ಅಂಕೋಲಾ: ಉತ್ತರ ಕನ್ನಡವನ್ನು ಬೆಚ್ಚಿ ಬಿಳಿಸಿದ್ದ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿಗಳ ಫೋಟೋ ಸದ್ಯ ವೈರಲ್ ಆಗಿದೆ.

ಹೌದು..ಮಾರ್ಚ್ 25 ಬುಧವಾರ ಬೆಳಿಗ್ಗೆ ಅಂಕೋಲಾ ಪಟ್ಟಣದಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಅವರ ಮೇಲೆ ನಡೆದಿದ್ದ ಮಾರಣಾಂತಿಕ ಹಲ್ಲೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಮಾಜಾಳಿ ಚೆಕ್ ಪೋಸ್ಟ್ ಬಳಿ ಬಂಧಿಸಲಾಗಿದ್ದು,ಅವರ ಫೋಟೋ ಈಗ ವೈರಲ್ ಆಗಿದೆ. ನಾಯಕ ಹತ್ಯೆಯ ಸಂಚಿನ ಕುರಿತು ದುಷ್ಕರ್ಮಿಗಳ ಹಿಂದೆ ಬಿದ್ದಿದ್ದ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ನೇತೃತ್ವದ ತಂಡ ನಾಪತ್ತೆಯಾಗಿರುವ ಇನ್ನಿರ್ವರ ಪತ್ತೆಗೆ ಮುಂದಾಗಿದೆ.

ಹತ್ಯೆಗೆ ಸುಪಾರಿ ನೀಡಿದವನಿಗೆ ಸರ್ಚ್!
ಗೋಪಾಲಕೃಷ್ಣ ನಾಯಕ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದವರನ್ನು ಪ್ರಕರಣ ನಡೆದ ಎರಡೇ ಗಂಟೆಯಲ್ಲಿ ಪೊಲೀಸರು ಬಂಧಿಸಿದ್ದು, ಮತ್ತಿರ್ವರಿಗೆ ಶೋಧ ಕಾರ್ಯ ಆರಂಭಿಸಿದ್ದಾರೆ,ಆದರೆ ಹತ್ಯೆಗೆ ಸುಪಾರಿ ನೀಡಿದವನಿಗೂ ಬಲೆ ಬಿಸಿರುವ ಪೊಲೀಸರು ಕೆಲವೇ ಗಂಟೆಗಳಲ್ಲಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಟ್ಟಾರೆ ಇಂತಹ ಕುಕೃತ್ಯ ಎಸಗಿದವರಿಗೆ ಪೊಲೀಸರು ಸರಿಯಾದ ಶಿಕ್ಷೆ ನೀಡಲಿ ಎನ್ನುವುದು ಸಾರ್ವಜನಿಕರ ಅಗ್ರಹವಾಗಿದೆ.


