Spread the love

ಅಂಕೋಲಾ: ಅಡುಗೆ ಸಿಲಿಂಡರ್ ದುರಸ್ಥಿಗೊಳಿಸುತ್ತಿರುವ ಸಂದರ್ಭದಲ್ಲಿ ಸಿಲಿಂಡರ್ ಸ್ಪೋಟಗೊಂಡು ಐದು ವರ್ಷದ ಬಾಲಕ ಸಹಿತ ಆರು ಮಂದಿಗೆ ಗಂಭೀರ ಗಾಯಗಳಾಗಿದ್ದ ಘಟನೆ ಅಂಕೋಲಾ ತಾಲೂಕಿನ ಕೇಣಿಯಲ್ಲಿ ನಡೆದಿದೆ.

Buy products online now


ಹೌದು..ಕೇಣಿಯ ಗಾಂವ್ಕರವಾಡದ ನಿವಾಸಿ ಗೌರೀಶ ನಾಯಕ ಎನ್ನುವವರ ಮನೆಯಲ್ಲಿ ಬಾಡಿಗೆಯಿದ್ದ ಸುದರ್ಶನ ನಾಯ್ಕ ಎನ್ನುವವರು ಅಡುಗೆ ಅನಿಲ ತುಂಬಿದ್ದ ಸಿಲಿಂಡರ್ ನಿಂದ ಅನಿಲ ಸೋರಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ದುರಸ್ಥಿಗೊಳಿಸಲು ಅನಿಲ ಸರಬರಾಜು ಕಂಪನಿಯ ಸಿಬ್ಬಂದಿ ಶ್ರವಣ ಬಂಟ್ ಎಂಬಾತಾನು ಕರೆತಂದಿದ್ದರು, ದುರಸ್ಥಿಗೊಳಿಸುತ್ತಿರುವ ಸಮಯದಲ್ಲಿ ಗ್ಯಾಸ್ ಸಿಲಿಂಡರ್ ಏಕಾಏಕಿ ಸ್ಪೋಟಗೊಂಡಿದ್ದು ಬಾಡಿಗೆ ಮನೆಯಲ್ಲಿ ಆಟವಾಡುತ್ತಿದ್ದ ಗೌರೀಶ ನಾಯಕರ ಮೊಮ್ಮಗ ಕೃಷ್ಣ ನಾಯಕ(5) ಸಹಿತ, ಬಾಡಿಗೆದಾರ ಸುದರ್ಶನ ನಾಯ್ಕ ಹಾಗೂ ಸಿಲೆಂಡರ್ ದುರಸ್ಥಿಗೆಂದು ಬಂದಿದ್ದ ಶ್ರವಣ ಬಂಟ್ ಎನ್ನುವವರಿಗೆ ಗಂಭೀರ ಗಾಯಗಳಾಗಿದ್ದು ಇವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.  ಹಾಗೂ ಮನೆಯಲ್ಲಿದ್ದ  ನಾಲ್ವರಿಗೂ ಸಹ ಗಾಯಗಳಾಗಿದ್ದು ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಂಕೋಲಾ ಪೋಲಿಸ್ ಠಾಣೆಯ ಪಿಎಸೈಗಳಾದ ವಿಶ್ವಾನಾಥ್ ನಿಂಗೊಳ್ಳಿ, ಸುನೀಲ್ ಹುಳ್ಳೊಳ್ಳಿ, ಅಗ್ನಿಶಾಮಕದಳ ಸಿಬ್ಬಂದಿಗಳು ಸ್ಥಳೀಯರ ಸಹಾಯದಿಂದ ಗಾಯಾಳುಗಳ ರಕ್ಷಣೆಗೆ ಮುಂದಾಗಿದ್ದು, ಆಂಬ್ಯುಲೆನ್ಸ್ ಮೂಲಕ ಗಾಯಗೊಂಡ ನಾಲ್ವರನ್ನು ಚಿಕಿತ್ಸೆಗೆ ಪಟ್ಟಣದ ಆರ್ಯ ಮೆಡಿಕಲ್ ಗೆ ದಾಖಲಿಸಲಾಗಿದ್ದು,ಇರ್ವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *