Author: Sandeep Sagar

ಕಸಾಯಿಖಾನೆಗೆ ಸಾಗಿಸುತ್ತಿದ್ದ 8 ಒಂಟೆ, 2 ಎತ್ತುಗಳನ್ನ ರಕ್ಷಿಸಿದ ಭಟ್ಕಳ ಪೊಲೀಸರು; ಜಾನುವಾರು ಸಾಗಾಟಗಾರರ ವಿರುದ್ಧ ಪ್ರಕರಣ ದಾಖಲು

ಭಟ್ಕಳದಲ್ಲಿ ಅಕ್ರಮವಾಗಿ ಮತ್ತು ಕ್ರೂರವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, 8 ಒಂಟೆಗಳು ಹಾಗೂ 2 ಎತ್ತುಗಳನ್ನು ರಕ್ಷಿಸಿ ಹಲವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಸ್ಸಿನಲ್ಲಿ ಸಿಕ್ಕ 82 ಸಾವಿರ ರೂ. ಮೌಲ್ಯದ ಚಿನ್ನದ ಗಟ್ಟಿ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಚಾಲಕ, ನಿರ್ವಾಹಕ

ಶಿರಸಿಯಲ್ಲಿ ಅಕ್ಷಯ ತೃತೀಯದಂದು ಶಿಕ್ಷಕಿಯೊಬ್ಬರು ಬಸ್ಸಿನಲ್ಲಿ ಮರೆತು ಬಿಟ್ಟುಹೋಗಿದ್ದ 82,000 ರೂ. ಮೌಲ್ಯದ ಚಿನ್ನದ ಗಟ್ಟಿಯನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಸುರಕ್ಷಿತವಾಗಿ ಮರಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಮರುಮದುವೆ ಖುಷಿಯಲಿದ್ದ ಆಯುರ್ವೇದ ವೈದ್ಯನ ಬರ್ಬರ ಹ*ತ್ಯೆ ಪ್ರಕರಣ: ಚಿನ್ನಾಭರಣ ದೋಚಿದ್ದ ಖದೀಮ Arrest!

ಮದುವೆಯ ಹಿಂದಿನ ದಿನ ರಾತ್ರಿ ಅವರು ಮನೆಯಲ್ಲಿದ್ದಾಗಲೇ ಈ ಭೀಕರ ಕೃತ್ಯ ನಡೆದಿದೆ. ಮದುವೆ ಸಮಾರಂಭದ ಹಿನ್ನೆಲೆಯಲ್ಲಿ ಆಗಮಿಸಿದ್ದ ಅವರ ಅಕ್ಕ, ಡಾ. ರಮೇಶ್ ಅವರಿಗೆ ಕರೆ ಮಾಡಿದಾಗ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡು ಸಂಜೆ ಮನೆಗೆ ಹೋಗಿ…

ದೇವಸ್ಥಾನದ ಜಾಗದಲ್ಲಿ ಅಕ್ರಮ ಕಟ್ಟಡ; ಆಡಿಟ್ ಇಲ್ಲದೆ ಕಾಣಿಕೆ ಹಣ ದುರ್ಬಳಕೆ ಆರೋಪ

ದೇವಸ್ಥಾನದ ಮಾಜಿ ಮುಕ್ತೇಸರರು ಹಾಗೂ ದತ್ತಿ ಇಲಾಖೆಯ ಕೆಲವು ಭ್ರಷ್ಟ ಅಧಿಕಾರಿಗಳ ಶಾಮೀಲಿನಿಂದ ಇಲ್ಲಿ ಭಾರಿ ಅಕ್ರಮ ನಡೆದಿದೆ. ದೇವಸ್ಥಾನಕ್ಕೆ ಸೇರಿದ ಬರೋಬ್ಬರಿ 1 ಎಕರೆ 32 ಗುಂಟೆ ಜಮೀನನ್ನು ಅಕ್ರಮವಾಗಿ ಪರಭಾರೆ ಮಾಡಲಾಗಿದೆ" ಎಂದು ಅವರು ಗಂಭೀರ ಆರೋಪ ಮಾಡಿದರು.

ಶಿರಸಿಯ ಉಲ್ಲಾಳದಲ್ಲಿ ಸಂಭ್ರಮದ ‘ಕೆರೆ ಬೇಟೆ’: ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮೀನು ಹಿಡಿದು ಸಾಥ್ ನೀಡಿದ ಮಲೆನಾಡಿಗರು

ಶಿರಸಿ ತಾಲೂಕಿನ ಉಲ್ಲಾಳ ಗ್ರಾಮದಲ್ಲಿ ಶ್ರೀ ಮಾರಿಕಾಂಬಾ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಆಯೋಜಿಸಲಾಗಿದ್ದ ಮಲೆನಾಡಿನ ಸಾಂಪ್ರದಾಯಿಕ 'ಕೆರೆ ಬೇಟೆ' ಉತ್ಸವವು ನೂರಾರು ಜನರ ಉತ್ಸಾಹಭರಿತ ಪಾಲ್ಗೊಳ್ಳುವಿಕೆಯೊಂದಿಗೆ ಅದ್ದೂರಿಯಾಗಿ ನೆರವೇರಿತು.

ಆಯತಪ್ಪಿ 20 ಅಡಿ ಆಳದ ಕೆರೆಗೆ ಬಿದ್ದ ಕೃಷಿ ಕಾರ್ಮಿಕನ ದಾರುಣ ಅಂತ್ಯ!

ಶಿರಸಿ ತಾಲೂಕಿನ ಊರುತೋಟ ಗ್ರಾಮದ ತೋಟವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಕಾರ್ಮಿಕನೊಬ್ಬ ಆಯತಪ್ಪಿ ಕಾಲು ಜಾರಿ 20 ಅಡಿ ಆಳದ ಕೆರೆಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮಗನ ಸಾವಿನಿಂದ ಖಿನ್ನರಾಗಿದ್ದ ಇವರು ವಿಪರೀತ ಮದ್ಯಸೇವನೆ ಮಾಡುತ್ತಿದ್ದರು ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.