ಹೊನ್ನಾವರ: ತಾಲೂಕಿನಲ್ಲಿ ನಿರಂತರ ರಸ್ತೆ ಅಪಘಾತಕ್ಕೆ ಹೆದ್ದಾರಿ ಹೋಕರು ಬೆಚ್ಚಿಬಿದ್ದಿದ್ದು,ಅದೇ ರೀತಿಯಲ್ಲಿ ಮತ್ತೊಂದು ರಸ್ತೆ ಅಪಘಾತ ಸಂಭವಿಸಿದ್ದು, ಹಳದೀಪುರದ ಬಳಿ ಕಾರು ಡಿಕ್ಕಿಯಾಗಿ ಪಾದಚಾರಿ ಮೃತಪಟ್ಟ ಘಟನೆ ರವಿವಾರ ತಡರಾತ್ರಿ ಸಂಭವಿಸಿದೆ.

ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ಆಗಮಿಸಿದ ಕಾರು ಹಳದೀಪುರ ಸಮೀಪ ಚಾಲಕನ ಅತಿಯಾದ ವೇಗ ಚಾಲನೆಯಿಂದ ಪಾದಚಾರಿ ಡಿಕ್ಕಿಯಾಗಿ, ಗಂಭೀರ ಗಾಯಗೊಂಡ ಪಾದಚಾರಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಮೃತಪಟ್ಟ ವ್ಯಕ್ತಿ ಹಳದೀಪುರ ಸಮೀಪದ ಅಗ್ರಹಾರ ಮಾದೇಕೊಟ್ಟಿಗೆ ಊರಿನ ಮಹೇಶ ಸುಬ್ರಾಯ ಗೌಡ (28 ) ಎಂದು ತಿಳಿದುಬಂದಿದೆ. ಈ ಸಂಭದ ಹೊನ್ನಾವರ ಪೊಲೀಸ್ ಠಾಣಿಯಲ್ಲಿ ಕಾರು ಚಾಲಕ ಕುಂದಾಪುರ ತಾಲೂಕಿನ ಸುಕುಮಾರ್ ಈಶ್ವರ ಆಚಾರ್ಯ ವಿರುದ್ದ ಪ್ರಕರಣ ದಾಖಲಾಗಿದೆ.


Leave a Reply