಷದ ಹಿಂದೆ 1,20,000/- ರೂ ಹಣವನ್ನು ಸಾಲ ತೆಗೆದುಕೊಂಡಿದ್ದು, ನಂತರ 5 ರಿಂದ 6 ಮಂದಿ ಸೇರಿ ನಮ್ಮ ಮನೆಗೆ ಬಂದು ನಾನು ತೆಗೆದುಕೊಂಡ ಸಾಲ ಹಾಗೂ ಬಡ್ಡಿ ಸೇರಿ ಒಟ್ಟೂ 3,80,000/- ಹೆಚ್ಚಿಗೆ ಹಣವನ್ನು ನೀಡಬೇಕೆಂದು ಆರೋಪಿರೆಲ್ಲರೂ ಮನೆಯ ಸಾಮಾನುಗಳನ್ನೆಲ್ಲವನ್ನು ತೆಗೆದುಕೊಂಡು ಹೋಗುತ್ತೇವೆ ಇಲ್ಲಾಂದ್ರೆ ಸುಟ್ಟು ಹಾಕುತ್ತೇವೆ, ಹಾಗೆಯೇ ನನ್ನ ಕುಟುಂಬದವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಹೊಡೆದು ನಮ್ಮ ಸ್ವರಾಜ ಕಂಪನಿಯ ಹೊಸ ಟ್ರಾಕ್ಟರ್ನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಮಹೇಶ ದೊಡ್ಡಮನಿ ದೂರು ನೀಡಿದ್ದರು.

ಈ ಪ್ರಕರಣವನ್ನು ಕೈಗೆತ್ತಿಕೊಂಡ ಎಸ್ಪಿ ಎಂ ನಾರಾಯಣ ಆರೋಪಿತರೆಲ್ಲರ ಮೇಲೆ ಮುಂಡಗೋಡ ಪೊಲೀಸ್ ಠಾಣಾ ಗುನ್ನಾ ನಂ:36/2025 ಕಲಂ: 384,448,341,323,504,506 ಸಹಿತ 34 ಐಪಿಸಿ ನೇದರಂತೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರು.
ಈ ಕುರಿತು ಮುಂಡಗೋಡ ಪೊಲೀಸರು ಆರೋಪಿತರ ಪತ್ತೆ ಕಾರ್ಯ ಕೈಗೊಂಡಿದ್ದು, ಮುಂಡಗೋಡದ ಚೌಡಳ್ಳಿ ನಿವಾಸಿ ರಫೀಖ್ ಜಮಖಂಡಿಯನ್ನು ಬಂಧಿಸಿದ್ದಾರೆ.


Leave a Reply