ಕುಮಟಾ: ಅಕ್ರಮವಾಗಿ ಅಂದರ್ ಬಾಹರ್ ಎಲೆಯಾಟದಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸುವಲ್ಲಿ ಕುಮಟಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೌದು… ತಾಲೂಕಿನ ಹೊಲನಗದ್ದೆ ಬಳಿ ನಿರ್ಜನ ಪ್ರದೇಶದಲ್ಲಿ ಅಂದರ್ ಬಾಹರ್ ಇಸ್ಪೀಟ್ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಕುಮಟಾ ಪೊಲೀಸರು ದಾಳಿ ನಡೆಸಿದ್ದು ನಾಲ್ವರನ್ನು ಬಂಧಿಸಿದ್ದಾರೆ.
ಹೊಲನಗದ್ದೆ ಮೂಲದ ನಾರಾಯಣ ದೇವು ಮುಕ್ರಿ,ನಾಗರಾಜ ಮಂಜು ಹರಿಕಂತ್ರ,ಗಜಾನನ ವೆಂಕಟಪ್ಪ ನಾಯ್ಕ,ಶಿವಾನಂದ ಮಾಸ್ತಿ ಮುಕ್ರಿ ಬಂಧಿತರಾಗಿದ್ದು,ಬಂಧಿತರಿಂದ 1700 ರೂಪಾಯಿ ನಗದು ಹಾಗೂ ಇಸ್ಪೀಟ್ ಆಟದ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ.

ಎಸ್ಪಿ ಎಂ ನಾರಾಯಣ ಜಿಲ್ಲೆಯಾದ್ಯಂತ ಸಂಪೂರ್ಣ ಅಕ್ರಮಗಳಿಗೆ ಬ್ರೇಕ್ ಹಾಕಲು ಮುಂದಾಗಿದ್ದು, ವರಿಷ್ಠಾಧಿಕಾರಿ ಆದೇಶದಂತೆ ಜಿಲ್ಲೆಯಾದ್ಯಂತ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ, ಅದರಂತೆಯೇ ಕುಮಟಾ ಠಾಣೆಯ ಪಿಎಸೈ ಮಂಜುನಾಥ್ ಗೌಡರ್ ದಾಳಿ ನಡೆಸಿದ್ದು ಜೂಜಾಟದವರ ನಿದ್ದೆಗೇಡಿಸಿದ್ದಾರೆ.


Leave a Reply