ಇಲಾಖೆ ಆದೇಶಕ್ಕೆ ಸವಾಲು! ನ್ಯಾಯಾಲಯದಿಂದ ತಾತ್ಕಾಲಿಕ ರಿಲೀಫ್!ಅಮಾನತ್ತಾದ ಪುರಸಭೆ ಮುಖ್ಯಾಧಿಕಾರಿ ಮತ್ತೊಮ್ಮೆ ಅಧಿಕಾರ ಸ್ವೀಕಾರ! ಏನಿದು ಸುದ್ದಿ?

Spread the love

ಅಂಕೋಲಾ: ಕರ್ತವ್ಯಲೋಪ ಹಾಗೂ ಅಧಿಕಾರ ದುರ್ಬಳಕೆ ಮಾಡಿದ್ದ ಬಗ್ಗೆ ಆರೋಪ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ಅಮಾನತ್ತಾಗಿದ್ದ ಪುರಸಭೆ ಮುಖ್ಯಾಧಿಕಾರಿ ಎಚ್ ಅಕ್ಷತಾ ಅವರಿಗೆ ನ್ಯಾಯಾಲಯ ತಾತ್ಕಾಲಿಕ ರಿಲೀಫ್ ನೀಡಿದ್ದು, ಸೋಮವಾರ ಅಂಕೋಲಾ ಪುರಸಭೆಯಲ್ಲಿ ಮತ್ತೊಮ್ಮೆ ಅಧಿಕಾರ ವಹಿಸಿಕೊಂಡರು.

ಹೌದು…ಅಧಿಕಾರ ದುರ್ಬಳಕೆ ಹಾಗೂ ಕರ್ತವ್ಯಲೋಪ ಎಸಗಿದ್ದ ಬಗ್ಗೆ ಆರೋಪ ಮೇಲೆ  ಮುಖ್ಯಾಧಿಕಾರಿ ಎಚ್ ಅಕ್ಷತಾ ಹಾಗೂ ಕಿರಿಯ ಅಭಿಯಂತರರ ವಿರುದ್ಧ ಪುರಸಭೆ ಜನಪ್ರತಿನಿಧಿಗಳು ಜಿಲ್ಲಾಧಿಕಾರಿ ಹಾಗೂ ಪೌರಾಡಳಿತ ಇಲಾಖೆಗೆ ದೂರಿದ್ದರು,ಈ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆ ನಡೆಸಿ ಉತ್ತರಿಸುವಂತೆ ಪುರಸಭೆ ಮುಖ್ಯಾಧಿಕಾರಿ ಎಚ್ ಅಕ್ಷತಾ ಅವರಿಗೆ ನೋಟಿಸ್ ನೀಡಿದ್ದರು,ಸಮಂಜಸವಲ್ಲದ ಉತ್ತರ ನೀಡಿದ್ದರಿಂದ ಅಮಾನತ್ತುಗೊಳಿಸಿ ವರ್ಗಾವಣೆ ಆದೇಶ ಹೊರಡಿಸಿದ್ದರು. ಆದರೆ ಅಮಾನತ್ತು ಆದೇಶದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದ ಎಚ್ ಅಕ್ಷತಾ ರವರಿಗೆ ನ್ಯಾಯಾಲಯ ಅಮಾನತ್ತು ಆದೇಶಕ್ಕೆ ತಡೆಯಾಜ್ಞೆ ನೀಡಿ ತಾತ್ಕಾಲಿಕ ರಿಲೀಫ್ ನೀಡಿದೆ.ಈ ಹಿನ್ನೆಲೆಯಲ್ಲಿ ಅಂಕೋಲಾ ಮುಖ್ಯಾಧಿಕಾರಿಯಾಗಿ ಎಚ್ ಅಕ್ಷತಾ ಅಧಿಕಾರ ವಹಿಸಿಕೊಂಡಿದ್ದಾರೆ ಎನ್ನಲಾಗಿದೆ.

ನ್ಯಾಯಾಲಯದ ಆದೇಶಕ್ಕೆ ಬದ್ದ !

