ಅಂಕೋಲಾ: ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಅನುಭವದೊಂದಿಗೆ, ಚಾರಿತ್ರ್ಯ ಹೊಂದಿರುವ ಸಾಮಾಜಿಕ, ಧಾರ್ಮಿಕ,ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಾಕಷ್ಟು ಸೇವೆ ಮಾಡುತ್ತಿರುವ ಶ್ರೇಷ್ಠ ಸಹಕಾರಿ ವಸಂತ ಜಿ ನಾಯಕ ಜಮಗೋಡ್ ರವರಿಗೆ ದೊರೆಯುತ್ತಿರುವ ಅಭೂತಪೂರ್ವ ಬೆಂಬಲದಿಂದ ಕೆಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಗೆ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಸಹಕಾರಿ ಕ್ಷೇತ್ರದಲ್ಲಿ ಈ ಹಿಂದಿನಿಂದಲೂ ಸತತ ಪರಿಶ್ರಮದ ಮೂಲಕ ಸಾಗಿ ಬಂದ ವಸಂತ ನಾಯಕರು ಕೆಡಿಸಿಸಿ ಬ್ಯಾಂಕಿನ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ದುಡಿಯುತ್ತಾರೆ ಎನ್ನುವ ಭರವಸೆಯಿಂದ ಬ್ಯಾಂಕಿನ ಆಡಳಿತ ಮಂಡಳಿಗೆ ಬರುವಂತಾಗಲಿ ಎಂದು ಜಿಲ್ಲೆಯ ಅನೇಕ ಸಹಕಾರಿಗಳು ಹಂಬಲವ್ಯಕ್ತಪಡಿಸಿ ವಸಂತ ನಾಯಕರ ಗೆಲುವಿಗೆ ಶ್ರಮಿಸುತ್ತಿದ್ದಾರೆ ಎನ್ನಲಾಗಿದೆ.

ಕಳೆದ 5 ವರ್ಷದ ಹಿಂದೆ ನಡೆದ ಕೆ.ಡಿ.ಸಿ.ಸಿ ಬ್ಯಾಂಕಿನ ಚುನಾವಣೆಯಲ್ಲಿ ಜಿಲ್ಲೆಯ ಕೃಷಿಯೇತರ ಸೌಹಾರ್ದ ಸಹಕಾರಿ ಸಂಘಗಳು ಮತ್ತು ಅರ್ಬನ್ ಬ್ಯಾಂಕುಗಳಿಂದ ಪ್ರತಿನಿಧಿಸುವ ಕ್ಷೇತ್ರದಿಂದ ಇವರು ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಸೌಹಾರ್ದ ಸಹಕಾರಿ ಸಂಘಗಳು ಅತ್ಯಂತ ಹೆಚ್ಚು ಮತಗಳನ್ನು ನೀಡಿ ಪ್ರೋತ್ಸಾಹಿಸಿದ್ದವು,ನಂತರ ಚುನಾವಣೆಯ ಸಂದರ್ಭದಲ್ಲಿ ನಡೆದ ಕೆಲವು ಲೋಪಗಳು ಹಾಗೂ ಅಕ್ರಮಗಳಿಂದ ವಸಂತ ಜಿ ನಾಯಕ ಅವರಿಗೆ ಅನ್ಯಾಯವಾಗಿದೆ ಎಂದು ಅಭಿಮಾನಿಗಳು ಹಾಗೂ ಸಹಕಾರಿಗಳು ಬೇಸರ ವ್ಯಕ್ತಪಡಿಸಿದ್ದರು.ಅಂದಿನಿಂದ ಇಂದಿನವರೆಗೂ ಚುನಾವಣೆಯಲ್ಲಿ ಸ್ಪರ್ದಿಸುವಂತೆ ಒತ್ತಾಯ ಹೇರುತಿದ್ದ ಸಹಕಾರಿಗಳ ಅಪೇಕ್ಷೆಯ ಮೇರೆಗೆ ವಸಂತ ಜಿ ನಾಯಕ ಅವರು ಮತ್ತೊಮ್ಮೆ ಚುನಾವಣೆಗೆ ಸ್ಪರ್ದಿಸುತ್ತಿದ್ದು ಅಪಾರ ಬೆಂಬಲ ವ್ಯಕ್ತವಾಗುತ್ತಿರುವುದರಿಂದ ಗೆಲುವು ನಿಶ್ಚಿತ ಎನ್ನುವ ಮಾತು ಕೇಳಿಬರುತ್ತಿದೆ.
ಸಹಕಾರಿ ಹಿರಿ-ಕಿರಿಯರನ್ನು ಒಗ್ಗೂಡಿಕೊಂಡು ತೆರಳುತ್ತಿರುವ ವಂಸಂತ ನಾಯಕ.
