ಕಾರವಾರ : ಗುತ್ತಿಗೆದಾರರೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಕಾರವಾರ ಸಾರ್ವಜನಿಕ ಆಸ್ಪತ್ರೆಯ (ಜಿಲ್ಲಾಸ್ಪತ್ರೆ) ವೈದ್ಯಾಧಿಕಾರಿ ಶಿವಾನಂದ ಕುಡ್ತಲಕರ್ ಲೋಕಾಯುಕ್ತರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.

ರೋಗಿಗಳ ಹಾಸಿಗೆ ಹಾಗೂ ಪೀಠೋಪಕರಣಗಳ ಟೆಂಡರ್ ನಲ್ಲಿ ಗುತ್ತಿಗೆದಾರನಿಗೆ ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದು, ಅಂಕೋಲಾ ಮೂಲದ ಗುತ್ತಿಗೆದಾರ ಮೌಸೀನ್ ಅಹ್ಮದ್ ಶೇಕ್ ಎಂಬುವವರು ಲೋಕಾಯುಕ್ತಕ್ಕೆ ದೂರುನೀಡಿದ್ದರು.
ಕಳೆದ ರಾತ್ರಿ 20 ಸಾವಿರ ಹಣವನ್ನು ಹೊಂದಿಸಿಕೊಂಡು ಗುತ್ತಿಗೆದಾರ ನೀಡಿದ್ದ ಎನ್ನಲಾಗಿದೆ,ಬಾಕಿ ಉಳಿದ 30 ಸಾವಿರ ಹಣವನ್ನು ನೀಡುವಂತೆ ಪೀಡಿಸುತ್ತಿದ್ದ, ವೈದ್ಯನ ಕಾಟದಿಂದ ಬೇಸತ್ತು ಲೋಕಾಯುಕ್ತ ಪೊಲೀಸರ ಗಮನಕ್ಕೆ ತಂದಿದ್ದು 30 ಸಾವಿರ ರೂಪಾಯಿ ಹಣ ಸ್ವಿಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಕಾರವಾರ ಲೋಕಾಯುಕ್ತ ಡಿವೈಎಸ್ಪಿ ಧನ್ಯಾ ನಾಯ್ಕ್ ನೆತೃತ್ವದಲ್ಲಿ ಈ ದಾಳಿ ನಡೆಸಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.


Leave a Reply