ನ್ಯಾಯಾಲಯದ ಆದೇಶವನ್ನು ನಾವು ಗೌರವಿಸುತ್ತೇವೆ, ಈ ಪ್ರಕರಣದಲ್ಲಿ ಸಾಕ್ಷ್ಯ ನಾಶ ವಾಗುವ ಹಿನ್ನೆಲೆಯಲ್ಲಿ ಕೂಲಂಕಷವಾಗಿ ತನಿಖೆ ನಡೆಯುವವರೆಗೆ ಮರುನಿಯೋಜನೆ ಮಾಡದಂತೆ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿಕೊಂಡಿದ್ದೆವು. ಅದರಂತೆಯೇ ಮರು ನಿಯೋಜನೆ ಮಾಡಿದ್ದಲ್ಲಿ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ ಪತ್ರ ನೀಡಿದ್ದೆವು ,ಆದರೆ ಜಿಲ್ಲಾಧಿಕಾರಿಯವರು ಅವರನ್ನೇ ಮರುನಿಯೋಜನೆಗೊಳಿಸಿ ಜನಪ್ರತಿನಿಧಿಗಳ ಮನವಿಗೆ ಸ್ಪಂದಿಸಿಲ್ಲ. ನಮ್ಮ ಹೋರಾಟ ಎಂದಿಗೂ ನಿಲ್ಲುವುದಿಲ್ಲ. ಯಾವುದೇ ಅಮಾನತ್ ಆಗಿರುವ ಅಧಿಕಾರಿ ಮತ್ತೊಮ್ಮೆ ಅಲ್ಲಿಯೇ ಮುಂದುವರೆದರೆ ಸಾಕ್ಷ್ಯ ನಾಶಕ್ಕೆ ಕಾರಣವಾಗುತ್ತದೆ ಹಾಗಾಗಿ ಸಮಗ್ರ ತನಿಖೆಗೆ ಒತ್ತಾಯಿಸುತ್ತೇವೆ ಎಂದು ಸದಸ್ಯರೊಬ್ಬರು ಮಾಧ್ಯಮವೊಂದರ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.ಹಾಗೆಯೇ ನ್ಯಾಯಾಲಯದ ಮೇಲೆ ಅಪಾರ ನಂಬಿಕೆಯಿರುವ ನಾವು ನಮಗೆ ಜಯ ಸಿಗಲಿದೆ ಎನ್ನುವ ವಿಶ್ವಾಸವಿದೆ ಎಂದರು.

ಒಂದು ಅಧಿಕಾರಿಯ ವಿರುದ್ಧ 23 ರ ಪೈಕಿ 19  ಜನಪ್ರತಿನಿಧಿಗಳು.

ಮುಖ್ಯಾಧಿಕಾರಿಯ ವಿರುದ್ಧ ಪುರಸಭೆಯ ಒಟ್ಟಾರೆ 23 ಜನಪ್ರತಿನಿಧಿಗಳ ಪೈಕಿ ಅಧ್ಯಕ್ಷ,ಉಪಾಧ್ಯಕ್ಷೇ ಸಹಿತ19 ಸದಸ್ಯರು ವಿರೋಧಿಸುತ್ತಿದ್ದು ಯಾಕೆ ? ಜನಪ್ರತಿನಿಧಿಗಳ ಆರೋಪದಲ್ಲಿ ಹುರುಳಿಲ್ಲವೇ? ಅಧಿಕಾರಿಗಳಿಗೆ ಜನಪ್ರತಿನಿಧಿಗಳೆಂದರೆ ಅಸಡ್ಡೆಯೇ?  ಆರೋಪವೂ ಸಾಕ್ಷಾಧಾರಗಳಿಂದ ಕೂಡಿದೆಯೆಂದಾದರೆ ಜಿಲ್ಲಾಡಳಿತ ಸೂಕ್ತಕ್ರಮಕ್ಕೆ ಯಾಕೆ ಹಿಂದೇಟು ಹಾಕುತ್ತಿದೆ?  ಮುಖ್ಯಾಧಿಕಾರಿಯವರ ಮೇಲೆ ವೈಯಕ್ತಿಕ ದ್ವೇಷ ಏನಾದರೂ ಕಂಡು ಬಂದಿದೆಯೇ?  ಅಮಾನತ್ತು ಆದ ಸ್ಥಳಕ್ಕೆ ಮರುನಿಯೋಜನೆಗೊಂಡರೆ ಸಾಕ್ಷ್ಯನಾಶವಾಗಬಹುದು ಎನ್ನುವ ಪರಿಜ್ಞಾನವು ಮೆಲಾಧಿಕಾರಿಗಳಿಗೆ ಇಲ್ಲವೇ?  ನ್ಯಾಯಾಲಯದ ಮುಂದೆ ತಮ್ಮ ಅಮಾನತ್ತು ಆದೇಶವನ್ನು ಸಮರ್ಥಿಸಿಕೊಳ್ಳಲು ವಿಫಲವಾಯಿತೇ ಪೌರಾಡಳಿತ ಇಲಾಖೆ? ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದು ನ್ಯಾಯಾಲಯದ ಆದೇಶ ಬರುವವರೆಗೆ ಕಾದುನೋಡಬೇಕಾಗಿದೆ.

Leave a Reply

Your email address will not be published. Required fields are marked *