Spread the love

ಅಂಕೋಲಾ:  ತಾಲೂಕಿನ ಜೈಹಿಂದ ಮೈದಾನದಲ್ಲಿ ನಡೆಯುತ್ತಿರುವ ಅಂಕೋಲಾ ಉತ್ಸವದಲ್ಲಿ ಶನಿವಾರ ರಾತ್ರಿ ಖ್ಯಾತ ಗಾಯಕ ಕುನಾಲ್ ಗಾಂಜಾವಾಲಾ ಗಾಯನ ನೆರೆದಿದ್ದ  ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ಹೌದು… ಅಂಕೋಲಾ ತಾಲೂಕಿನ ಜೈಹಿಂದ್ ಮೈದಾನದಲ್ಲಿ ಅಂಕೋಲಾ ಕಾರವಾರ ವಿಧಾನಸಭಾ ಕ್ಷೇತ್ರದ ಮಾಜಿ  ಶಾಸಕಿ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್ ನಾಯ್ಕ ಅವರ ಗೌರವಾಧ್ಯಕ್ಷತೆಯಲ್ಲಿ ಸಂಗಾತಿ ರಂಗಭೂಮಿ (ರಿ) ಇವರ ಆಶ್ರಯದಲ್ಲಿ ನಡೆಯುತ್ತಿರುವ 7 ನೇ ವರ್ಷದ ಅಂಕೋಲಾ ಉತ್ಸವ ಕಾರ್ಯಕ್ರಮದ ನಿಮಿತ್ತ ಆಗಮಿಸಿದ ಬಾಲಿವುಡ್,ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ಚಲನಚಿತ್ರಗಳ ಅದ್ಭುತ ಕಂಠದಾನದಿಂದ ಗುರುತಿಸಿಕೊಂಡಿರುವ ಖ್ಯಾತ ಹಿನ್ನಲೆ ಗಾಯಕ ಕುನಾಲ್ ಗಾಂಜಾವಾಲಾ ರ ಡ್ರೀಮ್ಸ್ ಎಂಟರ್ಟೈನ್ಮೆಂಟ್ ಮುಂಬಯಿ ಹಾಗೂ ಬೆಂಗಳೂರು ತಂಡದವರಿಂದ ಸಂಗೀತ ಮತ್ತು ನ್ರತ್ಯ ಸಂಜೆ ಕಾರ್ಯಕ್ರಮದಲ್ಲಿ ಕನ್ನಡ,ಹಿಂದಿ ಹಾಗೂ ಹಲವಾರು ಬಾಷೆಗಳ ಹಾಡುಗಳನ್ನು ಅದ್ಭುತವಾಗಿ ಹಾಡಿ ನೆರೆದಿರುವ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿದರು.

ಕಾರ್ಯಕ್ರಮಕ್ಕೆ ಕುಟುಂಬ ಸಮೇತ ಆಗಮಿಸಿದ ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ ಪತ್ರಕರ್ತ ಕೆ.ರಮೇಶ ಅವರ ಸಾರಥ್ಯದಲ್ಲಿ ನಡೆಯುತ್ತಿರುವ ಅಂಕೋಲಾ ಉತ್ಸವ ಈ ಹಿಂದಿನಿಂದಲೂ ಅದ್ಬುತವಾಗಿ ಜನಮನ್ನಣೆಯನ್ನು ಗಳಿಸಿದೆ. ಮುಂದಿನ ದಿನಗಳಲ್ಲಿ ಈ ಉತ್ಸವ ಮತ್ತಷ್ಟು ಮೆರಗನ್ನು ನೀಡಲಿದೆ. ಈ ಉತ್ಸವಕ್ಕೆ ನನ್ನ ಬೆಂಬಲ ಸದಾ ಇದೆ ಎಂದರು. ಈ ಸಂದರ್ಭದಲ್ಲಿ  ಗಾಂಜಾವಾಲಾ ಹಾಡಿಗೆ ಸ್ಟೆಪ್ಸ್ ಹಾಕುವ ಮೂಲಕ ಎಲ್ಲರೊಂದಿಗೆ ಸಂಭ್ರಮ ಹಂಚಿಕೊಂಡರು.

Leave a Reply

Your email address will not be published. Required fields are marked *