ಅಂಕೋಲಾ: ಮಾನವ ಬದುಕಿದ್ದಾಗ ಮಾಡುವ ಮಾನವೀಯ ಸೇವೆ ಮರಣದ ನಂತರವೂ ಜನಮಾನಸದಲ್ಲಿ ಜೀವಂತವಾಗಿರಲು ಸಾಧ್ಯ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ ಹೇಳಿದರು.

ಅವರು ಶ್ರೀ ರಣಮಾಸ್ತಿ,ಶ್ರೀ ನಾಗದೇವತಾ ಕ್ರಿಕೆಟರ್ಸ್ ಪೂಜಗೇರಿ ಇವರ ಆಶ್ರಯದಲ್ಲಿ ದಿವಂಗತ ರಮಾಕಾಂತ ಗಾಂವ್ಕರ್ ಸ್ಮರಣಾರ್ಥ ಪಡ್ತಿ ಸಮಾಜದ ಆರ್ ಜಿ ಕಪ್-2025 ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ರಮಾಕಾಂತ ಗಾಂವ್ಕರ್ ರವರು ಜೀವಿತಾವಧಿಯಲ್ಲಿ ಮಾಡಿದ ಜನಸೇವೆ, ಜನರು ಇಂದಿಗೂ ಅವರನ್ನು ನೆನೆಯುವಂತೆ ಮಾಡಿದೆ. ಯುವಸಮೂಹ ಕ್ರೀಡೆಯೊಂದಿಗೆ ಶೈಕ್ಷಣಿಕವಾಗಿಯೂ ಸಾದನೆಗೈದು ಆರ್ಥಿಕವಾಗಿ ಸಬಲರಾಗಿ ಈ ನಾಡಿಗೆ ಹೆಮ್ಮೆತರುವಂತಾಗಲಿ ಎಂದರು.

ಜಿಪಂ ಮಾಜಿ ಸದಸ್ಯ ಜಗದೀಶ ನಾಯಕ ಮೊಘಟಾ ಮಾತನಾಡಿ ಪಡ್ತಿ ಸಮಾಜದಿಂದ ಎರಡು ದಿನಗಳ ಕಾಲ ಅತ್ಯಂತ ಯಶಸ್ವಿಯಾಗಿ ನಡೆದಂತ ಕ್ರಿಕೆಟ್ ಪಂದ್ಯಾವಳಿ ಸಮಾಜದ ಸಂಘಟನೆಗೆ ಸಾಕ್ಷಿಯಾಗಿದೆ.ಈ ಪಂದ್ಯಾವಳಿ ಮುಂದಿನದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಲಿ ಎಂದರು.

ಪಡ್ತಿ ಸಮಾಜದ ಪ್ರಮುಖರಾದ ನಾಗೇಶ ಗಾಂವ್ಕರ್, ಹಾಲಕ್ಕಿ ಸಮುದಾಯದ ಪ್ರಮುಖ ಮಹಾದೇವ ಗೌಡ ಮಾತನಾಡಿದರು.ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಊರ ಮಹಿಳೆಯರು ಸನ್ಮಾನಿಸಿ ಗೌರವಿಸಿದರು.

ಸಂತೋಷ ಇಲೆವನ್ ಅಮದಳ್ಳಿ ತಂಡ ಪ್ರಥಮ ಪಾರಿತೋಷಕಕ್ಕೆ ಬಾಜನರಾದರೆ, ದ್ವಿತೀಯ ಬಹುಮಾನವನ್ನು ಚಂಡಿಯಾ ವಾರಿಯರ್ಸ್ ತಂಡ ಪಡೆದುಕೊಂಡಿದೆ.

ಈ ಸಂದರ್ಭದಲ್ಲಿ ಬಿಜೆಪಿ ಮಂಡಳಾದ್ಯಕ್ಷ ಸಂಜಯ ನಾಯಕ ಭಾವಿಕೇರಿ, ಪ್ರಧಾನ ಕಾರ್ಯದರ್ಶಿ ಶ್ರೀಧರ್ ನಾಯ್ಕ,ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರವೀಣ ನಾಯ್ಕ,ಬಿಜೆಪಿ ವಕ್ತಾರಾದ ಘನಶ್ಯಾಮ ಗಾಂವ್ಕರ್, ಸುಬ್ರಹ್ಮಣ್ಯ ಗಾಂವ್ಕರ್, ಪ್ರಕಾಶ ತಳೆಕರ್,ಬಿರಣ್ಣ ನಾಯಕ, ವೇದಿಕೆಯಲ್ಲಿ ಉಪಸ್ಥಿತರಿದ್ದರು.


