ಅಂಕೋಲಾ: ತಾಲೂಕಿನ ಶೇಟಗೇರಿ ಗ್ರಾಪಂ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಯುವಕನೊರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆಡಿದೆ.

ತಾಲೂಕಿನ ಹಡವ ಗ್ರಾಮದ ಸುಧೀರ ರಾಮ ಗೌಡ (33) ಎಂಬಾತನೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದ ಯುವಕನಾಗಿದ್ದಾನೆ. ತಾಲೂಕಿನ ಪ್ರತಿಷ್ಠಿತ ಅಂಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಈತ ಸೌಮ್ಯಸ್ವಭಾವದವನಾಗಿದ್ದ,ಮದುವೆಗೆ ಸಹ ಮಂಗಳಸೂತ್ರವನ್ನು ಮಾಡಿಸಲು ಓಡಾಡುತ್ತಿದ್ದ ಎನ್ನಲಾಗಿದೆ. ಬೆಳಿಗ್ಗೆ ಸಹೋದ್ಯೋಗಿಗಳಿಗೆ ಕರೆ ಮಾಡಿ ಇವತ್ತು ಕೆಲಸಕ್ಕೆ ಬರಲು ವಿಳಂಬವಾಗುತ್ತದೆ ಎಂದಿದ್ದ, ಬರಲು ತುಂಬಾ ತಡವಾಗಿದ್ದರಿಂದ ಸಹೋದ್ಯೋಗಿಗಳೇ ಆತನ ಊರಿಗೆ ಹುಡುಕಲು ಬಂದಿದ್ದರು ರಸ್ತೆ ಬದಿಯಲ್ಲಿ ಆತನ ಬೈಕ್ ಕಂಡು ಅಲ್ಲಿಯೇ ಸ್ವಲ್ಪ ದೂರದಲ್ಲಿ ಹುಡುಕಾಟ ನಡೆಸಿದ್ದಾಗ ನೇಣು ಬಿಗಿದ ಸ್ಥಿತಿಯಲ್ಲಿ ಸುಧೀರ ಮೃತದೇಹ ಕಂಡುಬಂದಿದೆ ಎನ್ನಲಾಗಿದೆ.
ಈ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಅಂಕೋಲಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲದ ಹಿನ್ನೆಲೆಯಲ್ಲಿ ಆತನ ಮೊಬೈಲ್ ಅನ್ನು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿದ್ದಾರೆ.


