Spread the love

ಕಾರವಾರ: ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ(ರಿ) ಬೆಂಗಳೂರು, ಮುಂಬರುವ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಾಡು-ನುಡಿಗೆ ವಿಶಿಷ್ಟ ಸೇವೆ ಸಲ್ಲಿಸಿದ ಗಣ್ಯರಿಗೆ ಗೌರವ ಸಮರ್ಪಿಸುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ. 

ಈ ಸಮಾರಂಭದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಭೂಷಣ ಪ್ರಶಸ್ತಿ, ಸಹಕಾರ ರತ್ನ ಪ್ರಶಸ್ತಿ, ಸಮಾಜ ಸೇವೆ ರತ್ನ ಪ್ರಶಸ್ತಿ, ಶಿಕ್ಷಣ ರತ್ನ ಪ್ರಶಸ್ತಿ, ಕನ್ನಡ ರತ್ನ ಪ್ರಶಸ್ತಿ, ಕರ್ನಾಟಕ ರತ್ನ ಶ್ರೀ ಪ್ರಶಸ್ತಿ ಹಾಗೂ ಕರ್ನಾಟಕ ವಿಕಾಸ ರತ್ನ ಎಂಬ ವಿವಿಧ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಲಾಗುವುದು. 

ಈ ಪ್ರಶಸ್ತಿಗಳಿಗಾಗಿ ಶಿಕ್ಷಣ, ನೃತ್ಯ, ಸಂಗೀತ, ಸಂಸ್ಕೃತಿ, ಕೃಷಿ, ಕೈಗಾರಿಕೆ, ಕಾನೂನು, ಪರಿಸರ, ಸಮಾಜಸೇವೆ, ಸಂಶೋಧನೆ, ಕುಸ್ತಿ, ವೈದ್ಯಕೀಯ ಸೇವೆ, ಉದ್ಯಮ, ಕ್ರೀಡೆ, ರಂಗಭೂಮಿ, ಚಲನಚಿತ್ರ, ಕಿರುತೆರೆ, ಆಡಳಿತ, ಪತ್ರಿಕೋದ್ಯಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪೊಲೀಸ್ ಸೇವೆ, ಗುಡಿ ಕೈಗಾರಿಕೆ, ಜನಪರ ಹೋರಾಟ, ಉದ್ಯೋಗ ಸೃಷ್ಟಿ ಹಾಗೂ ಕೋಮು ಸಾಮರಸ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರು ಮತ್ತು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಅರ್ಹ ಸ್ತ್ರೀ, ಪುರುಷರು ಹಾಗೂ ಮಕ್ಕಳು ತಮ್ಮ ವಿಸ್ತೃತ ಬಯೋಡೇಟಾ, ತಾವು ಮಾಡಿರುವ ಸಾಧನೆಗಳನ್ನು ದೃಢೀಕರಿಸುವ ಪ್ರಮಾಣಪತ್ರಗಳ ಪ್ರತಿಗಳು ಹಾಗೂ ಇತ್ತೀಚಿನ 2 ಭಾವಚಿತ್ರಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ತಮ್ಮ ಅರ್ಜಿಗಳನ್ನು ಅಕ್ಟೋಬರ್ 10, 2026 ರೊಳಗೆ ತಲುಪುವಂತೆ ಕಳುಹಿಸಲು ಅಕಾಡೆಮಿಯ ಅಧ್ಯಕ್ಷರಾದ ಸುಭಾಷ್ ಗೌಡ ಕೆ. ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ. 

ಭರ್ತಿ ಮಾಡಿದ ಅರ್ಜಿಗಳನ್ನು ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ, ನಂಬರ್ 03, 4 ನೇ ಮುಖ್ಯರಸ್ತೆ, ಭೈರಪ್ಪ ರೋಡ್, ಬಿಡಬ್ಲ್ಯೂಎಸ್‌ಎಸ್‌ಬಿ ಕಚೇರಿ ಹತ್ತಿರ, ಅನ್ನಪೂರ್ಣೇಶ್ವರಿ ನಗರ, ಮಲ್ಲತಳ್ಳಿ, ಐಟಿಐ ಎಂಪ್ಲಾಯೀಸ್ ಲೇಔಟ್, ಬೆಂಗಳೂರು 560091 ಎಂಬ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ಮೊಬೈಲ್ ಸಂಖ್ಯೆಗಳಾದ 9916690077 ಅಥವಾ 8123253337 ಅನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *