ಶಿರಸಿ : ಸಹಕಾರಿ ಕ್ಷೇತ್ರದಲ್ಲಿ ಅತ್ಯುತ್ತಮ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿರುವ ಶ್ರೀರಾಮ ಪರಿಸರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವಸಂತ ನಾಯಕ ಜಮಗೋಡ ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ಬುಧವಾರ ನಾಮಪತ್ರ ಸಲ್ಲಿಸಿದರು.

ಕಳೆದ ಬಾರಿ ವಸಂತ ನಾಯಕ ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಕಾಣದ ಕೈಗಳ ಕೈಚಳಕದಿಂದ ಕೆಲವೇ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಆದ್ದರಿಂದ ಕಳೆದ ಭಾರಿಯ ಪ್ರಭಲವಾಗಿ ಸ್ಪರ್ಧೆಯೊಡ್ಡಿದ್ದ ವಸಂತ ನಾಯಕ ಅವರನ್ನು ಈ ವರ್ಷವೂ ಸ್ಪರ್ಧಿಸುವಂತೆ ಅಭಿಮಾನಿಗಳು ಹಾಗೂ ಸಹಕಾರಿ ಕ್ಷೇತ್ರದ ಸಮಸ್ಯೆಯನ್ನು ಅರಿತ ಜಿಲ್ಲೆಯ ಹಲವು ಅರ್ಬನ ಬ್ಯಾಂಕ್‌ಗಳು ಮತ್ತು ಸೌಹಾರ್ದ ಸಹಕಾರಿಗಳು ವಿನಂತಿ ಮಾಡಿದ ಹಿನ್ನೆಲೆಯಲ್ಲಿ ವಸಂತ ನಾಯಕ ಚುನಾವಣಾ ಅಖಾಡಕ್ಕೆ ಇಳಿದಿದ್ದು, ಈಗಾಗಲೇ ಜಿಲ್ಲೆಯ ಪ್ರತಿಯೊಂದು ತಾಲೂಕು, ಹಳ್ಳಿ ಸೇರಿದಂತೆ ಮತಯಾಚನೆ ಮಾಡಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲಿ ಇವರು ನೀಡುವ ಸಹಾಯ ಸಹಕಾರಕ್ಕೆ ಇವರನ್ನು ಶ್ರೇಷ್ಠ ಸಹಕಾರಿಗಳ ಸಾಲಿನಲ್ಲಿ ನಿಲ್ಲಿಸಿದೆ.

ಅಭಿಮಾನಿಗಳ ಒತ್ತಾಯದ ಮೇರೆಗೆ ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದು, ಜಿಲ್ಲೆಯ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾಗುವ ಮೂಲಕ ಜಿಲ್ಲೆಯ ಕೃಷಿಕರಿಗೆ ಸಹಕರಿಸಬೇಕೆನ್ನುವ ಆಶಯ ಇವದ್ದಾಗಿದೆ.ಪ್ರತಿಯೊಂದು ವರ್ಗದ ನಾಗರಿಕರಿಗೂ ಪ್ರಾಮಾಣಿಕ ಸೇವೆ ನೀಡುತ್ತಿರುವ ಇವರಿಗೆ ಕೆಡಿಸಿಸಿ ನಿರ್ದೇಶಕ ಸ್ಥಾನ ದೊರಕಲಿ ಎನ್ನುವ ಆಶಯ ಹಲವರದ್ದಾಗಿದೆ.

ಸಂದರ್ಭದಲ್ಲಿ ಬಶೆಟ್ಟಿ ಕಾರವಾರ, ರಾಜೇಂದ್ರ ರಾಣೆ ಕಾರವಾರ, ಜಿ.ಪಿ.ನಾಯಕ, ರಾಮಕೃಷ್ಣ ನಾಯಕ, ಚಂದ್ರಹಾಸ ನಾಯಕ, ಪ್ರಕಾಶ ನಾಯಕ, ರಾಮಚಂದ್ರ ನಾಯಕ, ವೆಂಕಟೇಶ, ಎಂ.ಪಿ.ನಾಯಕ, ಪಿ.ಎಸ್.ನಾಯಕ, ವಿನಾಯಕ ನಾಯಕ ಕುಮಟಾ, ರಾಜೇಂದ್ರ ನಾಡರ, ಅನೂಪ, ವಿಶಾಲ, ಗಣೇಶ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.

ನಮ್ಮ ಜಿಲ್ಲೆಯ ಹಲವು ಸಹಕಾರಿಗಳ ಹಾಗೂ ಅಭಿಮಾನಿಗಳ ಒತ್ತಾಯದ ಮೇರೆಗೆ ನಾನು ಚುನಾವಣೆಗೆ ಸ್ಪರ್ಧಿಸಿದ್ದೇನೆ. ಈಗಾಗಲೇ ಪ್ರತಿಯೊಂದು ತಾಲೂಕಿನಲ್ಲಿ ಮತಯಾಚನೆ ಮಾಡಿದ್ದು, ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ಕಳೆದ ಚುನಾವಣೆಯಲ್ಲಿ ನನಗಾದ ಅನ್ಯಾಯಕ್ಕೆ ಹಲವರು ಬೇಸರ ವ್ಯಕ್ತಪಡಿಸಿದ್ದು, ಈ ಬಾರಿ ಸಹಕರಿಸುವುದಾಗಿ ತಿಳಿಸಿರುವುದರಿಂದ ನನಗೆ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿದೆ. ಸಹಕಾರಿ ಕ್ಷೇತ್ರವನ್ನು ಮತ್ತಷ್ಟು ಪ್ರಭಲಗೊಳಿಸುವ ಪ್ರಯತ್ನ ನನ್ನದಾಗಿದೆ.
ವಸಂತ ನಾಯಕ ಜಮಗೋಡ














Leave a Reply