ಕಾರವಾರ: ಅಂಕೋಲಾ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಹತ್ಯೆ ಯತ್ನ ನಡೆದಿರುವ ಬಗ್ಗೆ ಮಾಜಿ ಶಾಸಕಿ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಖಂಡನೆ ವ್ಯಕ್ತಪಡಿಸಿದ್ದಾರೆ.

ಕಾರವಾರ-ಅಂಕೋಲಾ ಕ್ಷೇತ್ರ ಶಾಂತಿ ಸುವ್ಯವಸ್ಥೆಗೆ ಹೆಸರಾಗಿದ್ದ ಕ್ಷೇತ್ರವಾಗಿದೆ. ಇಂತಹ ಕ್ಷೇತ್ರದಲ್ಲಿ ರಾಜಕೀಯ ಮುಖಂಡರ ಹತ್ಯೆಗೆ ಯತ್ನ ಮಾಡಿರುವುದು ಖಂಡನೀಯ. ಸಾಮಾಜಿಕ ಕ್ಷೇತ್ರದಲ್ಲಿ ಇರುವವರನ್ನ ಗುರಿಯಾಗಿಸಿಕೊಂಡು ಹತ್ಯೆ ಯತ್ನ ಮಾಡಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಈ ಪ್ರಕರಣವನ್ನು ಗೃಹ ಇಲಾಖೆ, ಜಿಲ್ಲಾ ಪೊಲೀಸರು ಗಂಭೀರವಾಗಿ ತೆಗೆದುಕೊಳ್ಳಬೇಕು. ಆರೋಪಿಗಳ ಬಂಧನದ ಜೊತೆಗೆ ಹತ್ಯೆಗೆ ಸುಪಾರಿ ನೀಡಿದವರನ್ನೂ ಸಹ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಮುಂದೆ ಇಂತಹ ಘಟನೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ರೂಪಾಲಿ ನಾಯ್ಕ ಆಗ್ರಹಿಸಿದ್ದಾರೆ.


