ಅಂಕೋಲಾ:ತಾಲೂಕಿನ ಜೈ ಹಿಂದ ಮೈದಾನದಲ್ಲಿ ಫೆಬ್ರುವರಿ 24,25,26 ರಂದು ರಾಜ್ಯ ಮಟ್ಟದ ಮುಸ್ಲಿಂ ಪ್ರೀಮಿಯರ್ ಲೀಗ್ ನಡೆಯಲಿದೆ ಎಂದು ಪಂದ್ಯಾವಳಿಯ ಸಂಸ್ಥಾಪಕ ಮಂಡಳಿಯ ಸದಸ್ಯ ಪಪ್ಪು ಸಯ್ಯದ್ ಹೇಳಿದರು.

ಅವರು ತಾಲೂಕಿನ ಖಾಸಗಿ ಹೋಟೆಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಕಳೆದ ಒಂಬತ್ತು ವರ್ಷಗಳಿಂದ ತಾಲೂಕಿನ ಸಮಸ್ತ ಮುಸ್ಲಿಂ ಬಾಂಧವರ ನೇತೃತ್ವದಲ್ಲಿ ಪ್ರಾರಂಭವಾದ ಈ ಕ್ರಿಕೇಟ್ ಪಂದ್ಯಾವಳಿ ಜಿಲ್ಲಾ ಮಟ್ಟದಿಂದ ಪ್ರಾರಂಭವಾಗಿ ಇಂದು ರಾಜ್ಯಮಟ್ಟದ ಕ್ರಿಕೇಟ್ ಪಂದ್ಯಾವಳಿಯಾಗಿ ಹೊರಹೊಮ್ಮಿದೆ. ಕ್ರಿಕೆಟ್ ಪಂದ್ಯಾವಳಿಯಲ್ಲಿ ಹತ್ತನೇ ತರಗತಿ,ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಗುವುದು.

ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಮುಖಂಡ ನವಾಜ್ ಶೇಖ ಮಾತನಾಡಿ ರಾಜ್ಯಮಟ್ಟದಲ್ಲಿ ನಮ್ಮ ಪಂದ್ಯಾವಳಿ ಅಯೋಜನೆಗೊಳ್ಳುತ್ತಿದ್ದು,ನಮ್ಮ ಸಮುದಾಯದ ಪ್ರಖ್ಯಾತ ಆಟಗಾರರು ಈ ಪಂದ್ಯಾವಳಿಯಲ್ಲಿ ಬಾಗವಹಿಸಲಿದ್ದು,ಪಂದ್ಯಾವಳಿಗೆ ಎಲ್ಲಾ ಸಮುದಾಯದವರ ಸಹಕಾರ ಅತ್ಯಮೂಲ್ಯ ಎಂದರು.

ಈ ಸಂದರ್ಭದಲ್ಲಿ ರಫೀಕ್ ಶೇಖ್, ಸರ್ಪ್ರಾಜ್ ಶೇಖ್, ನಾಸಿಮ್ ಖಾನ್,ಅನ್ವರ್ ಸಯ್ಯದ್, ಇಮ್ರಾನ್ ಮುಲ್ಲಾ,ಮಂಜುನಾಥ್ ನಾಯ್ಕ,
ಹೈದರ್ ಸಾಬ್,ಪೈರೋಜ್ ಖಾನ್,ಪೈರೋಜ್ ಶೇಖ್, ಶಬ್ಬೀರ್ ಶೇಖ್ ಮುಂತಾದವರು ಉಪಸ್ಥಿತರಿದ್ದರು.


Leave a Reply