ಅಂಕೋಲಾ: ತಾಲೂಕಿನ ಶ್ರೀ ಕ್ಷೇತ್ರ ಶೆಟಗೇರಿಯ ಶ್ರೀ ವರಮಹಾಗಣಪತಿ ದೇವರ 21 ನೇ ವರ್ಧಂತಿ ಉತ್ಸವವು ಏ.14 ಹಾಗೂ 15 ರಂದು ಶಾಸ್ತ್ರೋಕ್ತವಾಗಿ ನೆರವೇರಲಿದ್ದು,ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಬೇಕಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಹೌದು.. ಶ್ರೀ ಕ್ಷೇತ್ರ ಶೆಟಗೇರಿಯ ಶ್ರೀ ವರಮಹಾಗಣಪತಿ ದೇವರ 21 ನೇ ವರ್ಧಂತಿ ಉತ್ಸವವು ದಿನಾಂಕ ಏ. 4 ಹಾಗೂ 5 ರಂದು ನಡೆಯಬೇಕಿದ್ದ ಉತ್ಸವವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿತ್ತು, ಆದ್ದರಿಂದ ಏಪ್ರಿಲ್ 14 ಮತ್ತು 15 ರಂದು ವರ್ಧಂತಿ ಉತ್ಸವವನ್ನು ನೆರವೇರಿಸಲು ನಿರ್ಧರಿಸಲಾಗಿದೆ.
ಏ.14 ರ ಸಾಯಂಕಾಲದಿಂದಲೇ ವರ್ಧಂತಿ ಉತ್ಸವದ ದೈವಿಕ ಕೈಂಕರ್ಯಗಳು ಪ್ರಾರಂಭವಾಗಲಿದ್ದು, ಏ. 15 ಬುಧವಾರ ಬೆಳಿಗ್ಗೆಯಿಂದ ಗಣೇಶ ಪೂಜಾ, ವರ್ಧಂತಿ ಉತ್ಸವಾಂಗ ಹೋಮಗಳು, 21 ಕಾಯಿಯ ಗಣಹೋಮ, ಸಾಮೂಹಿಕ ವಿವಾಹ, ಪೂರ್ಣಾಹುತಿ,ಬ್ರಹ್ಮಕಲಶಾಭಿಷೇಕ, ಮಂಗಳಾರತಿ, ಸಾರ್ವತ್ರಿಕ ಪ್ರಾರ್ಥನೆ, ತೀರ್ಥಪ್ರಸಾದ ವಿತರಣೆ. ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಲಿದೆ.

ಬೆಳಿಗ್ಗೆ 11 ಗಂಟೆಗೆ ಸಾಮೂಹಿಕ ವಿವಾಹ ಹಾಗೂ 12-30 ಗಂಟೆಗೆ ಸರಿಯಾಗಿ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.

ಮೈನವಿರೇಳಿಸಲಿದೆ ದಕ್ಷಯಜ್ಞ ಯಕ್ಷಗಾನ ಪ್ರದರ್ಶನ !
ಸಂಜೆ 6-30 ರಿಂದ ದಕ್ಷಿಣೋತ್ತರ ಕನ್ನಡದ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ದಕ್ಷಯಜ್ಞ ಪೌರಾಣಿಕ ಯಕ್ಷಗಾನ ನಡೆಯಲಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಧರ್ಮದರ್ಶಿ ಅನೂಪ ನಾರಾಯಣ ನಾಯಕ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.


