Spread the love

ಹೊನ್ನಾವರ: ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ (Ganja) ಮಾದಕ ವಸ್ತು ಸೇವನೆ ಮಾಡುತ್ತಿದ್ದ ಮೂವರು ವ್ಯಕ್ತಿಗಳನ್ನು ವಶಕ್ಕೆ ಪಡೆದಿರುವ ಹೊನ್ನಾವರ ಪೊಲೀಸರು, ಅವರ ವಿರುದ್ಧ ಎನ್.ಡಿ.ಪಿ.ಎಸ್. ಕಾಯ್ದೆಯಡಿ (NDPS Act) ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

ಮಂಗಳವಾರ(ಅಕ್ಟೋಬರ್ 20)ರಂದು ನಡೆದ ಕಾರ್ಯಾಚರಣೆಯ ವೇಳೆ ಈ ಮೂವರನ್ನೂ ವಶಕ್ಕೆ ಪಡೆಯಲಾಗಿದೆ.

ಪ್ರಕರಣ 1: ಕುಳಕೋಡ ಗೋಪಾಲಕೃಷ್ಣ ದೇವಸ್ಥಾನದ ಕ್ರಾಸ್ ಹತ್ತಿರ ಮಧ್ಯಾಹ್ನ 12:00 ಗಂಟೆಗೆ ಗಾಂಜಾ ಸೇವನೆ ಮಾಡುತ್ತಿದ್ದ ಉಪ್ಪೋಣಿಯ ಪ್ಲಾಟಕೇರಿ ನಿವಾಸಿ, ವ್ಯಾಪಾರಿ ಮಹ್ಮದ ಯೂನಸ್ ಅಬುಮಹ್ಮದ ಗುರಕಾರ (36) ಎಂಬಾತನನ್ನು ಹೊನ್ನಾವರ ಪೊಲೀಸ್ ನಿರೀಕ್ಷಕ ಸಿದ್ದರಾಮೇಶ್ವರ ಎಸ್. ಅವರು ವಶಕ್ಕೆ ಪಡೆದಿದ್ದು, ಪ್ರಕರಣ (ಗುನ್ನಾ ನಂ: 239/2026) ದಾಖಲಿಸಿದ್ದಾರೆ.

ಪ್ರಕರಣ 2: ರಾಮತೀರ್ಥ ಹತ್ತಿರ ಮಧ್ಯಾಹ್ನ 1:15ರ ಸುಮಾರಿಗೆ ಗಾಂಜಾ ಸೇವನೆ ಮಾಡುತ್ತಿದ್ದ ಪ್ರಭಾತನಗರದ ನಿವಾಸಿ, ಚಾಲಕ ಗಿರೀಶ ಮಾಸ್ತಿ ಗೌಡ (37) ಎಂಬಾತನ ಮೇಲೆ ಪೊಲೀಸ್ ನಿರೀಕ್ಷಕ ಸಿದ್ದರಾಮೇಶ್ವರ ಎಸ್. ಅವರು ದೂರು ದಾಖಲಿಸಿದ್ದಾರೆ (ಗುನ್ನಾ ನಂ: 241/2026).

ಪ್ರಕರಣ 3: ಕಾಸರಕೋಡ ರೋಷನ ಮೊಹಲ್ಲಾ ಕ್ರಾಸ್ ಹತ್ತಿರ ಬೆಳಿಗ್ಗೆ 10:00 ಗಂಟೆಗೆ ಗಾಂಜಾ ಸೇವಿಸುತ್ತಿದ್ದ ನಗರಬಸ್ತಿಕೇರಿ ಹಿತ್ತಲತಾರಿ ನಿವಾಸಿ, ರಿಕ್ಷಾ ಚಾಲಕ ಮಹಮ್ಮದ ಹಾಷಮ್ ಮಹಮ್ಮದ ಸಾಬ (30) ಎಂಬಾತನನ್ನು ಹೊನ್ನಾವರ ತನಿಖಾ ಪಿಎಸ್‌ಐ ಸಂಗೀತಾ ಅವರು ವಶಕ್ಕೆ ಪಡೆದು ದೂರು ದಾಖಲಿಸಿದ್ದಾರೆ (ಗುನ್ನಾ ನಂ: 240/2026).

ಈ ಮೂವರ ವಿರುದ್ಧವೂ ಎನ್.ಡಿ.ಪಿ.ಎಸ್. ಕಾಯ್ದೆಯ ಕಲಂ 27 (ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *