Spread the love

ಅಂಕೋಲಾ: ಬಿಜೆಪಿ ಕಾರ್ಯಕರ್ತರು ಸಂಘಟಿಸಿ ಶ್ರಮಿಸಿದ್ದರ ಫಲವಾಗಿ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೆಕರ್ ಪಕ್ಷದ ಯಾವ ಕಾರ್ಯಕ್ರಮಕ್ಕೂ ಅಗಮಿಸದೆ ಬಿಜೆಪಿಯಿಂದ ದೂರ ಉಳಿದಿದ್ದು,ಕಾರ್ಯಕರ್ತರಿಗೂ ಸ್ಪಂದಿಸುತ್ತಿಲ್ಲ ಎಂದು ಅಂಕೋಲಾ ಬಿಜೆಪಿ ಕಾರ್ಯಕರ್ತರು ಕಿಡಿಕಾರಿದರು.

ಹೌದು..ಅಂಕೋಲಾ ತಾಲೂಕಿನಲ್ಲಿ ನಡೆದ ವಿಬಿ-ಜಿ-ರಾಮ-ಜಿ ಸಮಾವೇಶದ ಪ್ರಾರಂಭದಲ್ಲಿಯೇ ತೆಂಕಣಕೇರಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರವೀಣ ನಾಯ್ಕ ಹಾಗೂ ಅಗಸೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನಾರಾಯಣ ಹೆಗಡೆ, ರೈತ ಮೋರ್ಚಾ ಅಧ್ಯಕ್ಷ ಎಂ  ಎನ್ ಹೆಗಡೆ ಸೇರಿದಂತೆ ಹಲವರು ಬಿಜೆಪಿ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೆಕರ್ ಪಕ್ಷ ಸಂಘಟನೆ ಹಾಗೂ ಪಕ್ಷದ ಎಲ್ಲಾ ಕಾರ್ಯಕ್ರಮಗಳಿಂದ ದೂರ ಉಳಿದಿದ್ದರ  ಕುರಿತು ಪಕ್ಷದ ಮುಖಂಡರ ಎದುರು ಕಿಡಿಕಾರಿದರು.

ಈ ಸಂದರ್ಭದಲ್ಲಿ ಮಾತನಾಡಿದ ತೆಂಕಣಕೇರಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರವೀಣ ನಾಯ್ಕ ಮಾತನಾಡಿ ನನ್ನಂತ ಸಾವಿರಾರು ಕಾರ್ಯಕರ್ತರು ಸಂಘಟನೆ ಮಾಡಿ ಶ್ರಮಿಸಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತೇವೆ, ಆದರೆ ಆಯ್ಕೆಯಾದ ಬಳಿಕ ಯಾರೊಬ್ಬ ಕಾರ್ಯಕರ್ತರ ನೆರವಿಗೂ ಅವರು ಬರುವುದಿಲ್ಲ. ಹಾಗೆಯೇ ನಮ್ಮ ಜಿಲ್ಲೆಯ ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೆಕರ್ ಸಹ ಹಾಗೆಯೇ ಅವರನ್ನು ನಮ್ಮ ಪಕ್ಷದ ಕಾರ್ಯಕರ್ತರು,ಮುಖಂಡರು ಸೇರಿ ಸಂಘಟಿಸಿ ಗೆಲ್ಲಿಸಿದ್ದೇವೆ ಆದರೆ ಗೆದ್ದ ಬಳಿಕ ಅವರು ಪಕ್ಷದ ಯಾವ ಕಾರ್ಯಕ್ರಮಕ್ಕೂ ಅಗಮಿಸುತ್ತಿಲ್ಲ,ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿಲ್ಲ,ಕೇವಲ ಪತ್ರಿಕೆಗಳಲ್ಲಿ ,ಬ್ಯಾನರ್ ಗಳಲ್ಲಿ ಅಷ್ಟೇ ಅವರನ್ನು ಕಾಣಬಹುದ್ದಾಗಿದೆ,ಅವರ ವೈಯಕ್ತಿಕವಾಗಿ ನಾವು ವಿರೋಧಿಸುತ್ತಿಲ್ಲ ಬದಲಾಗಿ ಪಕ್ಷದ ಹಿತದೃಷ್ಟಿಯಿಂದ ಅವರನ್ನು ದೂರುತಿದ್ದೆವೆ, ಆದ್ದರಿಂದ ಮುಂಬರುವ ಪ್ರತಿಯೊಂದು ಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿಯುವ ಯೋಗ್ಯ ಅಭ್ಯರ್ಥಿಯನ್ನು  ಹುಡುಕಿ ಅವರಿಗೆ ಟಿಕೆಟ್ ನೀಡಿ ಎಂದು ಪಕ್ಷದ ಮುಖಂಡರಿಗೆ ಎಚ್ಚರಿಸಿದರು.

ನಂತರ ಅಗಸೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನಾರಾಯಣ ಹೆಗಡೆ ಎದ್ದು ನಿಂತು ನಿಷ್ಠೆ,ಪ್ರಾಮಾಣಿಕತೆ,ಶಿಸ್ತಿಗೆ ಹೆಸರಾಗಿರುವ ಬಿಜೆಪಿ ಪಕ್ಷ ಪ್ರತಿಯೊಬ್ಬ ಕಾರ್ಯಕರ್ತನ ಅಸ್ತಿಯಾಗಿದೆ,ಆದರೆ ಇಲ್ಲಿ ಎಲ್ಲರನ್ನು ಪ್ರಶ್ನಿಸುವ ಅಧಿಕಾರವಿದೆ ನಾವೇ ಗೆಲ್ಲಿಸಿದ್ದ ಎಂ ಎಲ್ ಸಿ ಯವರು ನಮಗೆ ಸ್ಪಂದಿಸುತ್ತಿಲ್ಲ ಹಾಗೆಯೇ ಪಕ್ಷದ ಯಾವ ಕಾರ್ಯಕ್ರಮಕ್ಕೂ ಅಗಮಿಸುತ್ತಿಲ್ಲ ಅವರಿಗೆ ಯಾರು ಪ್ರಶ್ನಿಸುವವರು ಇಲ್ಲದಂತಾಗಿದೆ  ಎಂದರು.

ರೈತ ಮೋರ್ಚಾದ ಎಂ ಎನ್ ಹೆಗಡೆ ಮಾತಾನಾಡಿ ಈ ಹಿಂದೆ ನಮ್ಮ ಕ್ಷೇತ್ರದಲ್ಲಿ ಇರ್ವರು ಶಾಸಕರು ಇದ್ದುದರಿಂದ ನಮ್ಮೆಲ್ಲ ಕಾರ್ಯಕರ್ತರಿಗೆ ದೈರ್ಯದೊಂದಿಗೆ ಹೆಮ್ಮೆಯಿತ್ತು,ಆದರೆ ಇಂದು ಎಂ ಎಲ್ ಸಿಯವರು ನಮ್ಮೆಲ್ಲ ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾರೆ ಏಕೆ ಎನ್ನುವುದು ನಮೆಲ್ಲರೆ ಪ್ರಶ್ನೆಯಾಗಿದೆ.ಈ ಕುರಿತು ಮಂಡಳಾಧ್ಯಕ್ಷರು ಪಕ್ಷದ ವರಿಷ್ಠರ ಗಮನಕ್ಕೆ ತರಬೇಕು ಎಂದು ವಿನಂತಿಸಿಕೊಂಡರು.

ಕಾರ್ಯಕರ್ತರ ಪ್ರಶ್ನೆಗಳಿಗೆ ಮಂಡಳಾಧ್ಯಕ್ಷ ಸಂಜಯ ನಾಯ್ಕ ಭಾವಿಕೇರಿ ಉತ್ತರಿಸಿ ಈ ವಿಷಯವನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ,ನಿಮ್ಮೆಲ್ಲರ ಮನವಿಗಳನ್ನು ಪಕ್ಷದ ಹಿರಿಯರೊಂದಿಗೆ ಚರ್ಚಿಸುತ್ತೇವೆ ಎಂದರು.

Leave a Reply

Your email address will not be published. Required fields are marked *