Author: Sandeep Sagar

ಕೊ*ಲೆ ಮಾಡಿ, ಶ*ವವನ್ನು ಕಾರಿನ ಸಮೇತ ಸುಟ್ಟು ಅಪಘಾತದಂತೆ ಬಿಂಬಿಸುವ ಯತ್ನ: ಮೂವರು ಹಂತಕರ ಸೆರೆ!

ಯಲ್ಲಾಪುರದ ಬಳಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊ*ಲೆ ಮಾಡಿ, ಆತನ ಶ*ವವನ್ನು ಕಾರಿನಲ್ಲಿಟ್ಟು ಸುಟ್ಟುಹಾಕಿ ರಸ್ತೆ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದ ಹುಬ್ಬಳ್ಳಿ ಮೂಲದ ಮೂವರು ಹಂತಕರನ್ನು ಯಲ್ಲಾಪುರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

Super Market ಒಳನುಗ್ಗಿ ಲಕ್ಷಾಂತರ ರೂಪಾಯಿ ದೋಚಿದ ಖದೀಮರು!

ಪಟ್ಟಣದ ಬಸ್ ನಿಲ್ದಾಣ ರಸ್ತೆಯಲ್ಲಿರುವ ಎ.ಆರ್.ಎಂ ಬಜಾರ್ (A.R.M Bazar) ಸೂಪರ್ ಮಾರ್ಕೆಟ್‌ನ ಗಾಜು ಒಡೆದು ಒಳನುಗ್ಗಿರುವ ಖದೀಮರು, ಲಕ್ಷಾಂತರ ರೂಪಾಯಿ ನಗದು ಹಾಗೂ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳಾ ಮಸೂದೆಗಾಗಿ ನಿರಂತರ ಹೋರಾಟ ನಡೆಸುತ್ತೇವೆ: ರೂಪಾಲಿ ನಾಯ್ಕ

ಮಹಿಳೆಯರ ಬಗ್ಗೆ ಪ್ರತಿಪಕ್ಷಗಳ ಕಾಳಜಿ ಎಷ್ಟಿದೆ ಎನ್ನುವುದು ಜಗಜ್ಜಾಹೀರಾಗಿದೆ. ಮಹಿಳಾ ವಿರೋಧಿ ನಿಲುವು ತಾಳಿದ ಪ್ರತಿಪಕ್ಷಗಳಿಗೆ ಬರಲಿರುವ ಎಲ್ಲ ಚುನಾವಣೆಗಳಲ್ಲೂ ಮಹಿಳೆಯರೇ ತಕ್ಕ ಪಾಠ ಕಲಿಸಲಿದ್ದಾರೆ.

KSRTC ಬಸ್ಸಿನಲ್ಲಿ ದಿಢೀರ್ ಬೆಂಕಿ: ಸಮಯಪ್ರಜ್ಞೆ ಮೆರೆದು ಪ್ರಯಾಣಿಕರ ಜೀವ ಉಳಿಸಿದ ಸ್ಥಳೀಯರು! | Watch

ಕುಮಟಾದಿಂದ ಭಟ್ಕಳಕ್ಕೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್ಸೊಂದರಲ್ಲಿ ಮುರುಡೇಶ್ವರದ ಬಳಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಆಟೋ ಚಾಲಕ ಹಾಗೂ ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ಭಾರಿ ಅನಾಹುತವೊಂದು ತಪ್ಪಿದೆ. ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ.

ನ್ಯಾಯಾಲಯಕ್ಕೇ ನಕಲಿ ದಾಖಲೆ ನೀಡಿ ವಂಚಿಸುತ್ತಿದ್ದ ಖತರ್ನಾಕ್ ಆರೋಪಿ ಭಟ್ಕಳ ಪೊಲೀಸರ ಬಲೆಗೆ!

