ಮುಂಡಗೋಡ: ಹೆದ್ದಾರಿಯಲ್ಲಿ ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ಎಂಟು ಮಂದಿ ಖತರ್ನಾಕ್ ದರೋಡೆಕೋರರನ್ನು ಮುಂಡಗೋಡ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು.. ಉತ್ತರ ಕನ್ನಡ ಜಿಲ್ಲೆಗೆ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅಗಮಿಸುತ್ತಿದ್ದಂತೆಯೇ ಅಕ್ರಮ ಚಟುವಟಿಕೆ ಹಾಗೂ ಇನ್ನಿತರ ಕಾನೂನು ವಿರೋದಿ ಚಟುವಟಿಕೆಗೆಳಿಗೆ ಬ್ರೇಕ್ ಬಿದ್ದಿದೆ.
ಮುಂಡಗೋಡ ತಾಲೂಕಿನ ಬಡ್ಡಿಗೇರಿ ಗ್ರಾಮದ ಕ್ರಾಸ್‌ಕ್ಕಿಂತ ಸುಮಾರು 01 ಕಿಮೀ ದೂರದಲ್ಲಿ ಶುಕ್ರವಾರ ಬೆಳಗಿನ ಜಾವ 06-00 ಗಂಟೆಯ ಸುಮಾರಿಗೆ ಮುಂಡಗೋಡು ತಾಲೂಕಿನ ಬಡ್ಡಿಗೆರಿ ಗ್ರಾಮದ GJ 03/DG0098 ಕಾರಿನಲ್ಲಿ ಎರಡು ಕಟ್ಟಿಗೆ ಬಡಿಗೆಗಳು, ಮೂರು ಕಬ್ಬಿಣದ ರಾಡುಗಳು, ಚಾಕು, ಗಮ್ ಟೇಪ್, ಖಾರದಪುಡಿಗಳನ್ನು ಇಟ್ಟುಕೊಂಡು ರಸ್ತೆಯಲ್ಲಿ ಬರಹೋಗುವ ಜನರನ್ನು ತಡೆದು ಅವರಿಗೆ ಹೆದರಿಸಿ ಅವರಿಂದ ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡುವ ಉದ್ದೇಶದಿಂದ ತಯಾರಿಯಲ್ಲಿದ್ದಾಗ ಮುಂಡಗೋಡ ಪೊಲೀಸರು ಹಠಾತ್ ದಾಳಿ ನಡೆಸಿ ಬಂಧಿಸಿದ ಘಟನೆ ನಡೆದಿದೆ.

ಆರೋಪಿಗಳಾದ ಮುಂಡಗೋಡ ಮೂಲದ ಮಲ್ಲಿಕಜಾನ್ @ ಜಹೀರ ಪಬ್ಬಿರ ಶೇಖ್, ಮಹಮ್ಮದ ಇಬ್ರಾಹಿಂ @ ರಫಿಕ್ ಮಣ್ಣೂಲಸಾಬ್ ಶಾಹಿಲ್ ಬಾಬಾಬುಡನ್,ಹರುಣ ಹಮ್ಮಮ್,ಮಹಮ್ಮದ ಯೂಸುಪ್ ರಿಯಾಜ್ ಅಹ್ಮದ್ ಗಡವಾಲೆ, ಮಹಮ್ಮದ ಇಸ್ಮಾಯಿಲ್ ಸೈಸುದ್ದಿನ್ ಪಾನವಾಲೆ, ತನ್ವಿರ್ ಅಬ್ದುಲ್ ಹಮೀದ್, ದಾದಾಕಲಂದರ್ ಅಬ್ದುಲ್‌ಖಾದರ್ ಮಲ್ಲಿಗಾರ್ ಇವರು ತಮ್ಮ ತಾಬಾ ಇದ್ದ ಕಾರ ನಂಬರ GJ-03 DG-0098 ನಲ್ಲಿ ಎರಡು ಕಟ್ಟಿಗೆಯ ಬಡಿಗೆಗಳು, ಮೂರು ಕಬ್ಬಿಣದ ರಾಡಗಳು, ಚಾಕು, ಗಮ್ ಟೇಪ್ ಹಾಗೂ ಖಾರದ ಪುಡಿಯನ್ನು ಇಟ್ಟುಕೊಂಡು ರಸ್ತೆಯಲ್ಲಿ ಬರುಹೋಗುವ ಜನರನ್ನು ತಡೆದು ಅವರಿಗೆ ಹೆದರಿಸಿ ಅವರಿಂದ ಬೆಲೆಬಾಳುವ ವಸ್ತುಗಳು ಹಾಗೂ ದುಡ್ಡು,ಚಿನ್ನವನ್ನು ಕಸಿದುಕೊಂಡು ಹೋಗಲು ಹೊಂಚು ಹಾಕುತ್ತಿದ್ದಬಗ್ಗೆ ಖಚಿತ ಮಾಹಿತಿಯ ಮೆರೆಗೆ ಮುಂಡಗೋಡ ಪೊಲೀಸರು ದಾಳಿ ನಡೆಸಿದ್ದು ಎಂಟು ಮಂದಿಯನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.

ದರೋಡೆ ಮಾಡುವ ಉದ್ದೇಶದಿಂದ ತಯಾರಿ ಮಾಡಿಕೊಂದಿದ್ದ ಬಗ್ಗೆ ಮುಂಡಗೋಡ ಪೊಲೀಸ್ ಠಾಣಾ ಗುನ್ನಾ ನಂ: 38/2020 ಕಲಂ-310(4) ಅಎನ್ಎಸ್-2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.


Leave a Reply