ಅಂಕೋಲಾ: ನೀಲಿಕಲ್ಲು ಅರಿಸಲು ಹೋದ ವ್ಯಕ್ತಿ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಲೇಕೇರಿಯಲ್ಲಿ ನಡೆದಿದೆ.

ಮೃತ ವ್ಯಕ್ತಿ ಭಾವಿಕೇರಿಯ ಆನಂದು ಚನ್ನಾ ನಾಯ್ಕ (52) ಎಂದು ಗುರುತಿಸಲಾಗಿದೆ. ಅವರು ಕರಾವಳಿಯ ಸಾಂಪ್ರದಾಯಿಕ ಆಹಾರವಾದ ನೀಲಿಕಲ್ಲು ಆರಿಸಲು ಸಮುದ್ರ ತೀರಕ್ಕೆ ತೆರಳಿದ್ದರು ಎನ್ನಲಾಗಿದೆ.ಈ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಏನಿದು ಪ್ರಕರಣ?
ರವಿವಾರ ಮಧ್ಯಾಹ್ನ ಬೇಲೆಕೇರಿಗೆ ಚಿಪ್ಪಕಲ್ಲ ಆರಿಸಿಕೊಂಡು ಬರುವದಾಗಿ ಹೇಳಿ ಭಾವಿಕೇರಿಯಲ್ಲಿನ ತಮ್ಮ ಮನೆಯಿಂದ ಕೈಚೀಲ ಮತ್ತು ಹಲಗತ್ತಿಯನ್ನು ತೆಗೆದುಕೊಂಡು ಹೋಗಿದ್ದು, ತಡರಾತ್ರಿಯವರೆಗೆ ಮನೆಗೂ ಬಾರದೇ ಇದ್ದುದರಿಂದ ಕಾಣೆಯಾದ ತನ್ನ ತಂದೆಗೆ ಹುಡುಕಿ ಕೊಡುವಂತೆ ಆತನ ಮಗ ಪೊಲೀಸರ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಫ್ ಐ ಆರ್ ಅಲ್ಲಿ ಏನಿದೆ?
ದಿನಾಂಕ: 20-10-2025 ರಂದು 22-30 ಗಂಟೆಗೆ ಫಿರ್ಯಾದುದಾರರಾದ ಶ್ರೀ ವಿನಯ ತಂದೆ ಆನಂದು ನಾಯ್ಕ, ಪ್ರಾಯ: 19 ವರ್ಷ, ವಿದ್ಯಾರ್ಥಿ ಸಾ|| ಕಾನಬೀರವಾಡ ಭಾವಿಕೇರಿ ಅಂಕೋಲಾ ಇವರು ಅಂಕೋಲಾ ಪೊಲೀಸ ಠಾಣೆಯಲ್ಲಿ ಹಾಜರಾಗಿ ನೀಡಿದ ಲಿಖಿತ ದೂರಿನಲ್ಲಿ ” ತನ್ನ ತಂದೆ ಶ್ರೀ ಆನಂದು ತಂದೆ ಚೆನ್ನಾ ನಾಯ್ಕ, ಪ್ರಾಯ: 51 ವರ್ಷ, ಉದ್ಯೋಗ: ಕೃಷಿಕೆಲಸ ಸಾ|| ಕಾನಬೀರವಾಡ ಭಾವಿಕೇರಿ ಅಂಕೋಲಾ ಇವರು ಈ ದಿವಸ ದಿನಾಂಕ: 20-10-2025 ರಂದು ಮದ್ಯಾಹ್ನ ಸುಮಾರು 15-00 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಬೇಲೇಕರಿಗೆ ಚಿಪ್ಪಕಲ್ಲ ಆರಿಸಿಕೊಂಡು ಬರುವದಾಗಿ ಹೇಳಿ ಭಾವಿಕೇರಿಯಲ್ಲಿನ ತಮ್ಮ ಮನೆಯಿಂದ ಕೈಚೀಲ ಮತ್ತು ಹಲಗತ್ತಿಯನ್ನು ತೆಗೆದುಕೊಂಡು ಹೋದವರು. ಈ ವರೆಗೂ ಮನೆಗೂ ಬಾರದೇ. ತಮ್ಮ ಇರುವಿಕೆ ಬಗ್ಗೆ ಯಾವದೇ ಮಾಹಿತಿಯನ್ನು ನೀಡದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ತಂದೆಗೆ ಹುಡುಕಿ ಕೊಡಲು ವಿನಂತಿ ಅಂತಾ ಚಹರೆ ಗುರುತಿನೊಂದಿಗೆ ನೀಡಿದ ದೂರನ್ನು ಸ್ವೀಕರಿಸಿಕೊಂಡು ಅಂಕೋಲಾ ಮೊಲೀಸ್ ಠಾಣೆ ಗುನ್ನಾ ನಂಬರ : 194/2025 ಕಲಂ: ಮನುಷ್ಯ ಕಾಣಿ ನೇದಕ್ಕೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ.














Leave a Reply