ಹಿರಿಯರ ಸಹಕಾರಿಗಳ ಮಾರ್ಗದರ್ಶನ,ಕಿರಿ ಸಹಕಾರಿಗಳ ಸಲಹೆಯೊಂದಿಗೆ ಒಗ್ಗೂಡಿಕೊಂಡು ಹೋಗುತ್ತಿರುವ ಸಹಕಾರಿ ದುರಿಣ ವಸಂತ ನಾಯಕ ಚುನಾವಣೆಗೆ ಸ್ಪರ್ದಿಸುವ ಸಂಪೂರ್ಣ ತಯಾರಿ ಮಾಡಿಕೊಂಡಿದ್ದು ಜಿಲ್ಲೆಯ ಎಲ್ಲ ಸಹಕಾರಿಗಳ ಸಂಪರ್ಕದಲ್ಲಿ ಇದ್ದಾರೆ. ಹಾಗೂ ಈ ಭಾರಿ ಪ್ರತಿಶತ 100 ಕ್ಕೆ 100 ರಷ್ಟು ವಸಂತ ಜಿ ನಾಯಕರನ್ನು ಗೆಲ್ಲಿಸುವ ಪ್ರಯತ್ನಕ್ಕೆ ಎಲ್ಲಾ ಸಹಕಾರಿಗಳು ಶ್ರಮಿಸುತ್ತಿದ್ದಾರೆ ಎನ್ನಲಾಗಿದೆ.

ವಸಂತ ಜಿ ನಾಯಕ ಅವರ ಹಿನ್ನೆಲೆ ಮತ್ತು ನಡೆದು ಬಂದ ದಾರಿ.
ಎಂ ಕಾಂ ಪದವೀಧರರಾಗಿರುವ ವಸಂತ ನಾಯಕ ಅನೇಕಾರು ಉದ್ಯಮಕ್ಷೇತ್ರದಲ್ಲಿ ತಾವು ತೊಡಗಿಸಿಕೊಂಡು ಏಳು ಬೀಳುಗಳನ್ನು ಸಮರ್ಥವಾಗಿ ನಿಭಾಯಿಸಿ ಇಂದು ಅತ್ಯುತ್ತಮ ಉದ್ದಿಮೆದಾರರಾಗಿ ಹೊರಹೊಮ್ಮಿದ್ದು, ಶ್ರೇಷ್ಟ ಸಹಕಾರಿಗಳಾಗಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದವರು.
ಸಮಾಜದಲ್ಲಿ ಯಾವುದೇ ಗುಂಪುಗಾರಿಕೆಗೆಯಲ್ಲಿ ಗುರುತಿಸಿಕೊಳ್ಳದೆ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಂಡು ಬಂದಿದ್ದಾರೆ. ನೇರನುಡಿಯವರಾದ ವಸಂತ ನಾಯಕ ಅಸಹಾಯಕರು, ಬಡವರು, ಸಂಘಸಂಸ್ಥೆಗಳು ಸಹಾಯ ಕೇಳಿ ಬಂದಾಗ ಬರಿಗೈಯಲ್ಲಿ ಕಳುಹಿಸದೇ ಸದಾ ಸಹಾಯಹಸ್ತ ನೀಡುತ್ತಾ ಬಂದಿದ್ದಾರೆ. ಸಮಾಜದಲ್ಲಿ ಹಿರಿಯರು ಹಾಗೂ ಕಷ್ಟದಲ್ಲಿದ್ದ ಬಡವರ ಕುರಿತು ವಿಶೇಷ ಗೌರವ ಮತ್ತು ಕಾಳಜಿ ಹೊಂದಿರುವ ಇವರು ಪರಿಸರವನ್ನು ಉಳಿಸಿ ಬೆಳೆಸುವದಕ್ಕೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡವರು.
ಲೋಕ ಕಲ್ಯಾಣಕ್ಕಾಗಿ ವರ್ಷಂಪ್ರತಿ ಅಂಕೋಲಾದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಹೋಮ ಹವನ, ಅನ್ನಸಂತರ್ಪಣೆ, ಯಕ್ಷಗಾನ ಸೇವೆ ಹೀಗೆ ಹಲವು ದೇವತಾ ಕಾರ್ಯಕ್ರಮಗಳನ್ನು ಡೆಸಿಕೊಂಡು ಬಂದಿದವರು. ಕೋವಿಡ್ ಸಾಂಕ್ರಾಮಿಕ ರೋಗ ಹರಡಿದ ಸಂದರ್ಭದಲ್ಲಿ ವಿಶೇಷವಾಗಿ ಸಮಾಜದ ಎಲ್ಲ ವರ್ಗದವರಿಗೂ ಸಹಾಯಹಸ್ತ ನೀಡುತ್ತಾ,ಕೋವಿಡ್ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿದ್ದ 114 ಆಶಾ ಕಾರ್ಯಕರ್ತರಿಗೆ ರೂ.114000 ಧನಸಹಾಯ ಮಾಡಿ ಅವರಿಗೆ ಮಾನಸಿಕ ಸ್ಥೈರ್ಯವನ್ನು ತುಂಬಿದವರು.ನೂರಾರು ಜನರಿಗೆ ಆಹಾರದ ಪೊಟ್ಟಣ ಹಾಗೂ ಔಷಧಗಳನ್ನು, ಸ್ಯಾನಿಟೈಸರಗಳನ್ನು, ಮಾಸ್ಕಗಳನ್ನು ನೀಡಿ ಅವರಿಗೆ ಧೈರ್ಯ ತುಂಬಿರುತ್ತಾರೆ. ಕೋವಿಡ್ ಪೀಡಿತರನ್ನು ಆಸ್ಪತ್ರೆಗೆ ಸೇರಿಸಿ ವಿಶೇಷ ಚಿಕಿತ್ಸೆ ಕೊಡಿಸುವ ವ್ಯವಸ್ಥೆಯನ್ನು ಸಹ ಮಾಡಿ ಮಾನವೀಯತೆಯನ್ನು ಮೆರೆದಿರುತ್ತಾರೆ. ಸಂಸ್ಥಾಪಕ ಅಧ್ಯಕ್ಷರಾಗಿ ಶ್ರೀರಾಮ ಪರಿಸರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವನ್ನು ಪ್ರಾರಂಭಿಸಿದ್ದು ಜಿಲ್ಲೆಯಾದ್ಯಂತ 7 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ನೂರಾರು ಜನರಿಗೆ ಉದ್ಯೋಗ ನೀಡಿದ ಶ್ರೇಯಸ್ಸು ಇವರದು.. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸುಲಭವಾಗಿ ಸಾಲಗಳನ್ನು ನೀಡಿ ಆರ್ಥಿಕವಾಗಿ ಸಹಾಯ ಮಾಡಿರುತ್ತಾರೆ. ಇವರು ಜಿಲ್ಲೆಯಲ್ಲಿಯೇ ಶ್ರೇಷ್ಠ ಸಹಕಾರಿ ಸಂಸ್ಥೆಯ ಅಧ್ಯಕ್ಷರಾಗಿ, ಹೊಟೇಲ್ ಉದ್ದಿಮೆದಾರರಾಗಿ, ಅಡಿಕೆ ವ್ಯಾಪಾರಸ್ಥರಾಗಿ ಕೃಷಿಕರಾಗಿ ಎಲ್ಲ ರಂಗಗಳಲ್ಲೂ ಯಶಸ್ಸನ್ನು ಹೊಂದಿರುತ್ತಾರೆ.

ಕೆಡಿಸಿಸಿ ಬ್ಯಾಂಕಿನ ಅಭಿವೃದ್ಧಿಯ ಗುರಿ.
ವಸಂತ ನಾಯಕ ಮಾಡಿಕೊಂಡಿರುವ ಸಂಕಲ್ಪವೇನೆಂದರೆ ಜಿಲ್ಲೆಯ ಪ್ರತಿಷ್ಠಿತ ಕೆ.ಡಿ.ಸಿ.ಸಿ ಬ್ಯಾಂಕ್ ಅಭಿವೃದ್ಧಿಯಾಗಿ,ಕೃಷಿಕರ ಬದುಕು ಹಸನಾಗಬೇಕು ಹಾಗೂ ಸಹಕಾರಿ ಕ್ಷೇತ್ರವೂ ಸಹ ಉತ್ತಮವಾಗಿ ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗಬೇಕು. ಜಿಲ್ಲೆಯ ಕೃಷಿಕರು ಸೇರಿದಂತೆ ಇತರೆ ಎಲ್ಲಾ ವರ್ಗದ ನಾಗರಿಕರಿಗೆ ಪ್ರಾಮಾಣಿಕ ಸೇವೆ ಸಿಗುವಂತಾಗಬೇಕು ಎನ್ನುವ ಕಾರಣದಿಂದ ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ಆಯ್ಕೆಯಾಗಿ ತನ್ನ ಪ್ರಾಮಾಣಿಕ ಸೇವೆ ಮಾಡಬೇಕೆನ್ನುವದು ಮುಖ್ಯ ಉದ್ದೇಶವಾಗಿದ್ದರಿಂದ ಅಭೂತಪೂರ್ವ ಬೆಂಬಲ ದೊರೆಯುತ್ತಿದ್ದು, ಪ್ರಸಕ್ತ ಅವಧಿಯಲ್ಲಿ ಇವರನ್ನು ಗೆಲ್ಲಿಸಿ ಕೆಡಿಸಿಸಿ ಆಡಳಿತ ಮಂಡಳಿಗೆ ಆಯ್ಕೆ ಮಾಡಬೇಕೆನ್ನುವುದು ಹಲವಾರು ಸಹಕಾರಿಗಳ ಆಶಯವಾಗಿದೆ.














Leave a Reply