Spread the love

ಭಟ್ಕಳ: ಲಕ್ಷಾಂತರ ಮೌಲ್ಯದ ನಿಷೇಧಿತ ಇಲೆಕ್ಟ್ರಾನಿಕ್ ಸಿಗರೇಟ್ & ನಿಕೋಟಿನ್ ಹಾಗೂ ಹಾಗೂ ಸಿಗರೇಟು ತುಂಬುವ ರಿಫಿಲ್ ಗಳ ಸಹಿತ ಓರ್ವನನ್ನು ಬಂಧಿಸುವಲ್ಲಿ ಭಟ್ಕಳ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

Buy products online now


ಹೌದು… ಭಟ್ಕಳ ಶಹರದ ಹೂವಿನ ಚೌಕ ಹತ್ತಿರದ ದುಬೈ ಮಾರ್ಕೆಟಿನಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ₹ 1,38,500 ರೂಪಾಯಿ ಮೌಲ್ಯದ  ನಿಷೇಧಿತ ಇಲೆಕ್ಟ್ರಾನಿಕ್ ಸಿಗರೇಟ್ & ನಿಕೋಟಿನ್ ಹಾಗೂ ಹಾಗೂ ಸಿಗರೇಟು ತುಂಬುವ ರಿಫಿಲ್ ಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇಲೆ ದಾಳಿ ನಡೆಸಿದ ಭಟ್ಕಳ ಶಹರ ಠಾಣೆಯ ಪೊಲೀಸರು ಆರೋಪಿತನಾದ ಭಟ್ಕಳ ಕಾರಗದ್ದೆ ನಿವಾಸಿ ಸಿದ್ದಿಕ್ ಅಬ್ದುಲ್ ರೆಹಮಾನ್ ತಂದೆ ಸಿದ್ದಿಕ್ ಖಾದರ್ ಮೀರಾ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಭಟ್ಕಳ ಶಹರ ಠಾಣೆಯ ಸಿಪಿಐ ದಿವಾಕರ ಪಿ ಎಂ ಮಾರ್ಗದರ್ಶನದಲ್ಲಿ  ಪಿಎಸೈ ನವೀನಕುಮಾರ್ ನಾಯ್ಕ ಸಿಬ್ಬಂದಿಗಳಾದ ಉದಯ ನಾಯ್ಕ,ದೀಪಕ್ ನಾಯ್ಕ,ಮಹಾಂತೇಶ ಹಿರೇಮಠ,ಕಾಶಿನಾಥ್ ಕೋಟಗೋಣಸಿ,ಸುರೇಶ ಮರಾಠಿ,ಜಗದೀಶ ನಾಯ್ಕ,ರೇವಣಸಿದ್ದಪ್ಪ ಮಾಗಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *