ಅಂಕೋಲಾ: ತಾಲೂಕಿನ ಕೃಷಿ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಅವಿರೋಧವಾಗಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ವೆಂಕಟರಾಯ ಆರ್ ನಾಯಕ ಆಯ್ಕೆಯಾಗಿದ್ದಾರೆ.

ಬಾನುವಾರ ನಡೆದ ಅಧ್ಯಕ್ಷ -ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ನಿರ್ದೇಶಕರಾದ ಭೀರಣ್ಣ ಬೊಮ್ಮಯ್ಯ ನಾಯಕ, ಪ್ರೀತಮ್ ಗೋಪಾಲ ನಾಯಕ, ವೆಂಕಟರಾಯ ಆರ್ ನಾಯಕ, ನರಸಿಂಹ ಭಾಗ್ವತ್, ದೇವಾನಂದ ವಿಠಲ ನಾಯಕ, ಹಾಗೂ ಗೋಪಾಲ ಯಾನೆ ಪ್ರದೀಪ್ ನಾಯಕ ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ ಪ್ರತಿನಿಧಿ ಪ್ರದೀಪ ನಾಯಕ ಅವರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.
ಈ ಹಿಂದೆ ನಡೆದಿದ್ದ ತಾಲೂಕ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಆಡಳಿತ ಮಂಡಳಿ ನೇಮಕಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು 13 ಸ್ಥಾನಕ್ಕೆ ಸೊಸೈಟಿಗಳಿಂದ ಆಯ್ಕೆಯಾಗುವ ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಬಣ 7 ಸ್ಥಾನದಲ್ಲಿ ಗೆಲುವನ್ನ ಸಾಧಿಸುವ ಮೂಲಕ ಮೆಲುಗೈ ಸಾಧಿಸಿದ್ದರು.

ಎರಡು ಪ್ರಬಲ ಬಣಗಳ ತಿಕ್ಕಾಟದಲ್ಲಿ ಅಂಕೋಲಾ ಟಿ ಎಂ ಎಸ್ ಯಾರ ಪರ?
ಕುತೂಹಲ ಮೂಡಿಸಿದ ಕೆಡಿಸಿಸಿ ಚುನಾವಣೆ ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಸಚಿವ ಮಂಕಾಳು ವೈದ್ಯ ಪ್ರತಿಷ್ಠೆಗೆ ತೆಗೆದುಕೊಂಡಿದ್ದು,ಮಾರ್ಕೆಂಟಿಂಗ್ ಸೊಸೈಟಿಗಳಿಂದ ಆಯ್ಕೆಯಾಗುವ ಕೆಡಿಸಿಸಿ ಚುನಾವಣೆಯಲ್ಲಿ ಅಂಕೋಲಾ ಟಿ.ಎಂ.ಎಸ್ ಯಾರ ಪರ ಒಲವು ಮಾಡಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ. ಶಾಸಕ-ಸಚಿವರ ಎರಡು ಬಣಗಳು ಸಮಬಲ ಸಾಧಿಸಿದ್ದು ಅಂಕೋಲಾ ಟಿ.ಎಂ.ಎಸ್ ಮತ ನಿರ್ಣಾಯಕ ಪಾತ್ರವಹಿಸುತ್ತಿರುವುದರಿಂದ ಎಲ್ಲರ ಚಿತ್ತ ಅಂಕೋಲಾ ಟಿ.ಎಂ.ಎಸ್ ನತ್ತ ಮುಖ ಮಾಡಿದೆ.
ಬಹುತೇಕ ಅಂಕೋಲಾ ಟಿ ಎಂ ಎಸ್ ಹೆಬ್ಬಾರ್ ಪರ ಎಂಬ ಗುಮಾನಿ!
ಕೆಡಿಸಿಸಿ ಗದ್ದುಗೆ ಗದ್ದಲದಲ್ಲಿ ಸಚಿವ ಹಾಗೂ ಮಾಜಿ ಸಚಿವರು ಹೋರಾಟ ನಡೆಸುತ್ತಿದ್ದು, ಅಂಕೋಲಾ ಟಿ ಎಂ ಎಸ್ ಕೂಡ ಪ್ರಮುಖವಾಗಿದೆ. ಈ ಎರಡು ನಾಯಕರು ತಮ್ಮ ಬತ್ತಳಿಕೆಗೆ ಅಂಕೋಲಾ ಟಿ ಎಂ ಎಸ್ ಅನ್ನು ಸೇರಿಸಿಕೊಳ್ಳಲು ಈಗಾಗಲೇ ಕಸರತ್ತು ನಡೆಸುತ್ತಿದ್ದು, ಬಹುತೇಕ ಅಂಕೋಲಾ ಟಿ ಎಂ ಎಸ್ ಹೆಬ್ಬಾರ್ ಪರ ವಾಲಿದೆ ಎನ್ನುವ ಗುಮಾನಿ ಎಲ್ಲೆಡೆ ಕೇಳಿಬರುತ್ತಿದೆ.
ಚುನಾವಣಾಧಿಕಾರಿಯಾಗಿ ಮಮತಾ ನಾಯ್ಕ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಹೊಸಬಣ್ಣ ನಾಯಕ, ಉಮಾಕಾಂತ ನಾಯಕ(ಗುಂಡು) ಬೇಲೆಕೇರಿ, ರವಿ ಜೋಗಿ ಭಾವಿಕೇರಿ, ಸೂರಜ್ ನಾಯಕ ವಂದಿಗೆ, ರಾಘವೇಂದ್ರ ನಾಯಕ ಹಿಚ್ಕಡ, ಬಾಬು ನಾಯಕ ಭಾವಿಕೇರಿ, ಪ್ರಸಾದ್ ನಾಯಕ ವಂದಿಗೆ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಸಂಘದ ಸಮಸ್ತ ನಿರ್ದೇಶಕರಿಗೂ ಹಾಗೂ ನನ್ನ ಗೆಲುವನ್ನು ಸಂಭ್ರಮಿಸಿದ ಪ್ರತಿಯೊಬ್ಬರಿಗೂ ನಾನು ಕೃತಜ್ಞನಾಗಿದ್ದೇನೆ. ಪ್ರಸಕ್ತವಾಗಿ ಸಂಸ್ಥೆ ಲಾಭದಲಿಲ್ಲ, ಮುಂದಿನ ದಿನಗಳಲ್ಲಿ ನಮ್ಮ ಸಂಘವನ್ನು ಸ್ಥಳೀಯ ಶಾಸಕ ಸತೀಶ್ ಸೈಲ್, ಸಚಿವ ಮಂಕಾಳು ವೈದ್ಯ ಹಾಗೂ ನಮ್ಮೆಲ್ಲರ ಹಿರಿಯರಾದಂತ ಆರ್ ವಿ ದೇಶಪಾಂಡೆಯವರ ಮಾರ್ಗದರ್ಶನದೊಂದಿಗೆ ಸಂಘವನ್ನು ರೈತರ ಬೆನ್ನೆಲುಬಾಗಿ ಬೆಳೆಯುವಂತೆ ಶ್ರಮಿಸುತ್ತೇನೆ,ಮತ್ತಷ್ಟು ಹೆಚ್ಚಿನ ಪ್ರಗತಿಯತ್ತ ದಾಪುಗಾಲು ಇಡುತ್ತ ಮುಂದಿನ ದಿನಗಳಲ್ಲಿ ಕೃಷಿ ಹುಟ್ಟುವಳಿ ಮಾರಾಟ ಸಂಘ ಮಾದರಿ ಸಂಘವಾಗುವಲ್ಲಿ ಯಾವುದೇ ಸಂಶಯವಿಲ್ಲ.
ಗೋಪಾಲಕೃಷ್ಣ ಆರ್ ನಾಯಕ.
ನೂತನ ಅಧ್ಯಕ್ಷರು ಕೃಷಿ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ಅಂಕೋಲಾ.


