Spread the love

ಅಂಕೋಲಾ: ಇಂದು ಭಾರತೀಯ ಜನತಾ ಪಾರ್ಟಿಯಿಂದ ನಡೆಯುತ್ತಿರುವ ಪ್ರಶಿಕ್ಷಣ ವರ್ಗದಲ್ಲಿನ ಇಂದಿನ ಕಲಿಕೆಯೇ ನಮ್ಮೆಲ್ಲರ ಮುಂದಿನ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಬಿಜೆಪಿಯ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ ಹೇಳಿದರು.

ಭಾರತೀಯ ಜನತಾ ಪಾರ್ಟಿ ಅಂಕೋಲಾ ಮಂಡಲ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪಂ.ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಾಹಾಭಿಯಾನ 2026 ರ ಮಂಡಲ ಮಟ್ಟದ ಪ್ರಶಿಕ್ಷಣ ವರ್ಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಾವು ಜಗತ್ತಿನ ಅತೀ ದೊಡ್ಡ ರಾಜಕೀಯ ಪಕ್ಷವಾಗಿರುವ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಎನ್ನುವುದೇ ನಮಗೆ ಹೆಮ್ಮೆ. ಇಂದಿನ ದಿನ ಬಿಜೆಪಿಯ ಎಲ್ಲಾ ಕಾರ್ಯಕರ್ತರಿಗೆ ಶುಭ ದಿನ, ಜ್ಞಾನದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಎರಡು ದಿನಗಳ ಕಾಲ ನಡೆಯುವ ಪ್ರಶಿಕ್ಷಣ ವರ್ಗ ಕಾರ್ಯಕರ್ತರ ಹುಮ್ಮಸ್ಸನ್ನು ಮತ್ತಷ್ಟು ಹೆಚ್ಚಿಸಲಿದೆ.ನಾವು ಕಲಿತುಕೊಂಡು ಹೋಗಿರುವ ವಿಷಯವನನ್ನು ಮೈಗೂಡಿಸಿಕೊಂಡು,ಅದನ್ನು ಸಾರ್ವಜನಿಕ ವಲಯದಲ್ಲಿ ಸಾದರಪಡಿಸಬೇಕು.

ದೇಶಕ್ಕೆ ಸಂಕಟ ಎದುರಾದಾಗ ನಾವು ಯಾವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು, ಹಾಗೆಯೇ ಇಂದಿನ ದಿನಗಳಲ್ಲಿ ಬಿಜೆಪಿಯ ಒಬ್ಬ ಕಾರ್ಯಕರ್ತನು ಉತ್ತಮ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಲು ಈ ಕಾರ್ಯಾಗಾರ ಮಹತ್ವದ್ದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಡಲಾಧ್ಯಕ್ಷ ಸಂಜಯ ನಾಯ್ಕ ಮಾತನಾಡಿ ರಾಜಕೀಯ ಒಂದು ಕಲೆ,ಒಂದು ವ್ಯಕ್ತಿಯ ಮುಖ ಚಿತ್ರಣವನ್ನು ವೈವಿದ್ಯಮಯವಾಗಿ ಬಿತ್ತರಿಸಲು ಕಲಿಕೆ ಅತ್ಯವಶ್ಯಕ, ನಾವು ಮಾಡುವ ಯಾವುದೇ ಉದ್ಯೋಗದಲ್ಲಿಯೂ ಶ್ರದ್ಧೆ ಮಹತ್ವದ್ದಾಗಿದೆ.ಸಂಘಟನೆ ಸಹಬಾಳ್ವೆಯನ್ನು ಹೊಂದಿ ನಿಷ್ಠಾವಂತ ಪ್ರಾಮಾಣಿಕ ಕಾರ್ಯಕರ್ತರಾಗಲು ಮತ್ತಷ್ಟು ಹೆಚ್ಚಿನ ಶಿಕ್ಷಣ ಪಡೆಯಲು ಪ್ರಶಿಕ್ಷಣ ವರ್ಗ ಮಹತ್ವದ ಪಾತ್ರ ವಹಿಸಿದೆ ಎಂದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಅಂಕೋಲಾ ಮಂಡಲದ ಪ್ರಭಾರಿ ಸುಬ್ರಾಯ ದೇವಾಡಿಗ , ಜಿಲ್ಲಾ ಕಾರ್ಯದರ್ಶಿ ನಿತ್ಯಾನಂದ ಗಾಂವ್ಕರ್, ಜಿಲ್ಲಾ ಹಿಂದುಳಿದವರ್ಗ ಮೋರ್ಚಾದ ಜಿಲ್ಲಾಧ್ಯಕ್ಷ ರಾಜೇಂದ್ರ ನಾಯ್ಕ,ಮಾಧ್ಯಮ ಸಂಚಾಲಕ ಜಗದೀಶ ನಾಯಕ ಮೊಘಟಾ,ಪ್ರಕೋಷ್ಠ ಸಂಚಾಲಕ ರಾಘವೇಂದ್ರ ಭಟ್ ಉಪಸ್ಥಿತರಿದ್ದರು.ಮಂಡಳ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ನಾಯ್ಕ ಸ್ವಾಗತಿಸಿದರು,ಶ್ರೀಧರ ನಾಯ್ಕ ವಂದಿಸಿದರು.

Leave a Reply

Your email address will not be published. Required fields are marked *