ಜಾಮೀನು ಪ್ರಮಾಣಪತ್ರದ ಜೊತೆಗೆ ಲಗತ್ತಿಸಲಾಗಿದ್ದ ಆಧಾರ್ ಕಾರ್ಡ್ ಹಾಗೂ ಪಹಣಿಯನ್ನು ನ್ಯಾಯಾಲಯದ 'ಶೂರಿಟಿ ಮ್ಯಾನೇಜ್ಮೆಂಟ್ ಸಿಸ್ಟಮ್' ಮೂಲಕ ಪರಿಶೀಲಿಸಿದಾಗ ಅವು ಸೃಷ್ಟಿಸಲಾದ

ಅಂಕೋಲಾ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಧಗಧಗನೆ ಹೊತ್ತಿ ಉರಿದ ಟ್ಯಾಂಕರ್! ಅಸ್ತವ್ಯಸ್ತಗೊಂಡ ಸಂಚಾರ

ವಾಹನ ಪಲ್ಟಿಯಾದ ಕೇವಲ ಕೆಲವೇ ಕ್ಷಣಗಳಲ್ಲಿ ಟ್ಯಾಂಕರ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಧಗಧಗನೆ ಉರಿಯಲಾರಂಭಿಸಿದೆ. ಟ್ಯಾಂಕರ್‌ನಲ್ಲಿ ಜ್ವಲನಶೀಲ ವಸ್ತು ಇದ್ದ ಕಾರಣ ಬೆಂಕಿಯ ತೀವ್ರತೆ ವಿಪರೀತವಾಗಿದ್ದು, ಆತಂಕಗೊಂಡ ಸ್ಥಳೀಯರು ಹಾಗೂ ವಾಹನ ಸವಾರರು

ಮನೆಯೊಳಗೆ ಸೇರಿಕೊಂಡಿದ್ದ ಬರೋಬ್ಬರಿ 16 ಅಡಿಯ ಕಾಳಿಂಗ ಸರ್ಪ ಸೆರೆ! ನಿಟ್ಟುಸಿರು ಬಿಟ್ಟ ನಿವಾಸಿಗಳು

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಳವಳ್ಳಿ ಗ್ರಾಮದಲ್ಲಿ ಮನೆಯೊಳಗೆ ಅವಿತುಕೊಂಡಿದ್ದ ಬರೋಬ್ಬರಿ 16 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ಉರಗ ತಜ್ಞರು ಯಶಸ್ವಿಯಾಗಿ ರಕ್ಷಿಸಿದ್ದಾರೆ. ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಈ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.

Online ಟ್ರೇಡಿಂಗ್ ಆಮಿಷ: ನಿವೃತ್ತ ನೌಕರನಿಗೆ ಬರೋಬ್ಬರಿ 21.76 ಲಕ್ಷ ರೂ. ವಂಚಿಸಿದ ಸೈಬರ್ ಖದೀಮರು!

ಕಾರವಾರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಆನ್‌ಲೈನ್ ಟ್ರೇಡಿಂಗ್ ವಂಚನೆ ಪ್ರಕರಣ ದಾಖಲಾಗಿದೆ. ಕೈಗಾ ಟೌನ್‌ಶಿಪ್‌ನ ನಿವೃತ್ತ ನೌಕರರೊಬ್ಬರು ವಾಟ್ಸಾಪ್ ಲಿಂಕ್ ಮೂಲಕ ಟ್ರೇಡಿಂಗ್ ಆಪ್‌ನಲ್ಲಿ ಹೂಡಿಕೆ ಮಾಡುವ ಆಮಿಷಕ್ಕೆ ಬಲಿಯಾಗಿ 21.76 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಅಣುವಿದ್ಯುತ್ 5-6ನೇ ಘಟಕ ನಿರ್ಮಾಣ ಚುರುಕು: ಕೈಗಾಕ್ಕೆ ಹೊರಟ `ಗಜಗಾತ್ರ’ದ ಸರಕು!

ಕಾರವಾರದಿಂದ ಕೈಗಾಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗವು ಸಾಕಷ್ಟು ಕಿರಿದಾಗಿದ್ದು, ರಸ್ತೆಯುದ್ದಕ್ಕೂ ಅನೇಕ ಕಡೆ ಮರಗಿಡಗಳು ಹಾಗೂ ವಿದ್ಯುತ್ ತಂತಿಗಳು ಹಾದುಹೋಗಿವೆ. ಇದರ ಜೊತೆಗೆ ಕೆಲವೆಡೆ ದುರ್ಬಲ ಸೇತುವೆಗಳೂ ಇರುವುದರಿಂದ, ಇಷ್ಟು ದೊಡ್ಡ ಗಾತ್ರದ